ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಹೆಚ್ಚುವರಿ ಆಯುಕ್ತರಾದ ಮಧುಸೂದನ್ ಆವಾಲ ಕಾರ್ಯಕ್ರಮ ಉದ್ಘಾಟಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಂದೋಲನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಅವರಲ್ಲಿ ಆದರ್ಶ ವ್ಯಕ್ತಿತ್ವ ನಿರ್ಮಾಣ, ಸೇವಾ ಮನೋಭಾವ, ದೇಶಪ್ರೇಮ ಮೂಡಿಸುವಂತಹ ಈ ಆಂದೋಲನದಲ್ಲಿ ಯುವಜನರು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಆಶಿಸಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರು, ರಾಜ್ಯ ಉಪಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಭಾರತ್ ಸೌಟ್ಸ್ ಮತ್ತು ಗೈಡ್ಸ್ ಆಂದೋಲನವು ಯುವ ಜನಾಂಗದಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಪಾಲಿಸುವಲ್ಲಿ, ಅತ್ಯುತ್ತಮ ಸೇವೆ ಸಲ್ಲಿಸುವಲ್ಲಿ, ಸ್ವತಂತ್ರವಾಗಿ ಮತ್ತು ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಕಿ ರಾಧಾ ಹೇಳಿದರು.ಶುಕ್ರವಾರ ನಗರದ ಅನನ್ಯ ಕಾಲೇಜು ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಭಾರತ್ ಸೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯಿಂದ ಏರ್ಪಡಿಸಿದ್ದ ಜಿಲ್ಲೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಜಿಲ್ಲಾ ಮಟ್ಟದ ಸಾಮಾನ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಡಿಯಲ್ಲಿ ರೋವರ್ ಮತ್ತು ರೇಂಜರ್ ಘಟಕಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುತ್ತದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಇಂತಹ ಘಟಕಗಳನ್ನು ಅರಂಭಿಸಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಪ್ರಾಂಶುಪಾಲರಿಗೆ ತಿಳಿಸಿದರು.ದೇಶದ ಉತ್ತ ಯುವ ಪ್ರಜೆಗಳಾಗಲು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸುವ ಹಿನ್ನೆಯಲ್ಲಿ ಈ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕದ ಜೊತೆಗೆ ದಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ರೋವರ್ ಮತ್ತು ರೇಂಜರ್ ಘಟಕ ಪ್ರಾರಂಭಿಸಬೇಕು ಎಂದು ಹೇಳಿದರು.
ರೋವರ್-ರೇಂಜರ್ ಘಟಕ ಪ್ರಾರಂಭಿಸುವ ಮೊದಲು ಪ್ರತಿ ಘಟಕಕ್ಕೆ ಮಾರ್ಗದರ್ಶನ ಮಾಡಲು ತಮ್ಮ ಕಾಲೇಜಿನ ಕ್ರಮವಾಗಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಉಪನ್ಯಾಸಕರು/ದೈಹಿಕ ಶಿಕ್ಷಣ ಅಧಿಕಾರಿ/ಗ್ರಂಥಪಾಲಕರು/ಪ್ರಯೋಗಾಲಯ ಸಿಬ್ಬಂದಿ/ಗುಮಾಸ್ತರು ಅವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ನಡೆಸುವ ಏಳು/ಎಂಟು ದಿನಗಳ ಶಿಬಿರವಾಸ ತರಬೇತಿ ಪಡೆಯಲು ನಿಯೋಜಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೋವರ್ ಮತ್ತು ರೇಂಜರ್ ಘಟಕ ನಾಯಕ-ನಾಯಕಿಯರ ಗೈರು ಹಾಜರಿ ಅವಧಿಯನ್ನು ಮತ್ತು ಪ್ರಯಾಣ ದಿನಗಳು ಸೇರಿದಂತೆ ಹಾಜರಿ ಪ್ರಮಾಣ ಪತ್ರ ಪಡೆದು ಅನ್ಯ ಕಾರ್ಯ ನಿಮಿತ್ತವೆಂದು ಪರಿಗಣಿಸಬೇಕು ಎಂದು ಉಪನಿರ್ದೇಶಕಿ ರಾಧಾ ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಹೆಚ್ಚುವರಿ ಆಯುಕ್ತರಾದ ಮಧುಸೂದನ್ ಆವಾಲ ಕಾರ್ಯಕ್ರಮ ಉದ್ಘಾಟಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಂದೋಲನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಅವರಲ್ಲಿ ಆದರ್ಶ ವ್ಯಕ್ತಿತ್ವ ನಿರ್ಮಾಣ, ಸೇವಾ ಮನೋಭಾವ, ದೇಶಪ್ರೇಮ ಮೂಡಿಸುವಂತಹ ಈ ಆಂದೋಲನದಲ್ಲಿ ಯುವಜನರು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಆಶಿಸಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರು, ರಾಜ್ಯ ಉಪಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೈಡ್ಸ್ ನ ರಾಷ್ಟ್ರೀಯ ಆಯುಕ್ತರು ಹಾಗೂ ರಾಜ್ಯ ಸಹಾಯಕ ಆಯುಕ್ತರಾದ ರಾಧಾ ವೆಂಕಟೇಶ್, ಅನನ್ಯ ಸಮೂಹ ಸಂಸ್ಥೆಗಳ ಟ್ರಸ್ಟಿ ಹರೀಶ್ ಎಚ್., ಗೈಡ್ಸ್ ಜಿಲ್ಲಾ ಆಯುಕ್ತರಾದ ಸುಭಾಷಿಣಿ ಆರ್. ಕುಮಾರ್, ಜಿಲ್ಲಾ ಆಯುಕ್ತರು, ಸ್ಕೌಟ್ಸ್ ಜಿಲ್ಲಾ ಆಯುಕ್ತ ಸುರೇಂದ್ರ ಷಾ, ಜಿಲ್ಲಾ ಕಾರ್ಯದರ್ಶಿ ಅಂಜನಪ್ಪ ಟಿ.ಎಸ್., ರಾಜ್ಯ ಸಂಘಟನಾ ಆಯುಕ್ತರಾದ ಮಂಜುಳಾ ಸಿ., ಜಿಲ್ಲಾ ಪ್ರಚಾರ್ಯರ ಸಂಘಟನೆಯ ನಾಗರಾಜು, ತರಬೇತುದಾರರಾದ ಗಂಗಾಧರ್, ಜಯಮ್ಮ ಸೇರಿ ಜಿಲ್ಲೆ ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.