ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಜಗತ್ತಿನ ಅತ್ಯಂತ ಹೆಚ್ಚು ಜನಸೇವಾ ಕಾರ್ಯಗಳನ್ನು ಮಾಡುವ ರೋಟರಿ ಸಂಸ್ಥೆಯಿಂದ ಹೆಚ್ಚು ಜನೋಪಯೋಗಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವ್ಯಾಪ್ತಿಗೆ ನಾಲ್ಕು ಜಿಲ್ಲೆಗಳಿಂದ 94 ರೋಟರಿ ಸಂಸ್ಥೆಗಳು ಬರಲಿದ್ದು, ಅವುಗಳ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣಾ ಶಿಬಿರ, ವಿದ್ಯಾರ್ಥಿ ವೇತನ, ಶಾಲೆಗಳ ಅಭಿವೃದ್ಧಿ, ಪರಿಸರ ಜಾಗೃತಿ, ಕುಡಿಯುವ ನೀರಿನ ವ್ಯವಸ್ತೆ ಈಗ ಹೊಸದಾಗಿ ತಾಯಿಯ ಹಾಲು ಶೇಖರಣೆ ಮೂಲಕ ಹಾಲು ಸಿಗದ ಇತರ ಮಕ್ಕಳ ಹಾರೈಕೆಯನ್ನು ಮಾಡಲಾಯಗುತ್ತಿದೆ. ಈ ಕಾರ್ಯದ ಮೂಲಕ ಮಂಗಳೂರಿನಲ್ಲಿ 18 ಮಕ್ಕಳನ್ನು ಉಳಿಸಲಾಗಿದೆ, ಮುಂದೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಕಾರ್ಯಕ್ರಮ ಮಾಡಲಾಗುವುದು ಎಂದರು.
ಚಾಮರಾಜಗನಗರದಲ್ಲಿ ರೋಟರಿ ಸಂಸ್ಥೆ ಉತ್ತಮ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಇಲ್ಲಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಡಯಾಲಿಸಸ್‌ನಂತಹ ಜನೋಪಯೋಗಿ ಸೇವೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕಣ್ಣಿನ ಆಸ್ಪತ್ರೆ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.ಜಿಲ್ಲೆಯ ಜನರ ಆಶೋತ್ತರಗಳಿಗೆ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ ಉಚಿತ ಕಣ್ಣಿನ ತಪಾಸಣಾ ಶಿಬಿರ ಸೇರಿದಂತೆ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಈ ಜನರದಲ್ಲಿ ಅರಿವು ಮೂಡಿಸುವ ಜೊತೆಗೆ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.
ನಮ್ಮ ವ್ಯಾಪ್ತಿಯಲ್ಲಿ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇವುಗಳಲ್ಲಿ ಆರೋಗ್ಯ, ಪರಿಸರ ಸಂರಕ್ಷಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶುದ್ದ ಕುಡಿಯುವ ನೀರು, ಸಾಧಕರನ್ನು ಸನ್ಮಾನಿಸುವ ಕಾರ್ಯಗಳನ್ನು ಮಾಡಲಾಗಿದ್ದು ಇದು ನಿರಂತರವಾಗಿ ನಡೆಸಲಾಗುವುದು ಎಂದರು.ಸೆ, 6 ಸ್ಟ್ಯಾಂಡ್ ಅಫ್ ಕಾಮಿಡಿ:
ರೋಟರಿ ಸಿಲ್ಕ್ ಸಿಟಿ ವತಿಯಿಂದ ಮನೋರಂಜನೆಯೊಂದಿಗೆ ಸೇವಾನಿಧಿ ಸಂಗ್ರಹಣೆ ಅಡಿಯಲ್ಲಿ ಸೆ. 6ರಂದು ಜೀ ಟಿವಿಯ ಸ್ಟ್ಯಾಂಡ್ ಅಫ್ ಕಾಮಿಡಿ ಖ್ಯಾತಿಯ ರಾಘವೇಂದ್ರ ಅಚಾರ್ಯ ಅವರಿಂದ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸ್ಟ್ಯಾಂಡ್ ಆಫ್ ಕಾಮಿಡಿ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು ಒಬ್ಬರಿಗೆ 350 ರು. ಟಿಕೇಟ್ ನಿಗದಿಪಡಿಸಲಾಗಿದೆ ಎಂದು ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಹೆಚ್.ಬಿ. ಶಮಿತ್‌ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಗವರ್ನರ್ ದೊಡ್ಡರಾಯಪೇಟೆ ಗಿರೀಶ್, ಜಿಲ್ಲಾ ಕಾಯದರ್ಶಿ ವೆಂಕಟೇಶ್, ಡಿ.ಪಿ.ವಿಶ್ವಾಸ್ ಇದ್ದರು.