ಸಾರಾಂಶ
ವಿಜಯಪುರ: ರೋಟರಿ ಸಂಸ್ಥೆ ಕಳೆದ ೫೦ ವರ್ಷಗಳಿಂದ ಆರೋಗ್ಯ, ಶಿಕ್ಷಣ ಮತ್ತಿತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ನೊಂದವರ ದಾರಿದೀಪ ಎಂದು ಜಿಲ್ಲಾ ಗೌರ್ನರ್ ವಿ.ಶ್ರೀನಿವಾಸ್ ಮೂರ್ತಿ ತಿಳಿಸಿದರು. ಇಲ್ಲಿನ ವಿಜಯಪುರ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಜಿಲ್ಲಾ ಗೌರ್ನರ್ ಎಸ್.ನಾಗೇಂದ್ರ ಮಾತನಾಡಿ, ವಿಜಯಪುರ ರೋಟರಿ ಸಂಸ್ಥೆ ಐದು ವಿಷಯಗಳಿಗೆ ಹೆಸರುವಾಸಿಯಾಗಿದೆ. ಸರ್ವಿಸ್, ಫೆಲೋಶಿಪ್, ಡೈವರ್ಸಿಟಿ, ಇಂಟಿಗ್ರಿಟಿ, ಲೀಡರ್‌ಶಿಪ್ ನಿರ್ಮಿಸಿಕೊಂಡು ಬಂದಿದೆ. ನೇತ್ರ ತಪಾಸಣಾ ಶಿಬಿರಗಳು, ಸರ್ಕಾರಿ ಶಾಲೆಗಳಿಗೆ ಅವಶ್ಯಕವಿರುವ ಪೀಠೋಪಕರಣ ಹಾಗೂ ಕಲಿಕೋಪಕರಣಗಳನ್ನು ನೀಡಿದೆ. ಅಂಗನವಾಡಿ ಕಟ್ಟಡಗಳ ಪುನರುದ್ಧಾರಗೊಳಿಸಿದೆ. ಐವತ್ತು ವರ್ಷಗಳ ಹಿಂದೆ ಸಂಸ್ಥಾಪಕ ಸದಸ್ಯರಾಗಿ ಬಂದ ಸದಸ್ಯರು, ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಹಾಗೂ ಇಂದಿಗೂ ಸದಸ್ಯರಾಗಿಯೇ ಮುಂದುವರೆಯುತ್ತಿರುವುದು ಇಲ್ಲಿನ ಸ್ನೇಹಭಾವದ ಪ್ರತೀಕವಾಗಿದೆ ಎಂದು ತಿಳಿಸಿದರು.ರೋಟರಿ ಸಂಸ್ಥೆ ಅಧ್ಯಕ್ಷೆ ಎ.ಎಂ ಮಂಜುಳಾ, ಕಾರ್ಯದರ್ಶಿ ಗಿರಿಜಾಂಬಾ ರುದ್ರೇಶ್ ಮೂರ್ತಿ, ಸುವರ್ಣ ಮಹೋತ್ಸವ ಯೋಜನಾ ಅಧ್ಯಕ್ಷ ಬಸವರಾಜು, ಸಂಚಾಲಕ ಶೈಲೇಂದ್ರಕುಮಾರ್, ಸಂಘ ಸೇವಾ ನಿರ್ದೇಶಕ ವಿ.ಎಸ್. ರವಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನವ್ಯ ನವೀನ್, ಜಿಲ್ಲಾ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಆಶಾ ಶೈಲೇಂದ್ರ, ರೋಟರಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಸಿದ್ದರಾಜು, ಸಂಘಟನ ಕಾರ್ಯದರ್ಶಿ ಪುನೀತ್ ಕುಮಾರ್ ಮಹೇಶ್, ಕಿರಣ್, ಸುರೇಶ್, ನಿಯೋಜಿತ ಜಿಲ್ಲಾ ಪಾಲಕ ಬೆಂಗಳೂರಿನ ಮಹದೇವ ಪ್ರಸಾದ್, ಇಂದಿರಾನಗರ ಸಂಸ್ಥೆಯ ಜಗದೀಶ್, ರೋಟರಿ ಉದ್ಯೋಗ್ ರೇಣುಕೇಶ್ವರಸ್ವಾಮಿ, ಅಸಿಸ್ಟೆಂಟ್ ಗವರ್ನರ್ ಡಾ.ಮುರಳಿ ಕೃಷ್ಣ, ಹೈಗ್ರೌಂಡ್ಸ್‌ನ ಗೋಪೀನಾಥ್, ಜಿಲ್ಲಾ ಕಾರ್ಯದರ್ಶಿಗಳಾದ ವಿನೋದ್ ಕುಮಾರ್, ವಿಮಲ ಮಲ್ಲಪ್ಪ ಉಪಸ್ಥಿತರಿದ್ದರು.