ಸೇವಾಮನೋಭಾವದ ರೋಟರಿ ಕಾರ್ಯ ಶ್ಲಾಘನೀಯ

| Published : Jul 10 2025, 12:45 AM IST / Updated: Jul 10 2025, 12:46 AM IST

ಸಾರಾಂಶ

ದೇಶದಲ್ಲಿಯೆ ರೋಟರಿ ಕ್ಲಬ್ ದೊಡ್ಡಮಟ್ಟದಲ್ಲಿ ಸಮಾಜ ಸೇವೆ ಮಾಡುವ ಮೂಲಕ ವಿಶ್ವ ಮಾನ್ಯತೆ ಪಡೆದುಕೊಂಡಿದ್ದು, ಪ್ರತಿಯೊಬ್ಬರು ತೊಡಗಿಸಿಕೊಂಡು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಬೇಕೆಂದು ತಿಪಟೂರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷೆ ವನಿತ ಪ್ರಸನ್ನ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ದೇಶದಲ್ಲಿಯೆ ರೋಟರಿ ಕ್ಲಬ್ ದೊಡ್ಡಮಟ್ಟದಲ್ಲಿ ಸಮಾಜ ಸೇವೆ ಮಾಡುವ ಮೂಲಕ ವಿಶ್ವ ಮಾನ್ಯತೆ ಪಡೆದುಕೊಂಡಿದ್ದು, ಪ್ರತಿಯೊಬ್ಬರು ತೊಡಗಿಸಿಕೊಂಡು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಬೇಕೆಂದು ತಿಪಟೂರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷೆ ವನಿತ ಪ್ರಸನ್ನ ತಿಳಿಸಿದರು.

ತಾಲೂಕಿನ ಹುಲ್ಲುಕಟ್ಟೆ ಗೇಟ್‌ನ ಬಳಿಯಲ್ಲಿರುವ ಪಟೇಲ್ ಪ್ರಾಂಗಣದಲ್ಲಿ ನಡೆದ ತಿಪಟೂರು ರೋಟರಿ ಸಂಸ್ಥೆಯ 2025-26 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ 66ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ರೋಟರಿ ಸಂಸ್ಥೆ ಶಿಕ್ಷಣ, ಅರೋಗ್ಯ, ಸ್ವಚ್ಛತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸ್ಥಾನಮಾನಗಳಿಸಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಜನಮನದಲ್ಲಿ ಉಳಿದಿದೆ. ಅದೇ ರೀತಿ ನಾನೂ ಸಹ ನಿರ್ದಿಷ್ಟ ಗುರಿ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡುವ ಸಂಕಲ್ಪ ಹೊಂದಿದ್ದು ಇದಕ್ಕೆ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದರು. ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಉಮೇಶ್‌, ನಿಯೋಜಿತ ಜಿಲ್ಲಾ ಪಾಲಕ ಬಿ.ಎಸ್. ವಿನೋದ್ ಸಮಾರಂಭದಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ, ನಗರಸಭೆ ಸದಸ್ಯ ಸೊಪ್ಪುಗಣೇಶ್, ರೋಟರಿ ನೂತನ ಕಾರ್ಯದರ್ಶಿ ಟಿ.ಎಸ್. ಕೋಮಲ, ಉಪಾಧ್ಯಕ್ಷ ಕೆ. ಪ್ರಕಾಶ್, ವಲಯ ಕಾರ್ಯದರ್ಶಿ ಶ್ರೀನಿವಾಸ್, ಬಿಳಿಗೆರೆ ಶಿವಕುಮಾರ್, ಸಹಾಯಕ ರಾಜ್ಯಪಾಲ ಪ್ರಭು, ನಿರ್ಗಮಿತ ಅಧ್ಯಕ್ಷ ಗವಿಯಣ್ಣ, ಕಾರ್ಯದರ್ಶಿ ಅಶೋಕ್‌ಕುಮಾರ್, ಸದಸ್ಯರಾದ ಸಚಿನ್, ಅಪ್ಪೇಗೌಡ, ವೇದಶಂಕರ್, ಅರುಣ್‌ಕುಮಾರ್ ಮತ್ತಿತರರಿದ್ದರು.