ರೌಡಿ ಶೀಟರ್ ಕೊಲೆ
KannadaprabhaNewsNetwork | Published : Oct 23 2023, 12:15 AM IST
ಸಾರಾಂಶ
ರೌಡಿ ಶೀಟರೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ.
ತುಮಕೂರು: ರೌಡಿ ಶೀಟರೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರಿನ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ಮಾರುತಿ ಅಲಿಯಾಸ್ ಪೋಲಾಡ್(35) ಕೊಲೆಯಾದ ದುರ್ದೈವಿ. ಈತ ಮೂಲತಃ ಮಧುಗಿರಿಯ ಕಂಸನಹಳ್ಳಿ ಗ್ರಾಮದವನು. ತುಮಕೂರಿನ ಮಂಚಲಕುಪ್ಪೆ ಬಳಿ ತನ್ನ ಪತ್ನಿ ಜೊತೆ ವಾಸವಾಗಿದ್ದ. ಶನಿವಾರ ಮಧ್ಯರಾತ್ರಿ ಬಂಡೆಮನೆ ಕಲ್ಯಾಣ ಮಂಟಪದ ಬಳಿಯಿದ್ದ ಮಾರುತಿಯನ್ನು ಐದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಕಳೆದ ಏಳೆಂಟು ವರ್ಷಗಳ ಹಿಂದೆ ಹಟ್ಟಿ ಮಂಜ ಎಂಬಾತನ ಕೊಲೆ ಕೇಸ್ ನಲ್ಲಿ ಈತ ಆರೋಪಿಯಾಗಿದ್ದ. ಇದೇ ದ್ಷೇಷಕ್ಕೆ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿದ್ದರು.