ಸಮಗ್ರತೆಗಾಗಿ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ

| Published : Aug 18 2024, 01:51 AM IST

ಸಾರಾಂಶ

ಎಲ್ಲ ಶಾಲೆಗಳಿಗೆ ಸಮಗ್ರತೆಗಾಗಿ ಓಟ ಎಂಬ ಮ್ಯಾರಥಾನ್‌ ಸ್ಪರ್ಧೆ ಆಯೋಜಿಸಲಾಗಿತ್ತು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಯ ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಪೋಕ್ಲು ಕ್ಲಸ್ಟರ್ ಎಲ್ಲ ಶಾಲೆಗಳಿಗೆ ಸಮಗ್ರತೆಗಾಗಿ ಓಟ ಎಂಬ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನಾಪೋಕ್ಲು ಠಾಣಾ ವರಿಷ್ಠಾಧಿಕಾರಿಗಳಾದ ಮಂಜುನಾಥ್ ಅವರು ಮತ್ತು ಶಾಲೆಯ ಅಧ್ಯಕ್ಷ ರಾಜ ಚರ್ಮಣ ಧ್ವಜ ಹಾರಿಸಿ ಮ್ಯಾರಥಾನ್ ಸ್ಪರ್ಧೆ ಗೆ ಚಾಲನೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರು ಮಕ್ಕಳಿಗೆ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಭಾರತದ ಇತಿಹಾಸವನ್ನು ಅತ್ಯುತ್ತಮವಾಗಿ ವಿವರಿಸಿದ್ದರು. ಹಿಂದೆ ಬ್ರಿಟಿಷರು ನಮ್ಮನ್ನು ಹೇಗೆ ಆಳ್ವಿಕೆ ಮಾಡಿದರು. ಅದಕ್ಕಾಗಿ ಹೋರಾಡಿದವರನ್ನ ಸ್ಮರಿಸಿ ಅವರಿಗೆ ಗೌರವವನ್ನು ಸಲ್ಲಿಸಿದರು.

ನಂತರ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ರತ್ನ ಚರ್ಮಣ, ವಿವಿಧ ಶಾಲೆಯ ಶಿಕ್ಷಕರೂ, ಸಿಬ್ಬಂದಿ ಮತ್ತು ಪೋಷಕರು, ಹಾಜರಿದ್ದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಶಾಲೆ, ಶ್ರೀರಾಮ ಟ್ರಸ್ಟ್, ಸೇಕ್ರಡ್ ಹಾರ್ಟ್, ಕರ್ನಾಟಕ ಪಬ್ಲಿಕ್ ಶಾಲೆ, ಮರ್ಕಜ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಬಾಲಕರ ವಿಭಾಗದಲ್ಲಿ ಶ್ರೀ ರಾಮ ಟ್ರಸ್ಟ ನ ಕಿರಿಟ್ ಸೋಮಯ್ಯ ಪ್ರಥಮ, ದ್ವಿತೀಯ ಅಂಕುರ್ ಪಬ್ಲಿಕ್ ಶಾಲೆಯ ಧೀಮಂತ ಎ.ಎಸ್, ಸೇಕ್ರೇಡ್ ಹಾರ್ಟ್ ಶಾಲೆಯ ಜೀವನ್ ಪಿ.ಜಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಬಾಲಕಿಯರ ವಿಭಾಗದಲ್ಲಿ ಅಂಕುರು ಪಬ್ಲಿಕ್ ಶಾಲೆಯ ಪಾತಿಮತ್ ಮುಪೀದ ಪಿ.ಎ ಪ್ರಥಮ, ರಾಮಟ್ರಸ್ಟ್‌ನ ಕೃಪ ಡಿ.ಪಿ. ದ್ವಿತೀಯ, ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಸಫವಾನ, ತೃತೀಯ ಬಹುಮಾನ ಪಡೆದುಕೊಂಡರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.