ಸಾರಾಂಶ
ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್‌ಗಳು ಪೊಲೀಸರಿಗೆ ಕಿರಿಕ್ ಮಾಡಿರುವ ಘಟನೆ ಶಿವಮೊಗ್ಗದ ಬಿ.ಎಚ್. ರಸ್ತೆಯ ಕರ್ನಾಟಕ ಸಂಘ ಬಳಿ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ಶಿವಮೊಗ್ಗ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್‌ಗಳು ಪೊಲೀಸರಿಗೆ ಕಿರಿಕ್ ಮಾಡಿರುವ ಘಟನೆ ಶಿವಮೊಗ್ಗದ ಬಿ.ಎಚ್. ರಸ್ತೆಯ ಕರ್ನಾಟಕ ಸಂಘ ಬಳಿ ನಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ಟ್ರಾಫಿಕ್ ಪೊಲೀಸರು ವಾಹನಗಳನ್ನು ಚೆಕ್ಕಿಂಗ್ ಮಾಡುತ್ತಿದ್ದುದ ಕಂಡು, ತಪ್ಪಿಸಿಕೊಳ್ಳುವ ಭರದಲ್ಲಿ ಬೇರೊಂದು ವಾಹನಗಳಿಗೆ ಡಿಕ್ಕಿ ಹೊಡೆದು ಕೆಳಗೆಬಿದ್ದಿದ್ದಾರೆ. ಗಾಯಗೊಂಡಿದ್ದ ರೌಡಿಶೀಟರ್ ಯಾಸೀನ್ ಖುರೇಷಿಯನ್ನು ಟ್ರಾಫಿಕ್ ಪೊಲೀಸರೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಈತನೊಂದಿಗೆ ಬಂದಿದ್ದ ಮತ್ತೊಬ್ಬರೌಡಿಶೀಟರ್ ಕಡೇಕಲ್ ಅಬೀಬ್ ಸಂಚಾರಿ ಪೊಲೀಸರೇ ಯಾಸೀನ್ ಖುರೇಷಿಗೆ ಹೊಡೆದಿದ್ದು ಎಂದು ಆರೋಪಿಸಿ ಸಂಚಾರಿ ಪೊಲೀಸ್ ಪ್ರಭು ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ, ಜನರನ್ನು ಸೇರಿಸಿ ನಾಟಕ ಶುರುಮಾಡಿದ್ದ. ಅನಂತರ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ನವೀನ್ ಕುಮಾರ್ ಮಠಪತಿ ಸ್ಥಳಕ್ಕೆ ಆಗಮಿಸಿ, ವಾತಾವರಣ ತಿಳಿಗೊಳಿಸಿದ್ದಾರೆ.ಘಟನೆ ಸಂಬಂಧ ರೌಡಿ ಶೀಟರ್ ಯಾಸಿನ್ ಖುರೇಷಿ, ಕಡೇಕಲ್ ಅಬೀದ್ ಮತ್ತು ವಾಸಿಂ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.
- - - -(ಸಾಂದರ್ಭಿಕ ಚಿತ್ರ).