ವಿದ್ಯಾರ್ಥಿಗಳಿಗೆ ರೋಟರಿ ಮಾಹಿತಿ ಕಾರ್ಯಾಗಾರ

| Published : Apr 18 2025, 12:34 AM IST

ಸಾರಾಂಶ

ಇತ್ತೀಚೆಗೆ ರೋಟರಿ ಸಮುದಾಯ ದಳ ಕೊರವಡಿ ಆಯೋಜಿಸಿರುವ ‘ಎಸ್.ಎಸ್.ಎಲ್.ಸಿ ಆಯ್ತು ಮುಂದೇನು’ ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಯಡಾಡಿ-ಮತ್ಯಾಡಿಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕೃಷಿಯಲ್ಲೂ ನಾವು ಲಾಭ ಪಡೆಯಬಹುದು, ಜೀವನವನ್ನೂ ರೂಪಿಸಿಕೊಳ್ಳಬಹುದು, ಬೇರೆ ಬೇರೆ ಕೋರ್ಸ್‌ಗಳ ಆಯ್ಕೆ ಹೇಗಿರಬೇಕು ಎಂಬುದರ ಬಗ್ಗೆ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಯಡಾಡಿ-ಮತ್ಯಾಡಿಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾಹಿತಿ ನೀಡಿದರು.

ಇತ್ತೀಚಿಗೆ ರೋಟರಿ ಸಮುದಾಯ ದಳ ಕೊರವಡಿ ಆಯೋಜಿಸಿರುವ ‘ಎಸ್.ಎಸ್.ಎಲ್.ಸಿ ಆಯ್ತು ಮುಂದೇನು’ ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕೋಟೇಶ್ವರ ರೋಟರಿಯ ಅಧ್ಯಕ್ಷ ಸತೀಶ್ ಎಂ.ನಾಯಕ್, ಸಭಾಪತಿ ಆನಂದ್ ಆಚಾರ್ಯ ವಕ್ವಾಡಿ, ರೋಟರಿ ಕ್ಲಬ್ ಕೋಟೇಶ್ವರ ಕಾರ್ಯದರ್ಶಿ ಸುಭಾಶ್ಚಂದ್ರ ಶೆಟ್ಟಿ, ಕೊರವಡಿ ರೋಟರಿ ಸಮುದಾಯ ದಳದ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ,ಪ್ರಭಾಕರ್ ಕುಂಭಾಶಿ ಹಾಗೂ ರೋಟರಿ ಸಮುದಾಯ ದಳದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಮುದಾಯದಳ ಕೊರವಡಿ ಅಧ್ಯಕ್ಷ ಸುರೇಶ್ ವಿಠ್ಠಲವಾಡಿ ವಹಿಸಿದ್ದರು. ಈ ಸಂದರ್ಭದಲ್ಲಿ ಯಡಾಡಿ-ಮತ್ಯಾಡಿ ಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಡಾ. ರಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಸಮುದಾಯದಳ ಕೊರವಡಿ ಕಾರ್ಯದರ್ಶಿ ಸುದೀಪ್ ಕೋಟೇಶ್ವರ ವಾಚಿಸಿದರು. ಜಾನಪದ ಗಾಯಕ ಗಣೇಶ್ ಗಂಗೊಳ್ಳಿ ಸ್ವಾಗತಿಸಿದರು, ಗಾಯತ್ರಿ ಹತ್ವಾರ್ ಪ್ರಾರ್ಥಿಸಿದರು. ಸಮುದಾಯದಳದ ಸದಸ್ಯ ಚಂದ್ರ ಇಂಬಾಳಿ ವಂದಿಸಿದರು, ಸುಪ್ರೀತಾ ಪುರಾಣಿಕ್ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.