ಸಾರಾಂಶ
ಉತ್ತರ, ದಕ್ಷಿಣ ಪ್ರಾಂತಗಳ ಪ್ರಾಂತಗಳಲ್ಲಿ ನಡೆದಿರುವ ಚಟುವಟಿಕೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳು ಕುರಿತು ಚಚಿರ್ಸಲಾಯಿತು. ಇವುಗಳ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಇತ್ತೀಚಿನ ಆಗು-ಹೋಗುಗಳ ಕುರಿತು ಸಹ ಸುದೀರ್ಘ ಚರ್ಚೆ ನಡೆದಿವೆ ಎಂದು ತಿಳಿದು ಬಂದಿದೆ.
ಧಾರವಾಡ:
ರಾಷ್ಟ್ರೀಯ ಸ್ವಯಂ ಸೇವಕ ಸಂಘಧ ವತಿಯಿಂದ ಇಲ್ಲಿಯ ಯಾಲಕ್ಕಿ ಶೆಟ್ಟರ್ ಕಾಲನಿ ಶಂಕರ ಮಠದಲ್ಲಿ ಉತ್ತರ ಹಾಗೂ ದಕ್ಷಿಣ ಪ್ರಾಂತಗಳ ಸಮನ್ವಯ ಸಮಿತಿ ಸಭೆ ಮಂಗಳವಾರ ಜರುಗಿತು.ಆಯಾ ಪ್ರಾಂತಗಳಲ್ಲಿ ನಡೆದಿರುವ ಚಟುವಟಿಕೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳು ಕುರಿತು ಚಚಿರ್ಸಲಾಯಿತು. ಇವುಗಳ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಇತ್ತೀಚಿನ ಆಗು-ಹೋಗುಗಳ ಕುರಿತು ಸಹ ಸುದೀರ್ಘ ಚರ್ಚೆ ನಡೆದಿವೆ ಎಂದು ತಿಳಿದು ಬಂದಿದೆ. ಸಂಘ ಪರಿವಾರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್, ಲಕ್ಷ್ಮಣ ಹೂಗಾರ, ಅರುಣಕುಮಾರ, ರಾಘವೇಂದ್ರ ಕಾಗವಾಡ, ಸುಧೀರ, ಮುಕುಲ್, ತಿಪ್ಪೇಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ, ವಿಶ್ವ ಹಿಂದು ಪರಿಷದ್, ಬಜರಂಗದಳ, ಬಿಜೆಪಿ, ಎಬಿವಿಪಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಂಘ ಪರಿವಾರದ ಪ್ರಮುಖರು ಸೇರಿ ಸುಮಾರು 150 ಜನರು ಬೈಠಕ್ನಲ್ಲಿ ಪಾಲ್ಗೊಂಡಿದ್ದರು. ಸಮಾಲೋಚನಾ ಸಭೆಬೈಠಕ್ ಬಳಿಕ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳೊಂದಿಗೆ ಬಿ.ವೈ. ವಿಜಯೇಂದ್ರ ಸಮಾಲೋಚನೆ ನಡೆಸಿದರು. ಮುಂದಿನ ದಿನಗಳಲ್ಲಿ ನಡೆಯುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಗೆಲುವಿಗೆ ಈಗಿನಿಂದಲೇ ಶ್ರಮಿಸಬೇಕು. ಹೀಗಾಗಿ ಪಕ್ಷ ಬಲಪಡಿಸುವ ಕಾರ್ಯ ನಡೆಸಬೇಕು ಎಂದು ತಿಳಿಸಿದರು.ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮೋಹನ ರಾಮದುರ್ಗ, ಆನಂದ ಯಾವಗಲ್ಲ, ಸಿದ್ದು ಕಲ್ಯಾಣಶೆಟ್ಟಿ, ಸುಶೀಲಕುಮಾರ ರಾಮದುರ್ಗ ಇದ್ದರು.