ಸಾರಾಂಶ
ಹಳ್ಳಬಿದ್ದ ರಸ್ತೆಗಳಿಂದ ಗ್ರಾಮದಲ್ಲಿ ಓಡಾಡಲು ರೈತರು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದನನು ಅರಿತು ಕಾಮಗಾರಿ ಆರಂಭಿಸಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಅನುದಾನ ಸಿಗದೆ ತಾಲೂಕಿನ ಅಭಿವೃದ್ದಿ ಇರಲಿ ಜನರ ಸಮಸ್ಯೆಗೆ ಸ್ಪಂದಿಸಲು ಕಷ್ಟವಾಗುತ್ತಿದೆ. ಹೋರಾಟ ಮಾಡಿಯಾದರೂ ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸುವೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಸ್ತೆಗಳ ಸಮಗ್ರ ಅಭಿವೃದ್ಧಿಯಿಂದ ಗ್ರಾಮಗಳಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಮಾಕವಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸುಮಾರು 5 ಕೋಟಿ ರು.ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದರು.
ಹಳ್ಳಬಿದ್ದ ರಸ್ತೆಗಳಿಂದ ಗ್ರಾಮದಲ್ಲಿ ಓಡಾಡಲು ರೈತರು ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದನನು ಅರಿತು ಕಾಮಗಾರಿ ಆರಂಭಿಸಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಅನುದಾನ ಸಿಗದೆ ತಾಲೂಕಿನ ಅಭಿವೃದ್ದಿ ಇರಲಿ ಜನರ ಸಮಸ್ಯೆಗೆ ಸ್ಪಂದಿಸಲು ಕಷ್ಟವಾಗುತ್ತಿದೆ. ಹೋರಾಟ ಮಾಡಿಯಾದರೂ ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ನುಡಿದರು.ಈ ವೇಳೆ ಕಸಬಾ ಜೆಡಿಎಸ್ ಅಧ್ಯಕ್ಷ ವಸಂತ್ ಕುಮಾರ್, ಪಿಡಿಒ ಶೈಲಜಾ, ಡಿ. ಮಂಜುನಾಥ್, ಗ್ರಾಪಂ ಸದಸ್ಯರಾದ ಮಂಜೇಗೌಡ,ಕಾಯಿ ಮಂಜು,ಮಾಜಿ ಅಧ್ಯಕ್ಷ ಬಲರಾಮೇಗೌಡ, ಮುಖಂಡರಾದ ಕೃಷ್ಣೇಗೌಡ, ಮಿಲ್ ಯೋಗೇಶ್, ಪ್ರದೀಪ್, ಲೋಕೇಶ್, ವಿಶ್ವನಾಥ್, ಚಲುವರಾಜು, ಸಂತೋಷ್ , ಹೆಗ್ಗಡಹಳ್ಳಿ ಅಲೋಕ್, ಮಧು, ಚಲುವರಾಜು, ಗುತ್ತಿಗೆದಾರ ರಾಜೇನಹಳ್ಳಿ ರೇವಣ್ಣ, ವಡ್ಡರಹಳ್ಳಿ ಮಂಜು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಇದ್ದರು.
ಇಂದು ವಿಶ್ವ ವಿಕಲಚೇತನರ ದಿನಾಚರಣೆಮಂಡ್ಯ:
ಅಲಿಂಕೋ ಸಂಸ್ಥೆ, ಗ್ರಾಮೀಣ ಪುನರ್ ವಸತಿ ಯೋಜನೆ ಕಾರ್ಯಕರ್ತರು ಮತ್ತು ಕರ್ನಾಟಕ ಅಂಗವಿಕಲ ರಾಜ್ಯ ಒಕ್ಕೂಟ, ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಡಿ. ೩ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ನಡೆಯಲಿದೆ ಎಂದು ಕರ್ನಾಟಕ ಅಂಗವಿಕಲ ಒಕ್ಕೂಟದ ರಾಜ್ಯ ಸಂಯೋಜಕ ನಂದೀಶ್ ತಿಳಿಸಿದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ವಿಕಲಚೇತನರಿಂದ ಜಾಥಾ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶೇಷ ಸಾಧನೆ ಮಾಡಿರುವ ವಿಕಲಚೇತನರಿಗೆ ಸನ್ಮಾನ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಅಲಿಂಕೋ ಸಂಸ್ಥೆ ವತಿಯಿಂದ ಸಾಧನ ಸಲಕರಣೆಗಳ ವಿತರಣೆ ಹಾಗೂ ವಿಕಲಚೇತನರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಕಲಚೇತನರಿಗೆ ಹಬ್ಬವಾಗಿರುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಒಕ್ಕೂಟದ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಎಂ.ಮಂಜುನಾಥ್ ಗೋಷ್ಠಿಯಲ್ಲಿದ್ದರು.