ಸಾರಾಂಶ
ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಇದರ ೯ನೇ ಜಿಲ್ಲಾ ಸಮ್ಮೇಳನ ‘ನವೋತ್ಸವ - ರೋಟರಿ ಮನಸುಗಳ ಮಧುರ ಮಿಲನ’ ವನ್ನು ರೋಟರಿ ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ಹಾಗೂ ಟಿಆರ್‌ಎಫ್ ಟ್ರಸ್ಟಿ ಡಾ. ಭರತ್ ಪಾಂಡ್ಯ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
೧೨೦ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ರೋಟರಿ ಸೇವೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ದ್ವಿತೀಯ ಸ್ಥಾನದಲ್ಲಿದೆ. ಸದಸ್ಯತನ ವೃದ್ಧಿ, ರೋಟರಿ ಪ್ರತಿಷ್ಠಾನ ಬೆಳವಣಿಗೆಯಲ್ಲಿ ಅಮೆರಿಕದ ನಂತರದ ಸ್ಥಾನದಲ್ಲಿ ನಮ್ಮ ದೇಶ ಸ್ಥಾನ ಗಳಿಸಿರುವುದು ಅಭಿಮಾನ ಪಡುವಂತಹ ವಿಷಯವಾಗಿದೆ. ೨೦೨೯-೩೧ರ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಜಾಗತಿಕ ರೋಟರಿ ಸಮ್ಮೇಳನ ನಡೆಸುವ ಅರ್ಹತೆಯನ್ನು ಗಳಿಸುವ ಹಂತಕ್ಕೆ ತಲುಪಿರುವುದು ಹೆಮ್ಮೆಯ ಸಂಗತಿ ಎಂದು ರೋಟರಿ ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ಹಾಗೂ ಟಿಆರ್‌ಎಫ್ ಟ್ರಸ್ಟಿ ಡಾ. ಭರತ್ ಪಾಂಡ್ಯ ಹೇಳಿದರು.ಅವರು ಇಲ್ಲಿನ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಇದರ ೯ನೇ ಜಿಲ್ಲಾ ಸಮ್ಮೇಳನ ‘ನವೋತ್ಸವ - ರೋಟರಿ ಮನಸುಗಳ ಮಧುರ ಮಿಲನ’ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಗವರ್ನರ್ ದೇವ್‌ಆನಂದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ, ಮಾಜಿ ಗವರ್ನರ್ ಮಂಜು ಫಡ್ಕೆ ಸಂದೇಶ ನೀಡಿದರು.ವೇದಿಕೆಯಲ್ಲಿ ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವ್‌ಆನಂದ್, ಜಿಲ್ಲಾ ರೋಟರಿ ನಾಯಕರಾದ ಬಿ. ರಾಜಾರಾಮ್ ಭಟ್, ಅಭಿನಂದನ್ ಎ. ಶೆಟ್ಟಿ, ಜ್ಞಾನವಸಂತ ಶೆಟ್ಟಿ, ಡಿಜಿಇ ಕೆ. ಪಾಲಾಕ್ಷ, ಡಿಜಿಎನ್ ಬಿ.ಎಂ. ಭಟ್, ಸಮ್ಮೇಳನ ಸಭಾಪತಿ ಎಡ್ವಿನ್ ಜೆ. ಆಳ್ವ, ಉಪಸಭಾಪತಿ ಆಲನ್ ವಿ. ಲೂವಿಸ್, ಉಡುಪಿ ಮಿಡ್‌ಟೌನ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಮ್ಮೇಳನ ಕಾರ್ಯದರ್ಶಿ ಜೈಕಿಶನ್ ಶೆಟ್ಟಿ, ಜಿಲ್ಲಾ ವಲಯಗಳ ಸಹಾಯಕ ಗವರ್ನರ್, ಜಿಲ್ಲಾ ರೋಟರ್‍ಯಾಕ್ಟ್, ಇಂಟರ್‍ಯಾಕ್ಟ್, ಆರ್‌ಸಿಸಿ, ಇನ್ನರ್‌ವೀಲ್ ಪ್ರತಿನಿಧಿಗಳು, ಸಮ್ಮೇಳನ ಸಮಿತಿಗಳ ನಿರ್ದೇಶಕರು ಉಪಸ್ಥಿತರಿದ್ದರು.
ರೋಟರಿ ಜಿಲ್ಲಾ ಕಾರ್ಯದರ್ಶಿ(ಆಡಳಿತ) ಐರೋಡಿ ರಾಮದೇವ ಕಾರಂತ್ ವಂದಿಸಿದರು. ಸುಚಿತ್ ಕೋಟ್ಯಾನ್ ನಿರೂಪಿಸಿದರು. ಕಾರ್ಯಕ್ರಮ ಸಭಾಪತಿ ಹೇಮಂತ್ ಕಾಂತ್ ಸಹಕರಿಸಿದರು.