ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಸಂರಕ್ಷಣೆಯ ಪ್ರಚಾರದ ಮೂಲಕ ಮಾರುಕಟ್ಟೆ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಎಲ್ಲಾ ರೀತಿಯ ಪ್ರಚಾರವನ್ನೂ ನಂಬುವ ಬದಲಿಗೆ ಸೂಕ್ತ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ವೈದ್ಯೆ ಡಾ. ಕೆ.ಟಿ.ರಾಜಶ್ರೀ ಸಲಹೆ ನೀಡಿದ್ದಾರೆ.ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆ ಮತ್ತು ಹಳೇ ಆರೋಗ್ಯ ಪದ್ಧತಿಯನ್ನೇ ನಂಬಿಕೊಂಡಿರಬಾರದು. ಆರೋಗ್ಯ ಪದ್ಧತಿ ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂದರು.

ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರೋಟರಿ ಸಂಸ್ಥೆಯಿಂದ ಶ್ರವಣ ಸಮಸ್ಯೆಯಿರುವವರಿಗೆ ದಿ ಗಿಪ್ಠ್ ಆಫ್ ಸೌಂಡ್ ಎಂಬ .ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಶ್ರವ್ಯ ಸಲಕರಣೆಯನ್ನು ದಾನಿಗಳ ಸಹಾಯದಿಂದ ನೀಡಲಾಗುತ್ತದೆ. ಅಂತೆಯೇ, ದೇಶದಲ್ಲಿ ಹೆಚ್ಚುಗಾತ್ತಿರುವ ಮಕ್ಕಳಲ್ಲಿನ ಹೖದ್ಗೋಗ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಟಚ್ಚಿಂಗ್ ದಿ ಲಿಟಲ್ ಹಾಟ್ಸ್೯ ಎಂಬ ಯೋಜನೆ ಜಾರಿಗೊಳ್ಳಲಿದೆ. ಅಗತ್ಯವುಳ್ಳ ಮಕ್ಕಳಿಗೆ ರೋಟರಿ ವತಿಯಿಂದ ಉಚಿತವಾಗಿ ಹೖದ್ರೋಗ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರತೀ ವರ್ಷ ರೋಟರಿ ಹಿಲ್ಸ್ ವತಿಯಿಂದ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದ್ದು, ಈ ಬಾರಿಯೂ ಮಡಿಕೇರಿ, ರೋಟರಿ ವುಡ್ಸ್ ಮತ್ತು ಇನ್ನರ್ ವೀಲ್ ಸಂಸ್ತೆಗಳ ಸದಸ್ಯರು ಮತ್ತು ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಪಿ.ಆರ್.ರಾಜೇಶ್, ಕಾರ್ಯದರ್ಶಿ ಡಾ.ಚೇತನ್ ಶೆಟ್ಟಿ ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ನಮಿತಾರೈ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ತಜ್ಞ ವೈದ್ಯರಾದ ಡಾ. ಸಿ.ಆರ್. ಪ್ರಶಾಂತ್, ಡಾ. ರಾಜೇಶ್ವರಿ, ಡಾ. ಚಂದ್ರಶೇಖರ್, ಡಾ. ರಾಕೇಶ್, ಡಾ.ಶುಭಾ ಕೆ.ಜಿ. ಎಸ್.ಎಂ., ಚೇತನ್, ಡಾ.ರಾಜಶ್ರೀ ಡಾ. ನವೀನ್, ಡಾ.ಜಿಶ್ಮಾ ತಪಾಸಣೆ ಕೈಗೊಂಡರು.