ಚಕ್ರಬಾವಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭಾವಕ್ಕೆ ಚಾಲನೆ

| Published : Jul 21 2025, 01:30 AM IST

ಚಕ್ರಬಾವಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭಾವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಅಂತಿಮ ವರ್ಷದ ಬಿಎಸ್ಸಿ ಕೃಷಿ ಪದವಿ ವಿದ್ಯಾರ್ಥಿಗಳು 3 ತಿಂಗಳು ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭಾವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಮಾಗಡಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಅಂತಿಮ ವರ್ಷದ ಬಿಎಸ್ಸಿ ಕೃಷಿ ಪದವಿ ವಿದ್ಯಾರ್ಥಿಗಳು 3 ತಿಂಗಳು ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭಾವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಗ್ರಾಮದ ಜಂಗಮ ಮಠದ ಆವರಣದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ರಾಶಿ ಪೂಜೆ, ಭೂಮಿ, ನೇಗಿಲು ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ವಿದ್ಯಾರ್ಥಿ ವಿವೇಚನ್, ಬಿಎಸ್ಸಿ ಕೃಷಿ ಪದವಿ, ಕೃಷಿ ವ್ಯವಹಾರ ನಿರ್ವಹಣೆ ಪದವಿ ವಿದ್ಯಾರ್ಥಿಗಳು ರೈತರಿಂದ ಮಾಹಿತಿ ಸಂಗ್ರಹಿಸಿ, ರೈತ ಮತ್ತು ಕೃಷಿ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಪ್ರತಿದಿನ ಇಬ್ಬರು ವಿದ್ಯಾರ್ಥಿಗಳು ಮಾಡಬಾಳ್ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ರೈತರ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಬೀಜೋಪಚಾರ, ಎರೆಹುಳು, ಗೊಬ್ಬರದ ಮಹತ್ವ, ಬೆಳೆಗಳಿಗೆ ಬೇಕಾಗಿರುವ ಪೋಷಕಾಂಶಗಳ ಮಹತ್ವ, ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯದ ಮಾಹಿತಿ, ಸಮರ್ಪಕ ನೀರು ನಿರ್ವಹಣೆ, ಅಣಬೆ ಬೇಸಾಯ, ಜೇನು ಕೃಷಿ, ಸಮಗ್ರ ಕೀಟ ನಿರ್ವಹಣೆ ಹಾಗೂ ಸಮಗ್ರ ರೋಗ ನಿರ್ವಹಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕಟಾವಿನ ನಂತರ ದವಸ ಧಾನ್ಯಗಳ ಪೀಡೆ ನಿರ್ವಹಣೆ, ಅಜೋಲಾ ಉತ್ಪಾದನೆ ಮತ್ತಿತರೆ ವಿಷಯಗಳ ಮಾಹಿತಿ ತಿಳಿಸಲಾಗುವುದು ಎಂದರು.

ಎಪಿಎಂಸಿ ಮಾಜಿ ಜಿಲ್ಲಾಧ್ಯಕ್ಷ ಚಕ್ರಬಾವಿ ಮಾರೇಗೌಡ ಮಾತನಾಡಿ, ವಿಶ್ವವಿದ್ಯಾನಿಲಯ ತಮ್ಮ ಗ್ರಾಮವನ್ನು ಆಯ್ಕೆ ಮಾಡಿರುವುದು ಸಂತಸದ ವಿಚಾರ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಗ್ರಾಮಕ್ಕೆ ನಿರಂತರ ಭೇಟಿ ನೀಡಿರುವುದರಿಂದ ವಿಶ್ವವಿದ್ಯಾಲಯದ ಜೊತೆಗೆ ನಿಕಟ ಸಂಪರ್ಕ ಹೊಂದಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಮುಖಂಡ ಯೋಗನರಸಿಂಹಯ್ಯ, ಟಿಎಪಿಸಿಎಸ್ ಮಾಜಿ ಅಧ್ಯಕ್ಷ ರವೀಂದ್ರ, ಚಕ್ರಬಾವಿ ಡೈರಿ ಅಧ್ಯಕ್ಷ ಸಿ.ಕುಮಾರ್, ಚಕ್ರಬಾವಿ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯದರ್ಶಿ ಬೈರೇಶ್, ಬಸವರಾಜು, ಶಶಿಕಲಾ, ಜಗದೀಶ್ ಶಿಕ್ಷಕ ರವೀಂದ್ರ, ಶೈಲೇಶ್, ಟೈಲರ್ ಗಿರೀಶ್, ಮಾರ್ಗದರ್ಶಕರು ಡಾ.ಮುತ್ತಪ್ಪ ಚಿಗಡೊಳ್ಳಿ, ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಿಂಚನ, ಶರಣ್, ತೇಜೀವ್, ಯಶಸ್ವಿನಿ, ವರ್ಷ, ಸುಮಿತ್, ಸ್ಫೂರ್ತಿ ಸೇರಿದಂತೆ ಚಕ್ರಬಾವಿ, ಸೀಗೆಕುಪ್ಪೆ, ಮಲ್ಲಯ್ಯನಪಾಳ್ಯ, ಅರಳುಕುಪ್ಪೆ ಗ್ರಾಮಸ್ಥರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯ ಚಕ್ರಬಾವಿ ಜಂಗಮ ಮಠದಲ್ಲಿ ಬಿಎಸ್ಸಿ ಕೃಷಿ ಪದವಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭಾವ ಕಾರ್ಯಕ್ರಯಕ್ಕೆ ಚಾಲನೆ ನೀಡಲಾಯಿತು.