ಸಾರಾಂಶ
ಇಸ್ಪೀಟ್ ಜೂಜಾಡುತ್ತಿದ್ದ 14 ಜನರನ್ನು ಹರಿಹರ ಪೊಲೀಸರು ವಶಕ್ಕೆ ಪಡೆದು, ಆರೋಪಿಗಳು ಆಟಕ್ಕೆ ತೊಡಗಿಸಿದ್ದ ₹1,35,000 ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹರಿಹರ
ಇಸ್ಪೀಟ್ ಜೂಜಾಡುತ್ತಿದ್ದ 14 ಜನರನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಗಳು ಆಟಕ್ಕೆ ತೊಡಗಿಸಿದ್ದ ₹1,35,000 ಹಣವನ್ನು ವಶಪಡಿಸಿಕೊಂಡಿದ್ದಾರೆ.ಠಾಣಾ ವ್ಯಾಪ್ತಿಯ ಪ್ರಶಾಂತ್ ನಗರದ ಶೇರಾಪುರದಲ್ಲಿರುವ ತೋಯಬಾ ಶಾಲಾ ರಸ್ತೆ ಸಮೀಪ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ, ಎಂ. ಸಂತೋಷ ಹಾಗೂ ಮಂಜುನಾಥ ದಾವಣಗೆರೆ ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ನಗರ ಪೊಲೀಸ್ ನಿರೀಕ್ಷಕ ಬಿ. ದಯಾನಂದ ನೇತೃತ್ವದಲ್ಲಿ ಪಿಎಸ್‍ಐ ಶ್ರೀಪತಿ ಹಾಗೂ ಸಿಬ್ಬಂದಿ ನಾಗರಾಜ್, ರವಿ, ದೇವರಾಜ್ ಸರ್ವೇ, ನಾಗರಾಜ್, ರಾಜಾಸಾಬ್ ಪಿಂಜಾರ್, ಸಿದ್ದರಾಜು, ರವಿನಾಯ್ಕ್, ರುದ್ರಸ್ವಾಮಿ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.- - - (ಸಾಂದರ್ಭಿಕ ಚಿತ್ರ)