ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ನಿವೇಶನಗಳಿವೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಹ ಬಡಜನರಿಗೆ ವೈಯಕ್ತಿಕವಾಗಿ ₹1.25 ಲಕ್ಷವನ್ನು ಉಚಿತವಾಗಿ ನೀಡುವುದಾಗಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

ಚನ್ನಗಿರಿ: ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ ನಿವೇಶನಗಳಿವೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಹ ಬಡಜನರಿಗೆ ವೈಯಕ್ತಿಕವಾಗಿ ₹1.25 ಲಕ್ಷವನ್ನು ಉಚಿತವಾಗಿ ನೀಡುವುದಾಗಿ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 30 ತಿಂಗಳು ಕಳೆದಿವೆ. ಈ ಸಂದರ್ಭದಲ್ಲಿ ಸರ್ಕಾರ ಬಡವರಿಗೆ ಮನೆಗಳನ್ನು ಕೊಡುವ ವಿಚಾರದಲ್ಲಿ ಇನ್ನು ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಸರ್ಕಾರಕ್ಕೆ ಬಡವರ್ಗದ ಜನರ ಬಗ್ಗೆ ಬಹಳಷ್ಟು ಕಾಳಜಿ ಇದೆ. ಮುಂದಿನ 30 ತಿಂಗಳ ಅಧಿಕಾರದಲ್ಲಿ ಸರ್ಕಾರ ಬಡವರಿಗೆ ಮನೆಗಳನ್ನು ನೀಡುವಲ್ಲಿ ಮುಂದಾದರೆ ಆ ಯೋಜನೆ ಮುಂದುವರಿಸಿಕೊಡುತ್ತೇನೆ ಎಂದರು.

ನನ್ನ ವೈಯಕ್ತಿಕ ಹಣದಲ್ಲಿ ಮನೆಗಳನ್ನು ನಿರ್ಮಿಸಲು ಹಣ ನೀಡುತ್ತಿದ್ದೇನೆ. ಮನೆಗಳಿಲ್ಲದ ಬಡಜನರು ಸರ್ಕಾರದ ಮಾನದಂಡದಂತೆ ಅರ್ಜಿಗಳನ್ನು ಕಾಂಗ್ರೆಸ್ ಕಚೇರಿಗೆ ಸಲ್ಲಿಸಬೇಕು. ಮೊದಲು ಬರುವಂತಹ 100 ಅರ್ಜಿಗಳನ್ನು ಪರಿಶೀಲನೆ ನಡೆಸಿ, 3 ಹಂತಗಳಲ್ಲಿ ಹಣ ನೀಡಲಿದ್ದೇನೆ. ಮೊದಲ ಹಂತದಲ್ಲಿ ₹40 ಸಾವಿರ, 2ನೇ ಹಂತದಲ್ಲಿ ₹40 ಸಾವಿರ, ಮೂರನೇ ಹಂತದಲ್ಲಿ ₹45 ಸಾವಿರ ನೀಡುತ್ತೇನೆ ಎಂದರು.

ಈ ಯೋಜನೆ ಬಡವರ ಮೇಲಿರುವ ಅಭಿಮಾನಕ್ಕಾಗಿ ಮಾಡಿದ್ದೇನೆ. ಮೊದಲನೇ ಹಂತದಲ್ಲಿ ಮನೆಗಳನ್ನು ನಿರ್ಮಿಸುವ ಕೆಲಸ ಮುಗಿದ ನಂತರ ಎರಡನೇ ಹಂತವನ್ನು ಪ್ರಾರಂಭಿಸಲಾಗುವುದು ಎಂದರು.

- - -

-5ಕೆಸಿಎನ್‌ಜಿ5: ಬಸವರಾಜು ಶಿವಗಂಗಾ.