೩೨ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ₹30 ಕೋಟಿ ಅನುದಾನ: ಡಾ.ಶರಣಪ್ರಕಾಶ ಪಾಟೀಲ

| Published : Sep 24 2024, 01:47 AM IST

೩೨ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ₹30 ಕೋಟಿ ಅನುದಾನ: ಡಾ.ಶರಣಪ್ರಕಾಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸೇಡಂ ಮತಕ್ಷೇತ್ರದಲ್ಲಿ ಬರುವ ೩೨ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ನಡೆಯುತ್ತಿವೆ. ಕೊಡಂಪಳ್ಳಿ, ಕೆರೋಳಿ, ನಿಡಗುಂದಾ, ಹಲಕೋಡಾ, ಪೋತಂಗಲ, ಜಟ್ಟೂರ್, ಗಡಿಕೇಶ್ವರ, ಹೊಡೆಬೀರನಳ್ಳಿ ಮುಖ್ಯರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದೆ ಎಂದು ಚಿಂಚೋಳಿಯ ಸುಲೇಪೇಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಡಿಗಲ್ಲು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಚಿಂಚೋಳಿ ತಾಲೂಕಿನ ಸುಲೇಪೇಟ ವಲಯದಲ್ಲಿ ಬರುವ ೩೨ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಮೈಕ್ರೋ ಯೋಜನೆ ಅಡಿಯಲ್ಲಿ ಗ್ರಾಮೀಣ ರಸ್ತೆ ಸುಧಾರಣೆಗಾಗಿ ೩೦ ಕೋಟಿ ರು. ಅನುದಾನ ಮಂಜೂರಿಗೊಳಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್‌ ಇಲಾಖೆ ವತಿಯಂದ ಏರ್ಪಡಿಸಿದ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನಾ ಸಮಾರಂಭ ನೇರವೇರಿಸಿದ ನಂತರ ಅವರು ಸಾರ್ವಜನಿಕರ ಉದ್ದೇಶಿಸಿ ಅವರು ಮಾತನಾಡಿದರು.

ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರಿಗೊಳಿಸಿ ಅವುಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ಮೈಕ್ರೋ ಯೋಜನೆ ಅಡಿಯಲ್ಲಿ ೧.೮೫ ಕೋಟಿ ರು. ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ, ಯಾಕಾಪೂರ ಗ್ರಾಮದಲ್ಲಿ ೮೦ ಲಕ್ಷ ರು. ವೆಚ್ಚದಲ್ಲಿ ವಾರ್ಡ್‌.೧ ಮತ್ತು ೫ ವಾರ್ಡ್‌ಗಳಲ್ಲಿ ಸಿಮೆಂಟ್‌ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಸುಲೇಪೇಟ ಹೈಸ್ಕೂಲ್‌ ಶಾಲೆ ಕೋಣೆ ನಿರ್ಮಿಸಲು ೪೫.೮೦ ಲಕ್ಷ ರು., ಸುಲೇಪೇಟ ಪ್ರಾಥಮಿಕ ಆರೋಗ್ಯ ಆಸ್ಪತ್ರೆ ದುರಸ್ತಿ ಮತ್ತು ಉಪಕರಣಗಳಿಗಾಗಿ ೭೪ ಲಕ್ಷ ರು. ನೀಡಲಾಗಿದೆ ಎಂದು ತಿಳಿಸಿದರು.

ಸೇಡಂ ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಬರುವ ಎಲ್ಲಮ್ಮ ಗೇಟ್‌ನಿಂದ ನಿಡಗುಂದಾ ಕರ್ಚಖೇಡ ಕ್ರಾಸ್‌ವರೆಗೆ ಡಾಂಬರೀಕರಣಕ್ಕಾಗಿ ೩.೫೦ ಕೋಟಿ ರು. ಮಂಜೂರಿಗೊಳಿಸಲಾಗಿದೆ. ಸುಲೇಪೇಟ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸೇಡಂ ಮತಕ್ಷೇತ್ರದಲ್ಲಿ ಬರುವ ೩೨ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ನಡೆಯುತ್ತಿವೆ. ಕೊಡಂಪಳ್ಳಿ, ಕೆರೋಳಿ, ನಿಡಗುಂದಾ, ಹಲಕೋಡಾ, ಪೋತಂಗಲ, ಜಟ್ಟೂರ್, ಗಡಿಕೇಶ್ವರ, ಹೊಡೆಬೀರನಳ್ಳಿ ಮುಖ್ಯರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿಪಡಿಸುವುದು ಮತ್ತು ಜನರ ಹಿತ ಕಾಪಾಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ೧೧.೭೭೦ ಕೋಟಿ ರು. ನೀಡಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಗೇಶ್ವರರಾವ ಮಾಲಿಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಹೇರ ಪಟೇಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸುಲೇಪೇಟ ಗ್ರಾಪಂ ಅಧ್ಯಕ್ಷ ಸಂತೋಷ ರಾಠೋಡ, ಶರಣರೆಡ್ಡಿ ಪಾಟೀಲ ಸೇಡಂ, ಬಸವರಾಜ ಪಾಟೀಲ ಊಡಗಿ, ಬಸವರಾಜ ಸಜ್ಜನಶೆಟ್ಟಿ, ಬಸವರಾಜ ಬೀರಾದಾರ, ಸುನೀಲ್‌ಕುಮಾರ ಕೋರಿ, ಮಹಾರುದ್ರಪ್ಪ ದೇಸಾಯಿ, ಮೇಘರಾಜ ರಾಠೋಡ, ಶಾಮರಾವ ಮಾದೇಶಿ, ರುದ್ರಶೆಟ್ಟಿ ಪಡಶೆಟ್ಟಿ, ನಾಸೀರ ಪಟೇಲ ಮದರಗಿ, ಮಹೆಮೂದ ಪಟೇಲ, ಡಾ.ಮಹಮ್ಮದ ಗಫಾರ, ಇಇ ಡಿ.ಎಲ್ ಗಾಜರೆ, ಎಇಇ ಬಸವರಾಜ ಬೈನೂರ, ಎಇಇ ಪ್ರವೀಣಕುಮಾರ, ತಾಪಂ ಅಧಿಕಾರಿ ಶಂಕರ ರಾಠೋಡ, ಲಕ್ಷ್ಮಣ ಆವಂಟಿ, ಬಸವರಾಜ ಮಲಿ, ಸಂತೋಷ ಗುತ್ತೆದಾರ, ಚಾಂದಪಾಶ ಮೋಮಿನ, ರೇವಣಸಿದ್ದ ಅಣಕಲ, ನಾಗೇಂದ್ರಪ್ಪ ಬೆಡಕಪಳ್ಳಿ ಇನ್ನಿತರಿದ್ದರು.

ರಜಾಕ ಪಟೇಲ ಸ್ವಾಗತಿಸಿದರು. ಮಲ್ಲಿಕಾರ್ಜನ ಗುಲಗುಂಜಿ ನಿರೂಪಿಸಿದರು. ಸಂಪತಕುಮಾರ ಬೆಳ್ಳಿಚುಕ್ಕಿ ವಂದಿಸಿದರು.