ಗ್ರಾಮೀಣ ಕರಕುಶಲ ಕಲೆಗಳನ್ನು ಉಳಿಸಿ ಬೆಳೆಸಬೇಕು: ಸುಭಾಷಿಣಿ

| Published : Oct 29 2024, 01:08 AM IST

ಸಾರಾಂಶ

ಶೃಂಗೇರಿ, ನಮ್ಮ ಪೂರ್ವಿಕರಿಂದ ತಲೆ ತಲಾಂತರದಿಂದ ಬೆಳೆದು ಬಂದಿರುವ ಗ್ರಾಮೀಣ ಗೃಹಕೈಗಾರಿಕೆ, ಕರಕುಶಲ ಕೈಗಾರಿಕೆ ಕಲೆ ಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೆಣಸೆ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಹೇಳಿದರು.

ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮೆಣಸೆ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ನಮ್ಮ ಪೂರ್ವಿಕರಿಂದ ತಲೆ ತಲಾಂತರದಿಂದ ಬೆಳೆದು ಬಂದಿರುವ ಗ್ರಾಮೀಣ ಗೃಹಕೈಗಾರಿಕೆ, ಕರಕುಶಲ ಕೈಗಾರಿಕೆ ಕಲೆ ಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೆಣಸೆ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ಸುಭಾಷಿಣಿ ಹೇಳಿದರು.

ತಾಲೂಕಿನ ಮೆಣಸೆ ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಮೆಣಸೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಾಸಿಕ ಸಂತೆ, ಮೇಳ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂತಹ ಸಂತೆಗಳು ನಡೆಯುವುದರಿಂದ ಸ್ವಸಹಾಯ ಸಂಘದ ಮಹಿಳೆಯರು ತಾವು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ.

ಕರಕುಶಲ ಕೈಗಾರಿಕೆ, ಗೃಹಕೈಗಾರಿಕೆಗಳಿಂದ ವಸ್ತುಗಳನ್ನು ತಯಾರಿಸಿ ಜೀವನೋಪಾಯಕ್ಕಾಗಿ ಅಗತ್ಯವಾಗುವಷ್ಟು ಆದಾಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಡು ಉತ್ಪನ್ನಗಳಿಂದ ತಯಾರಿಸಿದ ಹುಳಿ, ಮಾವಿನ ಮಿಡಿ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಸಿಹಿ ಪದಾರ್ಥಗಳು, ಸಾಂಬಾರು ಪದಾರ್ಥಗಳು, ಅಲ್ಲದೇ ಮಗ್ಗ, ನೆಯ್ಗೆ ಬಟ್ಟೆಗಳು, ಬಿದಿರು, ಬೆತ್ತಗಳಿಂದ ತಯಾರಿಸಿದ ಬುಟ್ಟಿ ಇತರೆ ವಸ್ತುಗಳು ಗ್ರಾಮೀಣ ಶೈಲಿಯ ಉತ್ಪನ್ನಗಳು ಇಂದಿಗೂ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದರು.

ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಇಂತಹ ಮಾಸಿಕ ಸಂತೆಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಗಳಲ್ಲಿ ಪಾಲ್ಗೊಳ್ಳಬೇಕು. ಗ್ರಾಮೀಣ ಕರಕುಶಲ, ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಜೊತೆಗೆ ಅನೇಕ ಕುಟಂಬಗಳಿಗೆ ಜೀವನಾಧಾರಕ್ಕೂ ಆರ್ಥಿಕ ಸಹಾಯ ಮಾಡಿದಂತಾಗುತ್ತದೆ.ಇದು ಒಳ್ಳೆಯ ಕೆಲಸವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೆಣಸೆ ಸಂಜೀವಿನಿ ಗ್ರಾಮಪಂಚಾಯಿತಿ ಮಟ್ಟದ ಒಕ್ಕೂಟದ ಉಪಾಧ್ಯಕ್ಷೆ ಶಾಂತಾ, ಕಾರ್ಯದರ್ಶಿ ಪ್ರಮೀಳಾ, ಖಜಾಂಚಿ ಸುನಿತಾ, ಭಾರತೀ, ಗ್ರಾಪಂ ಉಪಾಧ್ಯಕ್ಷೆ ಭಾಗ್ಯ, ಪಿಡಿಒ ನಾಗಭೂಷಣ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ, ಕೃಷಿಯೇತರ ತಾಲೂಕು ವ್ಯವಸ್ಥಾಪಕಿ ಚೈತ್ರಾ, ಸುಪ್ರಿತಾ, ಪವಿತ್ರಾ, ಸೌಮ್ಯ, ಸೊಸೈಟಿ ಸದಸ್ಯರಾದ ನಟರಾಜ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

28 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಹಾಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎದುರು ಆಯೋಜಿಸಲಾಗಿದ್ದ ಮೆಣಸೆ ಸಂಜೀವಿನಿ ಗ್ರಾಮಪಂಚಾಯಿತಿ ಮಟ್ಟದ ಒಕ್ಕೂಟದ ಮಾಸಿಕ ಸಂತೆಯನ್ನು ಶುಭಾಷಿನಿ ಉದ್ಘಾಟಿಸಿದರು. ಸಂಧ್ಯಾ, ಭಾಗ್ಯ, ಸುಪ್ರಿತಾ, ಚೈತ್ರ ಮತ್ತಿತರರು ಇದ್ದರು.