ಸಾರಾಂಶ
ಹೊಸಕೋಟೆ: ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ. ಕ್ರೀಡೆಯ ಮಹತ್ವ ಅರಿತು ಆಟವಾಡಬೇಕು ಎಂದು ಶಾಲಾ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರೇಗೌಡ ತಿಳಿಸಿದರು.
ಹೊಸಕೋಟೆ: ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ. ಕ್ರೀಡೆಯ ಮಹತ್ವ ಅರಿತು ಆಟವಾಡಬೇಕು ಎಂದು ಶಾಲಾ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರೇಗೌಡ ತಿಳಿಸಿದರು.
ನಂದಗುಡಿ ಹೋಬಳಿಯ ಹಿಂಡಿಗನಾಳದ ಯಂಗ್ ಮೈಂಡ್ ಶಾಲಾ ಆವರಣದಲ್ಲಿ ಸತತ ೪ನೇ ಬಾರಿ ಪುಟ್ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಅಯ್ಕೆಯಾದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಶಕ್ತಿ ಸಾಮರ್ಥ್ಯ ಅಡಗಿದೆ. ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟಕ್ಕೆ ಅಯ್ಕೆಯಾದ ಪುಟ್‌ಬಾಲ್ ಆಟಗಾರರನ್ನು ಸನ್ಮಾನಿಸಲಾಯಿತು. ಯಂಗ್ ಮೈಂಡ್ ಶಾಲಾ ವ್ಯವಸ್ಥಾಪಕ ಎ.ಶಂಕರರೆಡ್ಡಿ, ಮುಖ್ಯ ಶಿಕ್ಷಕಿ ರಿನ್ಸಿ ಮ್ಯಾಥ್ಯೂ, ಶಿಕ್ಷಕರಾದ ಬೊಕ್ಕಂ, ಮೇರಿ, ಕಲ್ಪನಾ, ಸ್ವಾತಿ, ಸೆಲೆನಿಯೋ, ತತಾಂಗ್, ಇಚ್ಚಿ ಪುಟ್‌ಬಾಲ್ ತಂಡದ ನಾಯಕ ಸಮರ್ಥ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಫೋಟೋ: 9 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ಹಿಂಡಿಗನಾಳದ ಯಂಗ್ ಮೈಂಡ್ ಶಾಲಾ ಆವರಣದಲ್ಲಿ ಸತತ 4ನೇ ಬಾರಿ ಪುಟ್ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ಮಟಕ್ಕೆ ಆಯ್ಕೆಯಾದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.