ದೇಶವನ್ನು ಸಮೃದ್ಧಗೊಳಿಸುವಲ್ಲಿ ರೋಟರಿ ಪಾತ್ರ ಮಹತ್ವದ್ದಾಗಿದೆ: ಹೆಬ್ಬಾರ್

| Published : Sep 18 2024, 01:55 AM IST

ದೇಶವನ್ನು ಸಮೃದ್ಧಗೊಳಿಸುವಲ್ಲಿ ರೋಟರಿ ಪಾತ್ರ ಮಹತ್ವದ್ದಾಗಿದೆ: ಹೆಬ್ಬಾರ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಇದರ ರೋಟರಿ ಸಮುದಾಯದಳಗಳ ಜಿಲ್ಲಾ ಅಧಿವೇಶನ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಮ್ಮ ಸಂಸ್ಕೃತಿಯ ಗಟ್ಟಿಬೇರುಗಳು ಇರುವುದು ಹಳ್ಳಿಗಳಲ್ಲಿ. ಹಳ್ಳಿಯ ಒಗ್ಗಟ್ಟು, ಸಂಪ್ರದಾಯ, ಪರಂಪರೆ, ಕೃಷಿ ಸಂಸ್ಕೃತಿ, ಕುಲಕಸುಬುಗಳನ್ನು ಉಳಿಸಿ ಬೆಳೆಸುವುದು ರೋಟರಿ ಸಮುದಾಯದಳದ ಕಾರ್ಯವಾಗಿದೆ. ಸಮುದಾಯದಳದ ವ್ಯಾಪ್ತಿ, ಶಕ್ತಿ ದೊಡ್ಡದು. ಅಂತಾರಾಷ್ಟ್ರೀಯ ರೋಟರಿಯ ಶಕ್ತಿ ಸಮುದಾಯದಳದ ಹಿಂದೆ ಇದೆ. ದೇಶವನ್ನು ಸಮೃದ್ಧಗೊಳಿಸುವಲ್ಲಿ ರೋಟರಿ ಸಮುದಾಯದಳಗಳ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಪತ್ರಕರ್ತ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.ಅವರು ಭಾನುವಾರ ಉಡುಪಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಇದರ ರೋಟರಿ ಸಮುದಾಯದಳಗಳ ಜಿಲ್ಲಾ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ರೋಟರಿ ಜಿಲ್ಲಾ ಗವರ್ನರ್ ಸಿಎ ದೇವಾನಂದ್ ಅಧಿವೇಶನ ಉದ್ಘಾಟಿಸಿ, ರೋಟರಿಯ ಮಾರ್ಗದರ್ಶನದಲ್ಲಿ ಸಮುದಾಯ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರೋಟರಿ ಸಮುದಾಯದಳಗಳ ಪದಾಧಿಕಾರಿಗಳಿಗೆ ಯೋಗ್ಯ ತರಬೇತಿಯನ್ನು ನೀಡಿ ಘಟಕಗಳನ್ನು ಬಲಗೊಳಿಸುವ ಉದ್ದೇಶದಿಂದ ಜಿಲ್ಲಾ ಅಧಿವೇಶನ ನಡೆಯುತ್ತಿದೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕರೆಯಿತ್ತರು.ಅತಿಥಿಗಳಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಲೀಲಾಬಾಯಿ ಭಟ್, ವಲಯ ೪ರ ಸಹಾಯಕ ಗವರ್ನರ್ ಜಗನ್ನಾಥ್ ಕೋಟೆ, ಆರ್‌ಸಿಸಿ ಜಿಲ್ಲಾ ವೈಸ್ ಚೇರ್‍ಮನ್ ಶ್ರೀಹರ್ಷ ಕೊಪ್ಪ ಶುಭ ಕೋರಿದರು.ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಐಸಿರಿ ಪರ್ಕಳ ಅಧ್ಯಕ್ಷ ಸುನಿಲ್ ಕುಮಾರ್ ವಹಿಸಿದ್ದರು.

ಈ ಸಂದರ್ಭ ೫೮ ಕೆ.ಜಿ. ಭಾರದ ಆದಿಯೋಗಿ ಶಿವನ ವಿಗ್ರಹವನ್ನು ಸ್ಟೀಲ್‌ನೆಟ್‌ಗಳಿಂದ ರಚಿಸಿ ಇಂಟರ್‌ನ್ಯಾಶನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಸೃಷ್ಟಿಸಿದ ಕಲಾವಿದ ಕಟಪಾಡಿ ಆರ್‌ಸಿಸಿ ಸದಸ್ಯ ಅಮಿತ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಆರ್‌ಸಿಸಿ ಐಸಿರಿ ಪರ್ಕಳ ಅಧ್ಯಕ್ಷ ಸತೀಶ್ ನಾಯ್ಕ್, ಕಾರ್ಯದರ್ಶಿ ಶಾಲಿನಿ ಸಾಮಂತ್, ಸಭಾಪತಿ ಕೆ.ಪ್ರಭಾಕರ ಶೆಟ್ಟಿ, ರೋಟರಿ ಜೊತೆ ಕಾರ್ಯದರ್ಶಿ ಗೀತಾಶ್ರೀ ಉಪಾಧ್ಯಾಯ ಉಪಸ್ಥಿತರಿದ್ದರು. ರೋಟರಿ ಸಮುದಾಯದಳದ ಜಿಲ್ಲಾ ಚೇರ್‍ಮನ್ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ್ ಕಾಮತ್, ರಾಜೇಶ್ ಶೆಣೈ ನಿರೂಪಿಸಿದರು.ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಜಯಗೌರಿ ಹಡಿಗಲ್, ಡಿಜಿಎನ್ ಬಿ.ಎಂ.ಭಟ್ ಬ್ರಹ್ಮಾವರ, ಮಿಯವಾಕಿ ಮಹೇಶ್ ಶೆಣೈ ಕಟಪಾಡಿ ಮಾಹಿತಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್‌ಗಳಾದ ಡಾ.ಭರತೇಶ್ ಅದಿರಾಜ್, ಬಿ.ರಾಜಾರಾಮ್ ಭಟ್ ಮಾತನಾಡಿದರು. ಪುಂಡಲೀಕ ಮರಾಠೆ ಆರ್‌ಸಿಸಿ ಮಾಹಿತಿ ನೀಡಿದರು. ಅಧಿವೇಶನದ ಸಭಾಪತಿ ಸ್ಮಿತಾ ಕಾಮತ್ ವಂದಿಸಿದರು.