ಸಾರಾಂಶ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ಎದುರಾಗಿದೆ.
ಕಾರವಾರ: ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಯಕ್ಕೆ ಅನುಸಾರವಾಗಿ ದೇವಳಮಕ್ಕಿ, ನಗೆಕೋವೆ, ಮಲ್ಲಾಪುರ ಹಾಗೂ ಹಳಗೆಜೂಗಕ್ಕೆ ಬಸ್ ಸಂಚಾರ ಕಲ್ಪಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ರಸ್ತೆ ಸಾರಿಗೆ ಸಂಸ್ಥೆಯ ಕಾರವಾರ ಘಟಕದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ಎದುರಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಒಂದೊಂದು ತರಗತಿಯೂ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯಕ್ಕೆ ಬಸ್ ಸಂಚಾರ ಇಲ್ಲದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಎದುರಾಗಲಿದೆ. ಇದರಿಂದ ದೇವಳಮಕ್ಕಿ, ನಗೆಕೋವೆ, ಶಿರ್ವೆ, ಮುಡಗೇರಿ, ಮಲ್ಲಾಪುರ (ಬೆಳಗ್ಗೆ ಏಳು ಗಂಟೆಗೆ) ಮತ್ತು ಹಳಗೆಜೂಗ (ವಸತಿ ಬಸ್ ) ಸಂಚಾರವನ್ನು ಕೂಡಲೇ ಕಲ್ಪಿಸಬೇಕು. ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ಇರುವ ಬಸ್ ಸಂಚಾರವನ್ನು ಕಲ್ಪಿಸಬೇಕು ಎಂದು ಅವರು ಲಿಖಿತ ಮನವಿ ನೀಡಿ ಒತ್ತಾಯಿಸಿದರು.ಪ್ರಮುಖರಾದ ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ಸಂತೋಷ ಗೌಡ, ಅಸ್ನೋಟಿ ಗ್ರಾಪಂ ಅಧ್ಯಕ್ಷ ಸಂಜಯ ಸಾಳುಂಕೆ, ಮುಡಗೇರಿ ಗ್ರಾಪಂ ಅಧ್ಯಕ್ಷ ನಂದಕಿಶೋರ ನಾಯ್ಕ, ಸುಭಾಷ ಗುನಗಿ ಉಪಸ್ಥಿತರಿದ್ದರು.