ನಿರ್ಗತಿಕರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಪಾಟೀಲ್

| Published : Dec 15 2024, 02:02 AM IST

ನಿರ್ಗತಿಕರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

Rural development scheme for the needy Cooperative: Patil

-ವಿಕಲಚೇತನ ಮಹಿಬೂಬಗೆ ಜಿಪಂ ಮಾಜಿ ಸದಸ್ಯ ಎಚ್.ಸಿ. ಪಾಟೀಲ್‌ ಕಿಟ್ ವಿತರಣೆ

----

ಕನ್ನಡಪ್ರಭ ವಾರ್ತೆ ಹುಣಸಗಿ

ನಿರ್ಗತಿಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ. ಪಾಟೀಲ್ ಹೇಳಿದರು.

ರಾಜನ ಕೋಳೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ನಿರ್ಗತಿಕ ವಿಕಲಚೇತನರಿಗೆ ದೈನಂದಿನ ಬಳಕೆ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಅತ್ಯಂತ ಬಡವರಿಗೆ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ನೀಡುವುದರೊಂದಿಗೆ ಆರ್ಥಿಕ ಸುಧಾರಣೆಗೆ ಬೆನ್ನುತಟ್ಟುವ ಕೆಲಸ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಮಹಿಳೆಯರ ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗಕ್ಕಾಗಿ ಅಗತ್ಯ ನೆರವು ಹಾಗೂ ಮಾಸಾಶನ ಒದಗಿಸುತ್ತಿದೆ. ಹೀಗಾಗಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಸದುಪಯೋಗಿಸಿಕೊಂಡು ಸಬಲರಾಗಬೇಕು ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ಭೀಮಣ್ಣ, ಬಸವರಾಜ್ ಪಡೆಕನೂರ್ ವಲಯ ಮೇಲ್ವಿಚಾರಕ ಸುಧಾ, ಸೇವಾ ಪ್ರತಿನಿಧಿ ಸಂಗಮ್ಮ, ರೇಣುಕಾ, ಸೈದಾಭಿ, ಮಲ್ಲಮ್ಮ ಇದ್ದರು.

----

ಫೋಟೊ: ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮದಲ್ಲಿ ವಿಕಲಚೇತನ ಮಹಿಬೂಬ ಅವರಿಗೆ ದೈನಂದಿನ ವಸ್ತುಗಳ ಕಿಟ್‌ ಗಳನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ. ಪಾಟೀಲ್ ಅವರು ವಿತರಿಸಿದರು.

14ವೈಡಿಆರ್11: