ಹರಿಹರ ನ್ಯಾಯಾಲಯದಲ್ಲಿ ₹4,20,40,077 ಪರಿಹಾರ

| Published : Mar 10 2025, 12:19 AM IST

ಸಾರಾಂಶ

ಇಲ್ಲಿನ ನ್ಯಾಯಾಲಯಗಳಲ್ಲಿ ಶನಿವಾರದಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಹಿರಿಯ ಸಿವಿಲ್, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ, 1ನೇ ಮತ್ತು ಮತ್ತು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಗಳ ಒಟ್ಟು 31,975 ಪ್ರಕರಣಗಳ ಪೈಕಿ 29,124 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಒಟ್ಟು ರೂ.4,20,40,077 ಮೊತ್ತದ ಪರಿಹಾರದ ತೀರ್ಪು ನೀಡಲಾಯಿತು.

- ಲೋಕ್‌ ಅದಾಲತ್‌: ವ್ಯಾಜ್ಯಪೂರ್ವ, ಬಾಕಿ 31975 ಪೈಕಿ 29124 ಕೇಸ್‌ ಇತ್ಯರ್ಥ - - - ಕನ್ನಡಪ್ರಭ ವಾರ್ತೆ ಹರಿಹರಹರಿಹರ: ಇಲ್ಲಿನ ನ್ಯಾಯಾಲಯಗಳಲ್ಲಿ ಶನಿವಾರದಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಹಿರಿಯ ಸಿವಿಲ್, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ, 1ನೇ ಮತ್ತು ಮತ್ತು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯಗಳ ಒಟ್ಟು 31,975 ಪ್ರಕರಣಗಳ ಪೈಕಿ 29,124 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಒಟ್ಟು ರೂ.4,20,40,077 ಮೊತ್ತದ ಪರಿಹಾರದ ತೀರ್ಪು ನೀಡಲಾಯಿತು.ವ್ಯಾಜ್ಯ ಪೂರ್ವ: ಈ ನಾಲ್ಕು ನ್ಯಾಯಾಲಯಗಳ ಒಟ್ಟು 30,157 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 28,903 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರೂ.2,85,91,805 ಪರಿಹಾರದ ತೀರ್ಪು ನೀಡಲಾಯಿತು.ಬಾಕಿ ಪ್ರಕರಣ: ಮೇಲ್ಕಂಡ ನಾಲ್ಕು ನ್ಯಾಯಾಲಯಗಳ ಒಟ್ಟು 5,625 ಬಾಕಿ ಪ್ರಕರಣಗಳ ಪೈಕಿ 1,818 ಪ್ರಕರಣಗಳ ವಿಚಾರಣೆ ನಡೆಯಿತು, ಆ ಪೈಕಿ 221 ಪ್ರಕರಣಗಳನ್ನು ಇತ್ಯರ್ಥಪಡಿಸಿ ರೂ.1,34,48,272 ಪರಿಹಾರದ ತೀರ್ಪು ನೀಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮುನ್ನೋಳಿ ಮತ್ತು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜ್ಯೋತಿ ಅಶೋಕ್ ಪತ್ತಾರ್ ಇವರು ತಲಾ ಒಂದು ಪತಿ, ಪತ್ನಿ ಪ್ರಕರಣದಲ್ಲಿ ದಂಪತಿಗಳನ್ನು ರಾಜಿ ಮೂಲಕ ಒಂದುಗೂಡಿಸಿದರು. ಪ್ರಭಾರ ಪ್ರಧಾನ ಸಿವಿಲ್ ನ್ಯಾಯಾಧೀಶೆ ವೀಣಾ ಕೋಳೇಕರ ವಿಚಾರಣೆ ನಡೆಸಿದರು. ಹಿರಿಯ, ಕಿರಿಯ ವಕೀಲರು, ನ್ಯಾಯಾಲಯಗಳ ಸಿಬ್ಬಂದಿ ಭಾಗವಹಿಸಿದ್ದರು.09 ಎಚ್‍ಆರ್‍ಆರ್ 01& 02ಫೋಟೋ ಇದೆ: ಹರಿಹರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಶ್ರೀ ಮುನ್ನೋಳಿ ಪ್ರಕರಣಗಳ ವಿಚಾರಣೆ ನಡೆಸಿದರು.