ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ಸೃಷ್ಟಿಸಬಹುದು. ಆ ನಿಟ್ಟಿನಲ್ಲಿ ಕನ್ನಡದ ರಾಜರು ಎಂಬ ಶೀರ್ಷಿಕೆಯಡಿ ಕನ್ನಡ ನಾಡು ನುಡಿಗೆ ಕೊಡುಗೆ ನೀಡಿದ ಅರಸರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶ್ರೀಮಠದ ಕಾರ್ಯ ಅಭಿನಂದನೀಯ.

ನರಗುಂದ: ಕನ್ನಡ ನಾಡಿನಲ್ಲಿ ಬಹುತೇಕ ರಾಜ ಮನೆತನಗಳು ಕನ್ನಡ ಭಾಷೆ ಕಟ್ಟಿ ಬೆಳೆಸುವಲ್ಲಿ ತಮ್ಮದೆಯಾದ ವಿಶಿಷ್ಟ ಕೊಡುಗೆ ನೀಡಿವೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷ ಡಾ. ವೈ.ಎಂ. ಭಜಂತ್ರಿ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ನಡೆದ ಕನ್ನಡ ತಿಂಗಳು-2025ರ ಕನ್ನಡ ರಾಜರು ಉಪನ್ಯಾಸ ಮಾಲೆ ಸಮಾರೋಪ ಸಮಾರಂಭ ಹಾಗೂ 377ನೇ ಮಾಸಿಕ ಶಿವಾನುಭವದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸ ಸೃಷ್ಟಿಸಬಹುದು. ಆ ನಿಟ್ಟಿನಲ್ಲಿ ಕನ್ನಡದ ರಾಜರು ಎಂಬ ಶೀರ್ಷಿಕೆಯಡಿ ಕನ್ನಡ ನಾಡು ನುಡಿಗೆ ಕೊಡುಗೆ ನೀಡಿದ ಅರಸರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶ್ರೀಮಠದ ಕಾರ್ಯ ಅಭಿನಂದನೀಯ.

ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಬಹುತೇಕ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಶಾಂತಲಿಂಗ ಶ್ರೀಗಳು ಅವರ ಮಾರ್ಗದಲ್ಲಿಯೇ ಸಾಗುತ್ತಿರುವುದು ಶ್ಲಾಘನೀಯ. ಅವರು ಸಿದ್ಧಲಿಂಗ ಶ್ರೀಗಳ ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು ಎಂಳಿದರು.

ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡಿ, ಕನ್ನಡ ಅತ್ಯಂತ ಸಮೃದ್ಧವಾದ ಭಾಷೆ. ಅದು ಈಗಾಗಲೆ ಸಾಕಷ್ಟು ಬೆಳೆದಿದೆ, ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ರಾಜ್ಯದಲ್ಲಿ ಜನಿಸಿದ ಪ್ರತಿಯೊಬ್ಬರ ಜವಾಬ್ದಾರಿ. ಭಾಷೆ ಬಳಸಿದಷ್ಟು ಬೆಳೆಯುತ್ತದೆ, ಹೀಗಾಗಿ ಪ್ರತಿಯೊಬ್ಬರೂ ಮಾತೃಭಾಷೆಯನ್ನು ಕೂಸಿನಂತೆ ಕಾಪಾಡಬೇಕಾಗಿದೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಆತ್ಮ, ಅದನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆ ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಹಾಲಕ್ಷ್ಮಿ ಚಂದನ್ನವರ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿವೇದಿತಾ ಹಡಪದ, ನಿವೃತ್ತ ಜವಾನ ನಿಂಗಪ್ಪ ಕುರಿ ಅವರನ್ನು ಗೌರವಿಸಲಾಯಿತು.

ಶಾಂತಲಿಂಗ ಶ್ರೀಗಳು, ಬಿ.ಎಂ. ಬೆಳಹಾರ, ಜಗದೀಶ ಜ್ಞಾನೋಪಂತ, ಎಸ್.ಆರ್. ಅಬ್ಬಿಗೇರಿ, ಶಿವಾನಂದ ಶೇಬಣ್ಣವರ, ಬಿ.ಎಂ. ಗೊಜನೂರ, ಮಹಾಂತೇಶ ಸಾಲಿಮಠ, ಧರ್ಮೇಂದ್ರ ಇಟಗಿ, ಪ್ರೊ. ಪಿ.ಎಸ್‌. ಅಣ್ಣಿಗೇರಿ, ಕೆ.ಟಿ. ಪಾಟೀಲ ಇದ್ದರು. ಪ್ರೊ. ಆರ್.ಬಿ. ಚಿನಿವಾಲರ ಸ್ವಾಗತಿಸಿದರು. ಪ್ರೊ. ಆರ್.ಕೆ. ಐನಾಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.