ಆರೆಸ್ಸೆಸ್ ಸಂವಿಧಾನದ ಆಶಯಗಳನ್ನೇ ಹೊಂದಿದೆ: ಆರ್.ಕೆ. ಸಿದ್ಧರಾಮಣ್ಣ

| Published : Oct 15 2025, 02:06 AM IST

ಆರೆಸ್ಸೆಸ್ ಸಂವಿಧಾನದ ಆಶಯಗಳನ್ನೇ ಹೊಂದಿದೆ: ಆರ್.ಕೆ. ಸಿದ್ಧರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಆಶಯಗಳನ್ನೇ ಆರ್‌ಎಸ್‌ಎಸ್ ಹೊಂದಿದ್ದರೂ ಕೂಡ ಕಾಂಗ್ರೆಸ್ಸಿನ ಕೆಲ ಮುಖಂಡರು ಇದನ್ನು ನಿಷೇದಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ. ಅವರು ಸಂವಿಧಾನವನ್ನು ಮತ್ತೊಮ್ಮೆ ಓದಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂವಿಧಾನದ ಆಶಯಗಳನ್ನೇ ಆರ್‌ಎಸ್‌ಎಸ್ ಹೊಂದಿದ್ದರೂ ಕೂಡ ಕಾಂಗ್ರೆಸ್ಸಿನ ಕೆಲ ಮುಖಂಡರು ಇದನ್ನು ನಿಷೇದಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಖಂಡನೀಯ. ಅವರು ಸಂವಿಧಾನವನ್ನು ಮತ್ತೊಮ್ಮೆ ಓದಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಸಚಿವ ಪ್ರಿಯಾಂಕ ಖರ್ಗೆಯವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂವಿಧಾನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ. ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಇದರ ಚಟುವಟಿಕೆಗಳನ್ನು ನಿಷೇದಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ನಡವಳಿ ಪತ್ರವೊಂದನ್ನು ಬರೆದಿದ್ದು, ಸಂಘದ ಬಗ್ಗೆ ದ್ವೇಷ ಭಾವನೆ ಬಿಟ್ಟರೆ ಈ ಪತ್ರದಲ್ಲಿ ಬೇರೇನೂ ಇಲ್ಲ ಎಂದು ದೂರಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕರೆದ ಔತಣ ಕೂಟದಲ್ಲಿಯೂ ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಚರ್ಚೆಯಾಯಿತು ಎಂದು ವಿಷಯ ಮಾಧ್ಯಮಗಳಿಂದ ತಿಳಿಯಿತು. 1925ರ ವಿಜಯದಶಮಿಯಂದು ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು ಮೊನ್ನೆ ವಿಜಯದಶಮಿ ಆಚರಣೆಯವರೆಗೂ ಮುಂದುವರಿದಿದ್ದಲ್ಲದೆ ಇನ್ನು ಮುಂದೆಯೂ ಇದರ ಚಟುವಟಿಕೆಗಳು ಮುಂದುವರಿಯುತ್ತವೆ. ಈ ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಭ್ರಾತೃತ್ವ ಉಳಿಸುವುದೇ ಆರ್‌ಎಸ್‌ಎಸ್‌ನ ಮೂಲ ಉದ್ದೇಶವಾಗಿದೆ ಎಂದರು.

ಪ್ರಿಯಾಂಕ್‌ಖರ್ಗೆ ಅವರು ತಮ್ಮ ಪತ್ರದಲ್ಲಿ ನಡವಳಿ ಎಂಬ ಪದವನ್ನು ಅದರ ಶಿರೋನಾಮೆಯಲ್ಲಿ ಉಲ್ಲೇಖಿಸಿದ್ದು, ಆ ನಡವಳಿ ಏನು ಎಂಬುದನ್ನು ಅವರೇ ಹೇಳಬೇಕು. ಯಾವ ವಿಷಯ ಯಾರ ಮುಂದೆ ಚರ್ಚೆಯಾಯಿತು ಎಂಬುದನ್ನು ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಮತ್ತಿತರರು ಇದ್ದರು.