ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ

| Published : Aug 14 2025, 12:00 AM IST

ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಸೋಮವಾರ, ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುಪ್ರಸಾದ ಮಂಟಪ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಮ್ಮ ಒಳ್ಳೆಯ ಕಾರ್ಯಗಳ ಜತೆ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದವಿದೆ. ಭಕ್ತಿಯಿಂದ ಆರಾಧಿಸುವವರ ಕುಟುಂಬವನ್ನು ಬೆಳಗಿದವರು ರಾಘವೇಂದ್ರ ರಾಯರು. ಮಂತ್ರಾಲಯದಂತೆ ಲಾಯಿಲದ ಶ್ರೀ ರಾಯರ ಬೃಂದಾವನವು ಅಭಿವೃದ್ಧಿ ಹೊಂದುತ್ತಿದ್ದು, ಮಠದ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಕನಿಷ್ಠ 20 ಲಕ್ಷ ರು. ನೆರವು ನೀಡುತ್ತೇನೆ ಎಂದು ಹೊಸಪೇಟೆ ಶಾಸಕ ಎಚ್. ಆರ್. ಗವಿಯಪ್ಪ ಹೇಳಿದ್ದಾರೆ.ತಾಲೂಕಿನ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಸೋಮವಾರ, ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುಪ್ರಸಾದ ಮಂಟಪ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗುರುವಾಯನಕೆರೆಯ ಶಿಕ್ಷಣೋದ್ಯಮಿ ಸುಮಂತ್ ಕುಮಾರ್ ಜೈನ್ ಮಾತನಾಡಿ, ಯುವ ಸಮುದಾಯ ಬೆಳೆಸಿಕೊಳ್ಳುವ ಒಳ್ಳೆಯ ವ್ಯಕ್ತಿತ್ವವೇ ಹೆತ್ತವರಿಗೆ ಆಸ್ತಿಯಾಗಿದೆ. ಯುವಕರು ಧಾರ್ಮಿಕ ಶ್ರದ್ಧೆಯೊಂದಿಗೆ ಮಠ, ಮಂದಿರ, ಮಸೀದಿ, ಚರ್ಚುಗಳಿಗೆ ಹೋಗಬೇಕು. ಗುರುಗಳ ದಯೆ ಇದ್ದಲ್ಲಿ ನಾವು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತದೆ ಎಂದರು.ಗಂಗಾವತಿ ಮಾಜಿ ಶಾಸಕ ಹೆಚ್.ಎಸ್.ಮುರಳೀಧರ್ ಮಾತನಾಡಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ರು.5 ಲಕ್ಷ ನೀಡುವುದಾಗಿ ತಿಳಿಸಿದರು.ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಂಗಳೂರು ನಾಗನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ನಾರಾಯಣ ಬೇಗೂರು ಮಾತನಾಡಿದರು.ರಾಘವೇಂದ್ರ ಪ್ರತಿಷ್ಠಾನದ ಟ್ರಸ್ಟಿ ಸುಜಿತಾ ವಿ. ಬಂಗೇರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಇದ್ದರು.ಸುಮಂತ್ ಕುಮಾರ್ ಜೈನ್, ಪ್ರಸಾದ್ ಶೆಟ್ಟಿ, ಹೆಚ್.ಆರ್.ಗವಿಯಪ್ಪ, ಎಚ್.ಎಸ್ ಮುರಳೀಧರ, ಕಿರಣ್ ಚಂದ್ರ ಪುಷ್ಪಗಿರಿ ಇವರನ್ನು ಗೌರವಿಸಲಾಯಿತು.ಪ್ರತಿಷ್ಠಾನದ ಸಲಹೆಗಾರ ಕುಮಾರ ಹೆಗ್ಡೆ ಪ್ರಸ್ತಾವಿಸಿ ಸ್ವಾಗತಿಸಿದರು. ಟ್ರಸ್ಟಿ ಕೃಷ್ಣಪ್ಪ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಸುಧಾಮಣಿ ರಮಾನಂದ ನಿರೂಪಿಸಿದರು. ವಸಂತ ಸುವರ್ಣ ವಂದಿಸಿದರು.