ಸಾರಾಂಶ
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಯಾಗವನ್ನು ನಡೆಸಲಾಯಿತು. ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿ ಮಾರ್ಗದರ್ಶನದಲ್ಲಿ ರುದ್ರಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ವಿಧವತ್ತಾಗಿ ನಡೆಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಯಾಗವನ್ನು ನಡೆಸಲಾಯಿತು. ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿ ಮಾರ್ಗದರ್ಶನದಲ್ಲಿ ರುದ್ರಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದದವರು ವಿಧವತ್ತಾಗಿ ನಡೆಸಿಕೊಟ್ಟರು.ಇದಕ್ಕೆ ಮೊದಲು ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಸಾರ್ಜನಿಕರಿಗೆ ಸಂಕಲ್ಪ ವಿಧಿಗಳನ್ನು ನಡೆಸಿ ಶತರುದ್ರಾಭಿಷೇಶಕ, ನವಕ ಪ್ರಧಾನ, ಭಜನೆ ಕಾರ್ಯಕ್ರಮ, ಶ್ರೀದೇವರಿಗೆ ವಿಶೇಷ ಅಲಂಕಾರ, ಯಾಗದ ಪುರ್ಣಾಹುತಿ ಬಳಿಕ ಮಹಾಪೂಜೆ, ಪಲ್ಲಪೂಜೆ ನಡೆಯಿತು.ಬಳಿಕ ನಡೆದ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ 3 ಸಾವಿರಕ್ಕೂ ಹೆಚ್ಚಿನ ಭಕ್ತರು ಭೋಜನಾ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾಮ್ ಬನ್ನಂಜೆ, ದೇವಳದ ಅರ್ಚಕ ವಾಸುದೇವ ಉಪಧ್ಯಾಯ, ನಗರಸಭಾ ಸದಸ್ಯ ಟಿ.ಜಿ. ಹೆಗ್ದೆ, ಸವಿತಾ ಹರೀಶ್ ರಾಮ್, ದೇವಳದ ಸಮಿತಿಯ ಸದಸ್ಯರಾದ ವಿಠಲ್ ಶೆಟ್ಟಿ, ಭುಜಂಗ ಶೆಟ್ಟಿ, ಸುಧಾಕರ್ ಮಲ್ಯ, ಸುರೇಶ ಶೇರಿಗಾರ, ದಯಾನಂದ ಕಲ್ಮಾಡಿ, ಅನುಪಮಾ ಆನಂದ ಸುವರ್ಣ, ಮಾಧವ ಬನ್ನಂಜೆ, ರವಿರಾಜ್ ಭಟ್, ಪ್ರಭಾಕರ್ ಶೆಟ್ಟಿ, ಅರುಣ್ ಕುಮಾರ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.