ದೊಡ್ಡ ದಾರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ರುದ್ರಪ್ಪ ಲಮಾಣಿ

| Published : Mar 03 2024, 01:31 AM IST

ಸಾರಾಂಶ

ಅನೇಕ ವರ್ಷಗಳಿಂದ ರೈತರು ಗುತ್ತಲದಲ್ಲಿನ ಐತಿಹಾಸಿಕ ಹಿನ್ನೆಲೆಯ ದೊಡ್ಡ ದಾರಿಯನ್ನು( ದಂಡಿನ ದಾರಿ) ನಿರ್ಮಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ.

ಕನ್ನಡಪ್ರಭ ವಾರ್ತೆ ಗುತ್ತಲ

ಅನೇಕ ವರ್ಷಗಳಿಂದ ರೈತರು ಗುತ್ತಲದಲ್ಲಿನ ಐತಿಹಾಸಿಕ ಹಿನ್ನೆಲೆಯ ದೊಡ್ಡ ದಾರಿಯನ್ನು( ದಂಡಿನ ದಾರಿ) ನಿರ್ಮಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ. ರಸ್ತೆ ನಿರ್ಮಾಣದಿಂದ ನಿತ್ಯ ಕೃಷಿ ಚಟುವಟಿಕೆಗಳಿಗಾಗಿ ಓಡಾಡುವ ನೂರಾರು ರೈತರಿಗೆ ಅನುಕೂಲವಾಗುತ್ತದೆ ಎಂದು ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಗುತ್ತಲದ ಐತಿಹಾಸಿಕ ದೊಡ್ಡ ದಾರಿ (ದಂಡಿನ ದಾರಿ)ಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಪಟ್ಟಣದಲ್ಲಿನ ದೊಡ್ಡ ದಾರಿ ಹಾಗೂ ಕೂರಗುಂದ ರಸ್ತೆ( ಎಸ್‌ಎಸ್‌ಆರ್ ಹೈಸ್ಕೂಲ್‌ ಹಿಂಭಾಗ)ಗೆ ಗುದ್ದಲಿ ಪೂಜೆ ನೆರವೇರಿಸಿದ್ದು ನನಗೆ ಅತೀವ ಸಂತಸ ತಂದಿದೆ. ರೈತರಿಗೆ ಈ ರಸ್ತೆಗಳಲ್ಲಿ ನಿತ್ಯ ಸಂಚರಿಸಲು ತೊಂದರೆಯಾಗಿತ್ತು. ಮುಖ್ಯವಾಗಿ ಮಳೆಗಾಲದಲ್ಲಿ ಇಲ್ಲಿ ಸಂಚಾರ ಮಾಡುವುದು ಅತ್ಯಂತ ಕಠಿಣವಾಗಿತ್ತು. ಎಷ್ಟೋ ರೈತರ ಸಕಾಲಕ್ಕೆ ಬಿತ್ತನೆ ಸಹ ಮಾಡದೇ ಜಮೀನುಗಳನ್ನು ಬೀಳು ಬಿಟ್ಟಿರುವ ವಿಷಯ ಗೊತ್ತಾಗಿ ನಮಗೆ ನೋವಾಗಿತ್ತು. ಈ ಕಾರಣದಿಂದ ಈ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಎರಡು ರಸ್ತೆಗಳನ್ನು ಸಂಪೂರ್ಣ ಮುಗಿಸುವ ಜೊತೆಗೆ ಗಳಗನಾಥ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ ಮಾತನಾಡಿ, ಗುತ್ತಲದ ಸಮಗ್ರ ಅಭಿವೃದ್ಧಿಗಾಗಿ ಶಾಸಕ ರುದ್ರಪ್ಪ ಲಮಾಣಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಗುತ್ತಲದ ಕುಡಿಯುವ ನೀರಿನ ಯೋಜನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ ಮಾಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಗುತ್ತಲ ಪಟ್ಟಣದ ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭವಾಗಲಿದೆ. ಅನೇಕ ದೇವಸ್ಥಾನಗಳನ್ನು ಈ ಹಿಂದೆಯೇ ಅಭಿವೃದ್ಧಿ ಮಾಡಿದ್ದಾರೆ ಎಂದರು.

ಇದೇ ವೇಳೆ ದಂಡಿನ ದಾರಿಯಲ್ಲಿ ಸಂಚರಿಸುವ ರೈತರು ರುದ್ರಪ್ಪ ಲಮಾಣಿ, ಕಾಡಾ ಸಹಾಯಕ ಎಂಜಿನಿಯರ್‌ ಮಂಜುನಾಥ ಗಾಣಗೇರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭರಮಣ್ಣ ಹಾದಿಮನಿ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರದೀಪ ಸಾಲಗೇರಿ, ಮಹ್ಮದಹನಿಫ ರಿತ್ತಿ, ಖಲೀಲಹ್ಮದ ಖಾಜಿ, ಬಸಣ್ಣ ನೆಗಳೂರ, ವಿಎಸ್‌ಎಸ್ ಉಪಾಧ್ಯಕ್ಷ ಕೊಟೆಪ್ಪ ಗೊರವರ, ರೈತರಾದ ಚನ್ನಬಸಪ್ಪ ಬೆನ್ನೂರ, ಮೃತ್ಯುಂಜಯ ಬುಕ್ಕಶೆಟ್ಟರ, ಅಜ್ಜಪ್ಪ ತರ್ಲಿ(ಕುರವತ್ತಿ), ಪರಶುರಾಮ ಗಿರಿಯಪ್ಪನವರ, ಮಂಜುನಾಥ ದಪ್ಪೇರ, ಬಸವರಾಜ ಬೆನ್ನೂರ, ವಿನೋದ ಗುತ್ತಲ, ವಿಜಯ ಚಲವಾದಿ, ಈರಣ್ಣ ಕಬ್ಬಿಣದ, ಸುರೇಶ ಲಮಾಣಿ, ಮಾಲತೇಶ ಬಾಲಣ್ಣನವರ, ಮಾಲತೇಶ ಕಿತ್ತೂರ, ಮಲ್ಲೇಶ ರಿತ್ತಿ(ಅಂಗಡಿ), ಅಜ್ಜಪ್ಪ ಗಿರಿಯಪ್ಪನವರ, ಮಾರುತಿ ಚಿಗರಿ, ನಿಂಗರಾಜ ನಾಯಕ, ಸಂತೋಷ ಲಮಾಣಿ, ಮಲ್ಲೇಶ ಲಮಾಣಿ, ಶೇಖರ ನರಸಣ್ಣನವರ ಸೇರಿದಂತೆ ಅನೇಕರಿದ್ದರು.

ಪಿ.ಎನ್. ಹೇಮಗಿರಿಮಠ ಕಾರ್ಯಕ್ರಮ ನಿರೂಪಿಸಿದರು.