ಗಮನ ಸೆಳೆದ ರೊಟ್ಟಿ ಜಾತ್ರೆ ಮೆರವಣಿಗೆ

| Published : Dec 19 2024, 12:30 AM IST

ಸಾರಾಂಶ

ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಸಮಸ್ತ ಸಮಾಜದ ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ನಡೆದು ನೋಡುಗರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಶ್ರೀಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಸಮಸ್ತ ಸಮಾಜದ ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ನಡೆದು ನೋಡುಗರ ಗಮನ ಸೆಳೆಯಿತು.

ಪಟ್ಟಣದ ಹೊಸಪೇಟೆ ಶ್ರೀ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡ ರೊಟ್ಟಿ ಜಾತ್ರೆ ಮೆರವಣಿಗೆ ಮರಡಿಮಠ, ಪವಾರ್ ಕ್ರಾಸ್, ಚುಂಗಿನ ಓಣಿ, ಅರಳಿಕಟ್ಟಿ, ಚೌಬಜಾರ, ಗಚ್ಚಿನಕಟ್ಟಿ, ಕಂಠಿಪೇಟೆ ಮೂಲಕ ಹಾಯ್ದು ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠಕ್ಕೆ ಬಂದು ತಲುಪಿತು. ಗುಳೇದಗುಡ್ಡದ ಸಮಸ್ತ ಸಮಾಜದ ಮಹಿಳೆಯರು, ಹೆಣ್ಣು ಮಕ್ಕಳು ಗುಳೇದಗುಡ್ಡ ಖಣದ ಸೀರೆ, ಕುಪ್ಪಸ ಉಟ್ಟು ತಲೆಯ ಮೇಲೆ ರೊಟ್ಟಿ ಸೇರಿದಂತೆ ವಿವಿಧ ತೆರನಾದ ಖಾದ್ಯಗಳ ಬುಟ್ಟಿ ಹೊತ್ತುಕೊಂಡು ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಹಳಷ್ಟು ಜನಾಕರ್ಷಣೆಗೊಂಡಿತು.

ಇಲ್ಲಿನ ಪ್ರತಿಷ್ಠಿತ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ 23 ರಂದು ಜರುಗುವ ಶ್ರೀಗುರುಬಸವ ದೇವರ ಪಟ್ಟಾಭಿಷೇಕ ಹಾಗೂ ಸಂಸ್ಥೆ ಸುವರ್ಣ ಮಹೋತ್ಸವದ ಪ್ರಯುಕ್ತ ಸಮಸ್ತ ಸಮಾಜದ ಮಹಿಳೆಯರು ಬಹಳಷ್ಟು ಉತ್ಸುಕತೆಯಿಂದ ಆಯೋಜನೆ ಮಾಡಿದ್ದ ಈ ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಉಪಾಧ್ಯಕ್ಷೆ ತಾರಾಮತಿ ರೋಜಿ, ಕಾರ್ಯದರ್ಶಿ ಗಿರಿಜಾ ಕಲ್ಯಾಣಿ, ದೀಪಾ ಉಂಕಿ, ಮೀನಾಕ್ಷಿ ಮದ್ದಾನಿ, ವೇದಾ ಶೀಪ್ರಿ, ಅನಿತಾ ಶಿರೋಳ, ಶಶಿಕಲಾ ಭಾವಿ, ನಾಗರತ್ನಾ ಎಣ್ಣಿ, ಸುವರ್ಣ ಲಂಡುನ್ನವರ, ಅನಸುಯಾ ಅಲದಿ, ಭಾಗ್ಯಾ ಉದ್ನೂರ, ದ್ರಾಕ್ಷಾಯಣಿ ಗೊಬ್ಬಿ, ಮಾಲಾ ರಾಜನಾಳ, ನೇತ್ರಾ ತಾಂಡೂರ, ಕಲ್ಪನಾ ಹುಬ್ಬಳ್ಳಿ, ಶಿಲ್ಪಾ ಕಲಬುರ್ಗಿ, ಸಂಗೀತಾ ಕೆಲೂಡಿ, ಜಂಪವ್ವ ಕಲಬುರ್ಗಿ, ಅನ್ನಪೂರ್ಣ ಮದಕಟ್ಟಿ ಸೇರಿದಂತೆ ಇತರರು ಇದ್ದರು.