369 ರು. ವಿಮೆ ಸಂಕಷ್ಟ ಕಾಲಕ್ಕೆ ತಂದಿದ್ದು ₹10.15 ಲಕ್ಷ!

| Published : Mar 21 2025, 12:36 AM IST

ಸಾರಾಂಶ

ನಗರದ ಪಿ.ಬಿ. ರಸ್ತೆ ಶಾಖೆಯ ಕರ್ಣಾಟಕ ಬ್ಯಾಂಕ್‌ನಲ್ಲಿ ತನ್ನ ವೈಯಕ್ತಿಕ ಖಾತೆ ತೆರೆಯುವಾಗ ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕರು ಕೇವಲ ₹369 ಮಾತ್ರ ತುಂಬಿ ಯುನಿವರ್ಸಲ್ ಸೋಂಪೋ ವಿಮೆ ಮಾಡಿಸಲು ತಿಳಿಸಿದಂತೆ ಎಲ್.ನಾಗರಾಜ್ (45) ಎನ್ನುವವರು ಈ ಹಣವನ್ನು ಪಾವತಿ ಮಾಡಿ ವಿಮಾ ಪಾಲಿಸಿ ಮಾಡಿಸಿದ್ದರು. ಆಕಸ್ಮಿಕವಾಗಿ ನಾಗರಾಜ್‌ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರ ಕುಟುಂಬಕ್ಕೆ ₹10,15,000 ಮೊತ್ತದ ಚೆಕ್ ಸೌಲಭ್ಯ ದೊರೆತಿದ್ದು, ಚಿಕ್ಕ ಹಣದ ಹೂಡಿಕೆ ಈಗ ಕುಟುಂಬಕ್ಕೆ ದೊಡ್ಡ ಆಸರೆಯಾದಂತಾಗಿದೆ.

- ಕರ್ಣಾಟಕ ಬ್ಯಾಂಕ್‌ ಗ್ರಾಹಕ ಮೃತ ಎಲ್‌.ನಾಗರಾಜ್‌ ಕುಟುಂಬಕ್ಕೆ ಚೆಕ್‌ ವಿತರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಪಿ.ಬಿ. ರಸ್ತೆ ಶಾಖೆಯ ಕರ್ಣಾಟಕ ಬ್ಯಾಂಕ್‌ನಲ್ಲಿ ತನ್ನ ವೈಯಕ್ತಿಕ ಖಾತೆ ತೆರೆಯುವಾಗ ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕರು ಕೇವಲ ₹369 ಮಾತ್ರ ತುಂಬಿ ಯುನಿವರ್ಸಲ್ ಸೋಂಪೋ ವಿಮೆ ಮಾಡಿಸಲು ತಿಳಿಸಿದಂತೆ ಎಲ್.ನಾಗರಾಜ್ (45) ಎನ್ನುವವರು ಈ ಹಣವನ್ನು ಪಾವತಿ ಮಾಡಿ ವಿಮಾ ಪಾಲಿಸಿ ಮಾಡಿಸಿದ್ದರು. ಆಕಸ್ಮಿಕವಾಗಿ ನಾಗರಾಜ್‌ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರ ಕುಟುಂಬಕ್ಕೆ ₹10,15,000 ಮೊತ್ತದ ಚೆಕ್ ಸೌಲಭ್ಯ ದೊರೆತಿದ್ದು, ಚಿಕ್ಕ ಹಣದ ಹೂಡಿಕೆ ಈಗ ಕುಟುಂಬಕ್ಕೆ ದೊಡ್ಡ ಆಸರೆಯಾದಂತಾಗಿದೆ.

ಮೆಕ್ಯಾನಿಕ್‌ ವೃತ್ತಿಯ ಎಲ್.ನಾಗರಾಜ್ ದೇವರಬೆಳಕೆರೆ ಬಳಿ ಅಪಘಾತದಿಂದ ಗಾಯಗೊಂಡು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕರ್ಣಾಟಕ ಬ್ಯಾಂಕ್‌ನಲ್ಲಿ ಮಾಡಿಸಿದ್ದ ಪಾಲಿಸಿ ಕುಟುಂಬಕ್ಕೆ ಆಧಾರವಾಗಿದೆ. ಬ್ಯಾಂಕಿನ ವ್ಯವಸ್ಥಾಪಕರು ತಿಳಿಸಿದಂತೆ ಈತ ಈ ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹರಿಸುತ್ತಿದ್ದರು. ಬ್ಯಾಂಕಿನವರು ಒಪ್ಪಂದ ಮಾಡಿಕೊಂಡಿದ್ದ ಯುನಿವರ್ಸಲ್ ಸೋಂಪೋ ಇನ್ಸೂರೆನ್ಸ್ ಕಂಪನಿಗೆ ಎಲ್.ನಾಗರಾಜ್ ವಿಚಾರ ತಿಳಿಸಿದ್ದರು. ಈ ಹಿನ್ನೆಲೆ ಮೃತ ನಾಗರಾಜ್‌ ಅವರ ಪತ್ನಿ ಎಂ.ಎಸ್. ಅನ್ನಪೂರ್ಣ ಹಾಗೂ ಮೂವರು ಮಕ್ಕಳನ್ನು ಕರೆಸಿ, ಚೆಕ್‌ ನೀಡಲಾಯಿತು.

ಬ್ಯಾಂಕ್‌ ವ್ಯವಸ್ಥಾಪಕ ರಾಕೇಶ್ ಶಾನಬೋಗ್ ಎಂ.ಎಸ್. ಈ ಸಂದರ್ಭ ಮಾತನಾಡಿ, ನಾವು ಗ್ರಾಹಕರಿಗೆ ಸವಲತ್ತುಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ ಇಂತಹ ಸಂದರ್ಭ ಅತಿ ಚಿಕ್ಕ ಹಣದ ಹೂಡಿಕೆ ಕುಟುಂಬಕ್ಕೆ ಅತಿ ದೊಡ್ಡ ಆಸರೆಯಾಗುತ್ತದೆ. ನಮ್ಮ ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಖಾತೆಗಳನ್ನು ತೆರೆದು ವ್ಯವಹರಿಸಿರಿ, ಈ ಹಣ ಸಂಕಷ್ಟದಲ್ಲಿ ಕುಟುಂಬಕ್ಕೆ ಆಸರೆಯಾಗಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭ ವ್ಯವಸ್ಥಾಪಕ ಎಂ.ಎಸ್. ರಾಕೇಶ್ ಶಾನಬೋಗ್, ಸಹಾಯಕ ವ್ಯವಸ್ಥಾಪಕ ಶಾಖಾ ಎಂ.ಶಮಂತ್, ಸಹಾಯಕ ಮಹಾ ಪ್ರಬಂಧಕ ಎಚ್.ಎ. ನಾಗರಾಜ ಇತರರು ಉಪಸ್ಥಿತರಿದ್ದರು.

- - - -20ಕೆಡಿವಿಜಿ36:

ದಾವಣಗೆರೆಯ ಕರ್ಣಾಟಕ ಬ್ಯಾಂಕ್‌ ಖಾತೆದಾರ ಎಲ್.ನಾಗರಾಜ ಅಪಘಾತದಿಂದ ಮರಣ ಹೊಂದಿದ್ದು, ಅವರ ಕುಟುಂಬದವರಿಗೆ ಬ್ಯಾಂಕ್‌ನಿಂದ ₹10,15,000 ಮೊತ್ತದ ವಿಮಾ ಹಣದ ಚೆಕ್ ವಿತರಿಸಲಾಯಿತು.