ಸಾರಾಂಶ
ರೋಟರಿ ಮತ್ತು ಇನ್ನರವೀಲ್ ಕ್ಲಬ್ ಬ್ಯಾಡಗಿ ಘಟಕಗಳ 2025- 26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬ್ಯಾಡಗಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಬ್ಯಾಡಗಿ: ರೋಟರಿ ಮತ್ತು ಇನ್ನರವೀಲ್ ಕ್ಲಬ್ ಬ್ಯಾಡಗಿ ಘಟಕಗಳ 2025- 26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ವೇಳೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಗವರ್ನರ್ ಅರುಣ ಭಂಡಾರ ಅವರು, ಗ್ಲೋಬಲ್ ಗ್ರ್ಯಾಂಟ್ ಪಡೆದು ಪಟ್ಟಣದಲ್ಲಿ ದೊಡ್ಡ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ರೋಟರಿ ಫೌಂಡೇಶನ್ ನೀಡಲಿದೆ. ಇನ್ನುಳಿದ ಅರ್ಧ ಮೊತ್ತಕ್ಕೆ ಸ್ಥಳೀಯ ಉದ್ಯಮಿಗಳ ಸಹಾಯ ಪಡೆಯಿರಿ ಎಂದರು.ಅಧ್ಯಕ್ಷ ಎಸ್.ಎಂ. ಬೂದಿಹಾಳಮಠ ಅವರ ಅವಧಿಯಲ್ಲಿ ರೋಟರಿ ಫೌಂಡೇಶನ್ ಡೊನೇಶನ್ ನೀಡಿ ಪಾಲ್ ಹ್ಯಾರಿಸ್ ಫೆಲೋ ಗೌರವ ಪಡೆದಿದ್ದು, ಅಭೂತಪೂರ್ವ ಬೆಳವಣಿಗೆ ಎಂದು ಶ್ಲಾಘಿಸಿದರು. ಅಲ್ಲದೇ ಗೌರವ ಸರ್ಟಿಫಿಕೇಟ್ ಮತ್ತು ಪಿನ್‌ಗಳನ್ನು ವಿತರಿಸಿದರು.
ರೋಟರಿ ನೂತನ ಅಧ್ಯಕ್ಷರಾಗಿ ಅನಿಲಕುಮಾರ ಬೊಡ್ಡಪಾಟಿ, ಕಾರ್ಯದರ್ಶಿಯಾಗಿ ನಿರಂಜನ ಶೆಟ್ಟಿಹಳ್ಳಿ ಇನ್ನರವೀಲ್ ಅಧ್ಯಕ್ಷರಾಗಿ ಪ್ರತಿಭಾ ಮೇಲಗಿರಿ ಕಾರ್ಯದರ್ಶಿಯಾಗಿ ಲಕ್ಷ್ಮೀ ಉಪ್ಪಾರ ಪ್ರಮಾಣವಚನ ಸ್ವೀಕರಿಸಿದರು, ಹಾವೇರಿಯ ವಿರಾಜ ಕೊಟಕ್ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಸಿಕೊಟ್ಟರು.ಸಮಾರಂಭದಲ್ಲಿ ವಿಶೇಷವಾಗಿ ಪಿಎಸ್ಐ ಭಾರತಿ ಕುರಿ ಮಹಿಳಾ ಸಾಹಿತಿ ಶಕುಂತಲಾ ದಾಳೇರ ರೈಲ್ವೆ ಸ್ಟೇಷನ್ ಮಾಸ್ಟರ್ ಬಿ.ಕೆ. ಮಾಧವಾ ನಿವೃತ್ತ ಮುಖ್ಯೋಪಾಧ್ಯಾಯ ಎನ್.ಎಂ. ಉಮಾಪತಿ ಸಮಾಜಸೇವಕ ಪುಟ್ಟಪ್ಪ ಅಗಡಿ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಕೆರೂಡಿ, ಪ್ರಕಾಶ ಛತ್ರದ, ಸಿದ್ಧಲಿಂಗೇಶ ಮಾಳೇನಹಳ್ಳಿ, ರಮೇಶ ಕಲ್ಯಾಣಿ ಅವರು ನೂತನ ರೋಟರಿ ಸದಸ್ಯತ್ವ ಪ್ರಮಾಣಪತ್ರ ಸ್ವೀಕರಿಸಿದರು.
ರಾಣಿಬೆನ್ನೂರಿನ ಡಾ. ಬಸವರಾಜ್ ಕೆಲಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ದಯಾನಂದ ಯಡ್ರಾಮಿ, ಬಸವರಾಜ ಸುಂಕಾಪುರ, ದಾಕ್ಷಾಯಿಣಿ ಹರಮಗಟ್ಟಿ, ಡಾ. ಎ.ಎಂ. ಸೌದಾಗರ ಇತರರಿದ್ದರು. ಮಂಜುನಾಥ ಉಪ್ಪಾರ ಸ್ವಾಗತಿಸಿದರು. ಮಾಲತೇಶ ಅರಳಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾರಾಣಿ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಆನಂದಗೌಡ ಸೊರಟೂರ ವಂದಿಸಿದರು.