ದೇಶಭಕ್ತಿ ಮೂಡಿಸಲೆಂದೇ ಆರ್‌ಎಸ್‌ಎಸ್‌ ಸ್ಥಾಪನೆ

| Published : Oct 27 2025, 12:00 AM IST

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಕೇಶವ ಬಲರಾಂ ಹೆಡಗೆವಾರ್ ಅವರ ಶುದ್ಧ, ಸಾತ್ವಿಕಪ್ರೇಮದ ಧ್ಯೇಯದಿಂದ ಜನರಲ್ಲಿ ನಾಯಕತ್ವ ಗುಣ, ದೇಶಭಕ್ತಿ ಮೂಡಿಸಲು ಜೀವನ ಮೀಸಲಿಟ್ಟವರು ಎಂದು ಆರ್‌ಎಸ್‌ಎಸ್‌ನ ಶಿವಮೊಗ್ಗ ಜಿಲ್ಲಾ ಕಾರ್ಯವಾಹ, ಉಪನ್ಯಾಸಕ ಮಧುಕರ್ ಅಭಿಪ್ರಾಯಪಟ್ಟಿದ್ದಾರೆ.

- ಮಲೇಬೆನ್ನೂರಲ್ಲಿ ಸಂಘದ ಬೈಠಕ್‌ನಲ್ಲಿ ಶಿವಮೊಗ್ಗ ಕಾರ್ಯವಾಹ ಮಧುಕರ್‌

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಕೇಶವ ಬಲರಾಂ ಹೆಡಗೆವಾರ್ ಅವರ ಶುದ್ಧ, ಸಾತ್ವಿಕಪ್ರೇಮದ ಧ್ಯೇಯದಿಂದ ಜನರಲ್ಲಿ ನಾಯಕತ್ವ ಗುಣ, ದೇಶಭಕ್ತಿ ಮೂಡಿಸಲು ಜೀವನ ಮೀಸಲಿಟ್ಟವರು ಎಂದು ಆರ್‌ಎಸ್‌ಎಸ್‌ನ ಶಿವಮೊಗ್ಗ ಜಿಲ್ಲಾ ಕಾರ್ಯವಾಹ, ಉಪನ್ಯಾಸಕ ಮಧುಕರ್ ಅಭಿಪ್ರಾಯಪಟ್ಟರು.

ಪಟ್ಟಣದ ನೀರಾವರಿ ಇಲಾಖೆ ಮೈದಾನದಲ್ಲಿ ಹರಿಹರ ಗ್ರಾಮಾಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಜಯದಶಮಿ ನಿಮಿತ್ತ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಜಾಗೃತಿ ಉಪನ್ಯಾಸ ನೀಡಿದರು. ಕರ್ನಾಟಕದಲ್ಲಿ ೫೦ ವರ್ಷ ಕಳೆದ ಹೆಡಗೆವಾರ್ ಅವರು ವೈದ್ಯ ಪದವಿ ಪಡೆದಿದ್ದರೂ ಭಾರತದಲ್ಲಿ ಸರ್ವರಿಗೂ ಬಾವಿ, ನೀರು ಮತ್ತು ಸ್ಮಶಾನ ದೊರಕಿಸುವುದು ಅವರ ಕನಸಾಗಿತ್ತು ಎಂದರು.

ಕೇಶವ ಬಲರಾಂ ಹಡಗೆವಾರ್ ೧೯೨೫ರಲ್ಲಿ ವಿಜಯ ದಶಮಿಯಂದು ೧೮ ಯುವಕರಿಂದ ಆರ್‌ಎಸ್‌ಎಸ್ ಸ್ಥಾಪನೆ ಮಾಡಿದ್ದರು. ಇಂದು ಈ ಸಂಘಟನೆ ವಿಶ್ವದ ೪೬ ರಾಷ್ಟ್ರಗಳಲ್ಲಿ ತನ್ನ ಒಂದೂವರೆ ಲಕ್ಷ ಚಟುವಟಕೆಗಳ ಸೇವೆ ಮಾಡಿದೆ. ೧೯೪೦ರಿಂದ ಭಾರತದ ಎಲ್ಲ ರಾಜ್ಯಗಳಲ್ಲಿ ಸೇವೆ ವಿಸ್ತಾರವಾಯಿತು ಎಂದರು.

ಹೆಡಗೆವಾರ್ ಸ್ವಾತಂತ್ರ್ಯ ಪೂರ್ವದ ಅಸಹಕಾರ ಚಳವಳಿ, ಜಂಗಲ್ ಆಂದೋಲನ ಕಾರ್ಯದ ಹೋರಾಟದಲ್ಲಿ ಭಾಗವಹಿಸಿದ್ದರು. ಆರ್‌ಎಸ್‌ಎಸ್‌ನ ಆರೂವರೆ ಲಕ್ಷ ಜನರು ಬಲಿದಾನವಾದರು. ಭಾರತ ವಿಭಜನೆಯಾದ ಸಂದರ್ಭದಲ್ಲಿ ೨೦ ಲಕ್ಷ ಜನರ ಹತ್ಯಾಕಾಂಡವಾಯಿತು. ೭೫,೦೦೦ ಜನರು ಜೈಲಿಗೆ ಹೋಗಿರುವುದು ಪ್ರಸ್ತುತ ಸಂಘರ್ಷ ಮಾಡುವವರಿಗೆ ತಿಳಿದಿಲ್ಲ ಎಂದು ದೂರಿದರು.

ಸಂಘದ ಶತಾಬ್ದಿ ಅಂಗವಾಗಿ ಮುಂಬರುವ ವರ್ಷದಲ್ಲಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ, ವಾರ್ಡ್‌ಗಳಲ್ಲಿ ಯುವಕರ ಸಮಾವೇಶ, ಮನೆ ಮನೆ ಭೇಟಿ, ಸದ್ಭಾವನಾ ಕಾರ್ಯಕ್ರಮ, ಜಾನಪದ ಜಾತ್ರೆ, ನಗರಗಳಲ್ಲಿ ಗೋಷ್ಠಿಗಳು, ಏಳು ದಿನಗಳು ಆರೆಸ್ಸೆಸ್‌ ಕಾರ್ಯಗಳ ಪರಿಚಯಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.

ಆರಂಭದಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಯಿತು. ಗಣವೇಶಧಾರಿಗಳಿಗೆ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಹೂಮಳೆ ಸುರಿಸಿ ಆರತಿ ಬೆಳಗಿದರು.

ಮುಖಂಡರಾದ ಶಾಸಕ ಬಿ.ಪಿ. ಹರೀಶ್, ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಬಿ.ಚಿದಾನಂದಪ್ಪ ಹೆಜ್ಜೆ ಹಾಕಿದರು. ಡಿವೈಎಸ್‌ಪಿ ಬಸವರಾಜ್, ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ೯೦ ಪೋಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

- - -

-ಚಿತ್ರ-೧.ಜೆಪಿಜಿ: ಸಾರ್ವಜನಿಕ ಸಭೆಯಲ್ಲಿ ಗಣವೇಷಧಾರಿಗಳು ಪಾಲ್ಗೊಂಡರು.

-ಚಿತ್ರ-೨. ಗಣವೇಷದಲ್ಲಿ ಶಾಸಕ ಹರೀಶ್.