ಸಾರಾಂಶ
ಅವರು ಶ್ರೀ ಮಹಾವೀರ ಕಾಲೇಜು, ಮೂಡಬಿದಿರೆ ಇದರ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಾಹೆ ಸಹಯೋಗದೊಂದಿಗೆ ಪತ್ರಕರ್ತರಿಗಾಗಿ ‘ಮೊಬೈಲ್ ಪತ್ರಿಕೋದ್ಯಮದ ನೂತನ ವಿಧಾನಗಳು’ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಗ್ರಾಮೀಣ ಜನಜೀವನವನ್ನು ಸುದ್ದಿ ಜಗತ್ತಿಗೆ ಕಟ್ಟಿಕೊಡುವ ಗ್ರಾಮೀಣ ಪತ್ರಕರ್ತರು ಸುದ್ದಿ ಜಾಲದ ಜೀವನಾಡಿಗಳು ಎಂದು ಮಣಿಪಾಲ ಸಂವಹನ ಸಂಸ್ಥೆ ನಿರ್ದೇಶಕಿ ಡಾ. ಶುಭ ಹೆಚ್.ಎಸ್. ಹೇಳಿದರು.ಅವರು ಶ್ರೀ ಮಹಾವೀರ ಕಾಲೇಜು, ಮೂಡಬಿದಿರೆ ಇದರ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಾಹೆ ಸಹಯೋಗದೊಂದಿಗೆ ಪತ್ರಕರ್ತರಿಗಾಗಿ ‘ಮೊಬೈಲ್ ಪತ್ರಿಕೋದ್ಯಮದ ನೂತನ ವಿಧಾನಗಳು’ ವಿಷಯದ ಬಗ್ಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಂತಹ ದೇಶದಲ್ಲಿ ಗ್ರಾಮಿಣಾ ಪ್ರದೇಶದ ಮಾಹಿತಿ ನೀಡುತ್ತಿರುವ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ತರವಾದುದು. ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗಾಗಿ ಪತ್ರಕರ್ತರ ಕೊಡುಗೆ ಶ್ಲಾಘನೀಯವಾದುದಾಗಿದೆ ಎಂದವರು ಹೇಳಿದರು.ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿಗಳಾದ ಧನಂಜಯ ಮೂಡುಬಿದಿರೆ, ಪ್ರಸನ್ನ ಹೆಗ್ಡೆ, ಹೆಚ್ ಮಹಮ್ಮದ್ ವೇಣೂರು, ಜೈಕರ್ ತಾಕೊಡೆ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.
ಮಣಿಪಾಲ ಸಂವಹನ ಸಂಸ್ಥೆಯ ರಘುವೀರ್ ಬದ್ರಿನಾಥ್ ಮತ್ತು ಮೋಹನ ದಾಸ್ ಪೈ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಡಿ. ಸಾಮ್ರಾಜ್ಯ, ಪದವಿ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ರಮೇಶ್ ಭಟ್, ಹಳೆ ವಿದ್ಯಾರ್ಥಿ ಸಂಜಯ ಭಟ್, ಸಂಯೋಜಕ ಧನಂಜಯ ಮೂಡುಬಿದಿರೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು. ಬಿ.ಎ ವಿದ್ಯಾರ್ಥಿಗಳಾದ ಕಿರಣ್ ಮತ್ತು ರಕ್ಷಿತಾ ಅತಿಥಿ ಪರಿಚಯ ಮಾಡಿದರು. ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.