ಸಾರಾಂಶ
ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳು ಕಡಿಮೆ ದರದಲ್ಲಿ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಬಡ ಜನರಿಗೆ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎಂದು ಎಲ್‌ಜಿ ಫೌಂಡೇಷನ್ ಅದ್ಯಕ್ಷ ಲಕ್ಷ್ಮಣಗೌಡ ತಿಳಿಸಿದರು. ಹೊಸಕೋಟೆಯಲ್ಲಿ ಡಯಾಲಿಸಿಸ್ ಚಿಕಿತ್ಸೆಯ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಡಯಾಲಿಸಿಸ್ ಚಿಕಿತ್ಸೆಯ 3 ಲಕ್ಷ ರು. ಚೆಕ್ ಹಸ್ತಾಂತರ ಕನ್ನಡಪ್ರಭ ವಾರ್ತೆ ಹೊಸಕೋಟೆ
ನಮ್ಮ ದೇಶವು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳು ಕಡಿಮೆ ದರದಲ್ಲಿ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಬಡ ಜನರಿಗೆ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎಂದು ಎಲ್‌ಜಿ ಫೌಂಡೇಷನ್ ಅದ್ಯಕ್ಷ ಲಕ್ಷ್ಮಣಗೌಡ ತಿಳಿಸಿದರು.ನಗರದಲ್ಲಿ ಕೆಂಪಣ್ಣ ನರ್ಸಿಂಗ್ ಹೋಂನಲ್ಲಿ ರೋಟರಿ ಹೊಸಕೋಟೆ ಸೆಂಟ್ರಲ್, ಎಲ್‌ಜಿ ಫೌಂಡೇಷನ್ ಸಹಯೊಗದೊಂದಿಗೆ ಡಯಾಲಿಸಿಸ್ ಚಿಕಿತ್ಸೆಯ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಬೆಂಗಳೂರು ಕಿಡ್ನಿ ಫೌಂಡೇಷನ್ ರವರು ಅಳವಡಿಸಿರುವ ೩ ಡಯಾಲಿಸಿಸ್ ಯಂತ್ರಗಳಲ್ಲಿ ಪ್ರತಿ ದಿನ 15 ಜನ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ರೋಗಿಯು ಒಂದು ಬಾರಿ ಡಯಾಲಿಸಿಸ್ ಚಿಕಿತ್ಸೆ ಪಡೆಯಲು 1250 ರು. ವೆಚ್ಚವಾಗುತ್ತದೆ. ಈ ಚಿಕಿತ್ಸೆಗೆ ಒಳಪಡುವ ರೋಗಿಗಳ ಒಂದು ಬಾರಿಯ ಡಯಾಲಿಸಿಸ್ ಚಿಕಿತ್ಸೆಗೆ 250 ರು. ಗಳನ್ನು ಎಲ್ ಜಿ ಫೌಂಡೇಷನ್ ನಿಂದ ರೊಟರಿ ಸಹಯೋಗದಲ್ಲಿ ಪಾವತಿ ಮಾಡಲಾಗುತ್ತಿದೆ. ಪ್ರತಿನಿತ್ಯ ಇಲ್ಲಿ ಚಿಕಿತ್ಸೆ ಪಡೆಯುವ 15 ಮಂದಿ ರೋಗಿಗಳ ಚಿಕಿತ್ಸಾ ವೆಚ್ಚ ೩,೭೫೦ ರು. ಗಳಾಗಿರುತ್ತವೆ. ಇದರ ಒಂದು ವರ್ಷದ ಸಂಪೂರ್ಣ ವೆಚ್ಚದ ಮೊತ್ತವನ್ನು ರೋಟರಿ ಹೊಸಕೋಟೆ ಸೆಂಟ್ರಲ್ ಸಹಯೋಗದಲ್ಲಿ ಎಲ್ ಜಿ ಫೌಂಡೇಷನ್ ನಿಂದ ಪ್ರತಿ ವರ್ಷ ಭರಿಸುತ್ತಿದ್ದೇವೆ ಎಂದರು.ರೋಟರಿ ಜೊನಲ್ ಗವರ್ನರ್ ಡಿ.ಎಸ್.ರಾಜ್ ಕುಮಾರ್ ಮಾತನಾಡಿ, ರೋಟರಿ ಕ್ಲಬ್‌ನ ಸಹಯೋಗದೊಂದಿಗೆ ಎಲ್.ಜಿ. ಫೌಂಡೇಶನ್ ಮಾಡುತ್ತಿರುವ ಈ ಕಾರ್ಯ ಗ್ರಾಮೀಣ ಭಾಗದ ಬಡಜನತೆಗೆ ಬಹಳ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ದೊರೆಯುವಂತಾಗಲಿ ಎಂದು ತಿಳಿಸಿದರು.ರೋಟರಿ ಜಿಲ್ಲಾ ಪಾಲಕ ಸತೀಶ್ ಮಾಧವನ್ ಮಾತನಾಡಿ, ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಲಕ್ಷ್ಮಣ್ ಗೌಡ ಅವರು ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ನಿರ್ದೇಶಕಿ ಹರಿಣಿ, ಬಿಕೆಎಫ್ ಫೌಂಡೇಷನ್ ಸಂಸ್ಥಾಪಕ ಶ್ರೀನಿವಾಸ್, ನಿರ್ದೇಶಕ ಸುಧೀರ್, ಮೋಹನ್ ಶೆಣೈ, ವಸಶಚಿತ್ ಚಂದ್ರ, ರೋಟರಿ ತಾಲೂಕು ಕಮ್ಮಸಂದ್ರ ಮುನಿರಾಜು, ಕಾರ್ಯದರ್ಶಿ ಬಚ್ಚಣ್ಣ, ಕೆಂಪಣ್ಣ ಆಸ್ಪತ್ರೆ ಮುಖ್ಯಸ್ಥ ಸಾಯಿಪ್ರಸಾದ್, ರೋಟರಿ ತಾಲೂಕು ಸದಸ್ಯ ಸೋಮಶೇಖರ್ ಸೇರಿ ಎಲ್ಲಾ ಸದಸ್ಯರು ಹಾಜರಿದ್ದರು.