ಮಹಿಳಾ ಸಬಲೀಕರಣ ಸಭೆಯಲ್ಲಿ ಪಾಲ್ಗೊಂಡ ತ್ರಿಷಿಕಾ ಯದುವೀರ್

| Published : Apr 21 2024, 02:18 AM IST

ಮಹಿಳಾ ಸಬಲೀಕರಣ ಸಭೆಯಲ್ಲಿ ಪಾಲ್ಗೊಂಡ ತ್ರಿಷಿಕಾ ಯದುವೀರ್
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಇರುವ ಅವಕಾಶಗಳು ಮತ್ತು ಉತ್ಪಾದಿತ ವಸ್ತುಗಳ ರಫ್ತು ಸೇವೆಗೆ ಇರುವ ಅವಕಾಶ ಕುರಿತು ಅವರು ವಿವರವಾಗಿ ಮಾತನಾಡಿದರು.ಮೊದಲ ಬಾರಿಗೆ ಚುನಾವಣೆ ವೇಳೆ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡ ತ್ರಿಷಿಕಾ ಯದುವೀರ್ ಅವರು, ಮಹಿಳಾ ಅಭಿವೃದ್ಧಿಯ ಕುರಿತು ಮಾತನಾಡಿದರು

ಕನ್ನಡಪ್ರಭ ವಾರ್ತೆ ಮೈಸೂರು

ರಾಜವಂಶಸ್ಥೆ ತ್ರಿಶಿಕಾ ಯದುವೀರ್ ಅವರು ಶನಿವಾರ ನಗರದಲ್ಲಿ ಮಹಿಳಾ ಸಬಲೀಕರಣ ಹಾಗೂ ಸಶಕ್ತಿಕರಣ ಸಮಾವೇಶ ನಡೆಸಿದರು.

ನಗರದ ಅರಸು ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರದ ಹಲವು ಮಂದಿ ಮಹಿಳಾ ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಉದ್ಯಮ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಇರುವ ಅವಕಾಶಗಳು ಮತ್ತು ಉತ್ಪಾದಿತ ವಸ್ತುಗಳ ರಫ್ತು ಸೇವೆಗೆ ಇರುವ ಅವಕಾಶ ಕುರಿತು ಅವರು ವಿವರವಾಗಿ ಮಾತನಾಡಿದರು.

ಮೊದಲ ಬಾರಿಗೆ ಚುನಾವಣೆ ವೇಳೆ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡ ತ್ರಿಷಿಕಾ ಯದುವೀರ್ ಅವರು, ಮಹಿಳಾ ಅಭಿವೃದ್ಧಿಯ ಕುರಿತು ಮಾತನಾಡಿದರು.

ಈ ಸಭೆಯಲ್ಲಿ ಮಹಿಳಾ ಉದ್ಯಮಿಗಳು, ಸಂಘ ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಹೆಚ್ಚಾಗಿ ಪಾಲ್ಗೊಂಡಿದ್ದರು.