ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ರೋಟರಿ ಪಾತ್ರ ದೊಡ್ಡದು

| Published : Jul 24 2025, 12:45 AM IST

ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ರೋಟರಿ ಪಾತ್ರ ದೊಡ್ಡದು
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಸ್ಥ ಸಮಾಜ ಹಾಗೂ ಪ್ರತಿಯೊಬ್ಬರಲ್ಲೂ ಸ್ನೇಹ ಮನೋಭಾವ ಮೂಡಿಸುವ ಕಾರ್ಯದಲ್ಲಿ ರೋಟರಿ ಪಾತ್ರ ದೊಡ್ಡದು ಎಂದು ಜಿಲ್ಲಾ ರೋಟರಿ ಸಂಸ್ಥಾಪನಾ ಸಮಿತಿ ನಿರ್ದೇಶಕ ಹಾಗೂ ರೋಟರಿ ಮಾಜಿ ಜಿಲ್ಲಾ ಗೌರ್ನರ್ ಡಿ.ಎಸ್. ರವಿ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ತಂಡದ ೧೧ನೇ ಅಧ್ಯಕ್ಷರಾಗಿ ಗಂಗಾಧರ್ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ಅವರು ತಮ್ಮ ಅಧಿಕಾರ ಸ್ವೀಕಾರಕ್ಕೂ ಮೊದಲೇ ೧೦ ಸಾವಿರ ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಕಾರ್ಯಕ್ರಮ ಮಾಡಿದ್ದಾರೆ. ಆರಂಭದಲ್ಲಿ ಒಳ್ಳೆಯ ಕಾರ್ಯಕ್ರಮ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸ್ವಸ್ಥ ಸಮಾಜ ಹಾಗೂ ಪ್ರತಿಯೊಬ್ಬರಲ್ಲೂ ಸ್ನೇಹ ಮನೋಭಾವ ಮೂಡಿಸುವ ಕಾರ್ಯದಲ್ಲಿ ರೋಟರಿ ಪಾತ್ರ ದೊಡ್ಡದು ಎಂದು ಜಿಲ್ಲಾ ರೋಟರಿ ಸಂಸ್ಥಾಪನಾ ಸಮಿತಿ ನಿರ್ದೇಶಕ ಹಾಗೂ ರೋಟರಿ ಮಾಜಿ ಜಿಲ್ಲಾ ಗೌರ್ನರ್ ಡಿ.ಎಸ್. ರವಿ ಅಭಿಪ್ರಾಯಪಟ್ಟರು.

ನಗರದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಡೆದ ೨೦೨೫- ೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೋಟರಿ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರತಿಯೊಬ್ಬರಲ್ಲೂ ಸ್ನೇಹ ಮನೋಭಾವನೆ ಮೂಡಿಸುವ ಕಾರ್ಯದಲ್ಲಿ ರೋಟರಿ ಸಂಸ್ಥೆ ತೊಡಗಿಸಿಕೊಂಡು ಬರುತ್ತಿದೆ. ಜೊತೆಗೆ ಇಡೀ ವಿಶ್ವದ ತಲೆ ನೋವಾಗಿದ್ದ ಪೋಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿಯ ಪಾತ್ರ ಅತೀ ದೊಡ್ಡದು. ಪರಿಸರ ಸಮತೋಲನಕ್ಕಾಗಿ ರೋಟರಿ ಪ್ರತಿ ವರ್ಷ ಹೊಸ ಯೋಜನೆಗಳನ್ನು ಹಾಕಿಕೊಂಡು ಪರಿಸರ ಸಂರಕ್ಷಣೆ ಮಾಡಲಾಗುತ್ತಿದೆ. ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಹಂತಗಳಲ್ಲಿ ರೋಟರಿ ಉಪ ಶಾಖೆಗಳನ್ನು ತೆರೆಯುವ ಮೂಲಕ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಪರಿಸರ, ಸಂಚಾರ ನಿಯಮ, ಗುರು ಹಿರಿಯರನ್ನು ಗೌರವಿಸುವ ಗುಣ ಹೀಗೆ ಎಲ್ಲವನ್ನೂ ತಿಳಿಸಿಕೊಡುವ ಅವಶ್ಯಕತೆ ಇದೆ. ನಮ್ಮ ಪೂರ್ವಿಕರು ಆರಂಭಿಸಿದ ಜಾನಪದ ಕಲೆ ಇಂದು ನಶಿಸುತ್ತಿದ್ದು, ಯುವ ಸಮುದಾಯಕ್ಕೆ ಮತ್ತೊಮ್ಮ ಅದರ ಬಗ್ಗೆ ತಿಳಿಸಿಕೊಡುವ ಅವಶ್ಯಕತೆ ಇದೆ. ದೇಶದಲ್ಲಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮ ಯುವ ಸಮುದಾಯವನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಬೇಕು ಎಂದು ಹೇಳಿದರು.

ರೋಟರಿ ಝೋನ್ ೯ರ ಸಹಾಯಕ ಗೌರ್ನರ್ ಮಂಜುನಾಥ್ ಜಿ.ಎನ್. ಮಾತನಾಡಿ, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ತಂಡದ ೧೧ನೇ ಅಧ್ಯಕ್ಷರಾಗಿ ಗಂಗಾಧರ್ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ಅವರು ತಮ್ಮ ಅಧಿಕಾರ ಸ್ವೀಕಾರಕ್ಕೂ ಮೊದಲೇ ೧೦ ಸಾವಿರ ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಕಾರ್ಯಕ್ರಮ ಮಾಡಿದ್ದಾರೆ. ಆರಂಭದಲ್ಲಿ ಒಳ್ಳೆಯ ಕಾರ್ಯಕ್ರಮ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ರೋಟರಿ ಝೋನ್ ೯ರ ವಲಯ ಸೇನಾನಿ ಮಮತಾ ಪಾಟೀಲ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಹಲವು ಕ್ಲಬ್‌ಗಳು ಇದ್ದು, ರೋಟರಿ ರಾಯಲ್ ಸಂಸ್ಥೆ ಯುವಕರನ್ನೇ ಹೆಚ್ಚು ಒಳಗೊಂಡಿರುವ ಸಂಸ್ಥೆಯಾಗಿದೆ. ಹಾಗಾಗಿ ಈ ಕ್ಲಬ್‌ನ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಒಳ್ಳೆಯ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಟೈಮ್ಸ್ ಗಂಗಾಧರ್ ಬಿ.ಕೆ., ಸಮಾಜ ನಮಗೆ ಒಳಿತು ಮಾಡಿದಾಗ ಪುನಃ ಸಮಾಜಕ್ಕೆ ನಾವೇನಾದರೂ ಕೊಡುಗೆ ನೀಡಬೇಕಾಗಿರುವುದು ಎಲ್ಲರ ಹೊಣೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಘಟನೆಯಾಗಿರುವ ರೋಟರಿ ಸಂಸ್ಥೆಯ ಮೂಲಕ ಒಂದಿಷ್ಟು ಕೆಲಸ ಮಾಡುವ ಹಂಬಲ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಅಧಿಕಾರ ಹಸ್ತಾಂತರ:

ಇದೇ ವೇಳೆ ಕಾರ್ಯಕ್ರಮದಲ್ಲಿ ಈ ಹಿಂದೆ ೨೦೨೪- ೨೫ನೇ ಸಾಲಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಯು.ವಿ. ಸಚಿನ್ ಅವರು ೨೦೨೫- ೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಟೈಮ್ಸ್ ಗಂಗಾಧರ್ ಬಿ.ಕೆ. ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ನೂತನ ಕಾರ್ಯದರ್ಶಿಯಾಗಿ ರವಿ ಕುಮಾರ್ ಪಿ., ಖಜಾಂಚಿಯಾಗಿ ದಿಲೀಪ್ ಕುಮಾರ್ ಎಚ್.ಕೆ. ಅಧಿಕಾರ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ವಿಜೇತೆ ಸ್ಫೂರ್ತಿ ಎಸ್.ಆರ್. ಅವರನ್ನು ಸನ್ಮಾನಿಸಲಾಯಿತು.

ರೋಟರಿ ರಾಯಲ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಆರ್.ಟಿ. ಪುನೀತ್, ಪದಾಧಿಕಾರಿಗಳಾದ ಡಾ. ವಿಕ್ರಂ ಬಿ., ಕೆ.ಸಿ. ನವೀನ್ ಕುಮಾರ್, ಯೋಗೇಶ್ ಎಸ್., ಮಹೇಶ್, ಸಹನಾ ಸಚಿನ್ ಮುಂತಾದವರು ಹಾಜರಿದ್ದರು.