ಪಂಪ ಸ್ಮಾರಕ ಭವನ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆ: ಕುಮಾರ ಬೆಕ್ಕೇರಿ

| Published : Dec 19 2024, 12:30 AM IST

ಪಂಪ ಸ್ಮಾರಕ ಭವನ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆ: ಕುಮಾರ ಬೆಕ್ಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಪ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಧಾರವಾಡ: ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಸ್ಥಾಪನೆಯಾಗಿರುವ ಪಂಪ ಸ್ಮಾರಕ ಭವನದ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆಯಾಗಿದ್ದು ಸದ್ಯದಲ್ಲಿ ಅಭಿವೃದ್ಧಿ ಕಾರ್ಯ ಶುರುವಾಗಲಿದೆ.

ನಿರ್ಲಕ್ಷ್ಯಕ್ಕೆ ಒಳಗಾದ ಪಂಪ ಸ್ಮಾರಕ ಭವನ ಶೀರ್ಷಿಕೆಯಲ್ಲಿ ಡಿ. 17ರಂದು "ಕನ್ನಡಪ್ರಭ "ದಲ್ಲಿ ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ಬುಧವಾರ ಭವನಕ್ಕೆ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಭವನಕ್ಕೆ ಭೇಟಿ ನೀಡಿದಾಗ ಅಲ್ಲಿ ಅಸ್ತವ್ಯಸ್ತ ಹಾಗೂ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿದೆ. ಆವರಣ ಸ್ವಚ್ಛತೆಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅವರಣ ಸ್ವಚ್ಛಗೊಳ್ಳಲಿದೆ ಎಂದರು.

ಪ್ರಮುಖವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಸ್ಮಾರಕ ಭವನ ಅಭಿವೃದ್ಧಿಗೆ ₹50 ಲಕ್ಷ ಬಿಡುಗಡೆಯಾಗಿದ್ದು, ಕೆಆರ್‌ಡಿಎಲ್‌ ಮೂಲಕ ಅಭಿವೃದ್ಧಿ ಕಾರ್ಯ ಶಾಸಕ ಎನ್‌.ಎಚ್‌. ಕೋನರಡ್ಡಿ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಭವನಕ್ಕೆ ಬೇಕಾದ ಪೀಠೋಪಕರಣಗಳು, ಸಭಾಂಗಣದ ವೇದಿಕೆ, ಸೌಂಡ್‌ ವ್ಯವಸ್ಥೆ, ಇತರೆ ರಿಪೇರಿ ಕಾರ್ಯಗಳು, ಸುಣ್ಣ-ಬಣ್ಣ ಸೇರಿದಂತೆ ಸುಸಜ್ಜಿತ ವೇದಿಕೆ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿ ಕಾರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಅನುದಾನ ಕೊಡಲು ಸಿದ್ಧವಿದೆ ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ಪುರಸರಭೆ ಮುಖ್ಯಾಧಿಕಾರಿ ಸಿದ್ದನಗೌಡರ ಹಾಗೂ ಪಂಪ ಸ್ಮಾರಕ ಭವನದ ಸಿಬ್ಬಂದಿ ಇದ್ದರು.