ಸಾರಾಂಶ
ಬೀರೂರು, ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ನಡೆದಾಗ ನಮ್ಮಂತಹ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆ ಗುರುತಿಸಲು ಸಾಧ್ಯ ವಾಗುತ್ತದೆ ಎಂದು ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಚಿಕ್ಕಬಾಸೂರು ಅನಂತು ತಿಳಿಸಿದರು.
ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಕನ್ನಡಪ್ರಭ ವಾರ್ತೆ, ಬೀರೂರುಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ನಡೆದಾಗ ನಮ್ಮಂತಹ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆ ಗುರುತಿಸಲು ಸಾಧ್ಯ ವಾಗುತ್ತದೆ ಎಂದು ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಚಿಕ್ಕಬಾಸೂರು ಅನಂತು ತಿಳಿಸಿದರು.
ತಮ್ಮ ಸ್ವಗೃಹದಲ್ಲಿ ಸಮ್ಮೇಳನದ ಆಹ್ವಾನ ಸ್ವೀಕರಿಸಿ ಮಾತನಾಡಿ ನನಗೆ ಈ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ತಾವೆಲ್ಲರೂ ಕೂಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದರು.ಚಿಕ್ಕ ಬಾಸೂರು ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಲ್ಮೀಕ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೈದಾನ ದಲ್ಲಿ ಅ. 26ರ ಭಾನುವಾರ ಏರ್ಪಡಿಸಿದ್ದು ಈ ಸಮ್ಮೇಳನಕ್ಕೆ ಲೇಖಕ ಚಿಕ್ಕಬಾಸೂರು ಅನಂತು ಅವರ ಆಯ್ಕೆ ಹೆಚ್ಚು ಮಹತ್ವ ತಂದುಕೊಟ್ಟಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ಸಿ. ಜಿ. ತಿಮ್ಮಯ್ಯ ಮಾತನಾಡಿ ನಮ್ಮ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದನ್ನು ಗ್ರಾಮದ ಎಲ್ಲ ಗ್ರಾಮಸ್ಥರು ಕೂಡಿ ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್. ಪರಮೇಶ್ ಈ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಕಡೂರು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಇರಿಸಿದ್ದು ಅದರಲ್ಲಿ ಪ್ರಮುಖವಾಗಿ ಕೃಷಿಗೋಷ್ಠಿಯಲ್ಲಿ. ಪ್ರಗತಿಪರ ರೈತ ಮನಸುಳಿ ಮೋಹನ್ ಮಾತನಾಡಲಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಹರ್ಷಿಣಿ ಪ್ರವೇಶ, ರಘು ಅವರು ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣ ಮತ್ತು ಉದ್ಯೋಗ ವಿಷಯ ಕುರಿತಂತೆ ಪ್ರಬಂಧ ಮಂಡಿಸಲಿದ್ದಾರೆ ಜಾನಪದ ಗೋಷ್ಠಿಯಲ್ಲಿ ಆಶಯ ನುಡಿಯನ್ನು ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್. ಎಸ್. ವೆಂಕಟೇಶ್, ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಜಾನಪದ ವರ್ತಮಾನದಲ್ಲಿ ಜಾನಪದ ಕುರಿತು ಮಾತನಾಡಲಿದ್ದು , ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಜಾನಪದ ಬಾಲಾಜಿ ಉದ್ಘಾಟಿಸಲಿದ್ದಾರೆ.ಸಮಾರೋಪ ಭಾಷಣವನ್ನು ಜಿಪಂ ಸಿಇಒ ಎಚ್. ಎಸ್. ಕೀರ್ತನಾ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಶ್ರೀ ಪ್ರಶಸ್ತಿಯನ್ನು ಸ್ವರ್ಣಂಬ ದೇವಾಲಯದ ಧರ್ಮದರ್ಶಿ ಡಾ. ಎಂಟಿ ಸತ್ಯನಾರಾಯಣ,ಕವಿತಾ ಆನಂದ್, ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಸತೀಶ್ ಮತ್ತು ಸಿ. ಜಿ. ತಿಮ್ಮಯ್ಯ, ಗ್ರಾಮದ ವಿವಿಧ ಗಣ್ಯರ ಸಾಧನೆ ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷ ಬಿ.ಪ್ರಕಾಶ್, ಗೌರವಾಧ್ಯಕ್ಷ ಯರದಕೆರೆ ಎಂ. ರಾಜಪ್ಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್, ಕೋಶಾಧ್ಯಕ್ಷ ಎಚ್. ಕೆ. ಮಂಜುನಾಥ್,ರವಿಚಂದ್ರ .ಕೆ.ಜಿ ವಸಂತ ಕುಮಾರ್, ಕೃಷ್ಣಮೂರ್ತಿ, ಗಿರೀಶ್, ಚಂದ್ರಶೇಖರಪ್ಪ, ಕುಮಾರ, ಅನಂತು, ಬಾಸೂರು ಶ್ರೀನಿವಾಸ್, ಕಲ್ಲೇಶಪ್ಪ ಇತರರು ಉಪಸ್ಥಿತರಿದ್ದರು.20 ಬೀರೂರು 2ಚಿಕ್ಕಬಾಸೂರು ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷ ಅನಂತು ಅವರಿಗೆ ಗ್ರಾಮ ಸಾಹಿತ್ಯ ಸಮ್ಮೇಳನಕ್ಕೆ ಸಿ. ಜಿ. ತಿಮ್ಮಯ್ಯ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪರಮೇಶ್ ಸೇರಿದಂತೆ ಮತ್ತಿತರರು ಆಹ್ವಾನ ನೀಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))