ಕನ್ನಡಪ್ರಭ ವಾರ್ತೆ ಕಲಾದಗಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮಂಗಳವಾರ ಬಾಗಲಕೋಟೆ ಜಿಲ್ಲೆಯ ಕಲಾದಗಿಗೆ ಆಗಮಿಸಿ ಗ್ರಾಮದ ಪ್ರಮುಖರೊಬ್ಬರ ಮನೆಗೆ ಭೇಟಿ ನೀಡಿ ಮುಂದಿನ ಪ್ರಯಾಣ ಬೆಳೆಸಲಿದ್ದಾರೆ. ಬೆಳಗಾವಿಯಿಂದ ಗದ್ದಕೇರಿ ಮಾರ್ಗವಾಗಿ ವಿಜಯಪುರಕ್ಕೆ ತೆರಳಿರುವ ಮೋಹನ್ ಬಾಗವತ್ ಅವರು ಮಾರ್ಗ ಮಧ್ಯೆ ಕಲಾದಗಿ ಗ್ರಾಮದ ಡಾ.ಪ್ರವೀಣ ಭಜಂತ್ರಿಯವರ ಮನೆಗೆ ಭೇಟಿ ನೀಡಿ ಅರ್ಧ ಗಂಟೆ ಮನೆಯಲ್ಲಿ ವಿಶ್ರಾಂತಿ ಪಡೆದು ನಂತರ ಗದ್ದನಕೇರಿ ಮಾರ್ಗವಾಗಿ ವಿಜಯಪುರಕ್ಕೆ ತೆರಳಲಿದ್ದಾರೆ. ಆರ್.ಎಸ್.ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಭೇಟಿ ನೀಡಲಿರುವ ಡಾ.ಪ್ರವೀಣ ಭಜಂತ್ರಿ ಮನೆಯನ್ನು ಸುರಕ್ಷಾ ದಳದ ಅಧಿಕಾರಿ ಸಿಬ್ಬಂದಿ ಸೋಮವಾರ ಸಂಜೆ ಪರಿಶೀಲಿಸಿ ವಿವಿಧ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಜಗದೀಶ್, ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ಆರ್.ಎಸ್.ಬಿರಾದಾರ ಪಿಎಸೈ ಪ್ರವೀಣ ಬೀಳಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಡಾ.ಭಜಂತ್ರಿಯವರ ಕುಟುಂಬ ಸದಸ್ಯ ಮಾಹಿತಿ ಪಡೆದು ವಿವಿಧ ಸರಕ್ಷಾ ಕ್ರಮಕೈಗೊಳ್ಳುವ ಕ್ರಮ ವಹಿಸಿದರು. ಸುರಕ್ಷಾ ಕ್ರಮಕ್ಕಾಗಿ ಮನೆಯ ಬಳಿ ಪೊಲೀಸ್ ಪಡೆ ಬೀಡು ಬಿಟ್ಟಿದೆ. ಅ