ಗ್ರಾಮೀಣ ಜನರು ಆರೋಗ್ಯ ಕಾಪಾಡಿಕೊಳ್ಳಬೇಕು: ಕೆ.ಟಿ.ಹನುಮಂತು

| Published : Nov 25 2025, 01:45 AM IST

ಸಾರಾಂಶ

ಕಾಯಿಲೆಗಳಿಗೆ ಬಡಜನರು ಆರ್ಥಿಕವಾಗಿ ಹಣ ಹೊಂದಿಸಿ ಚಿಕಿತ್ಸೆ ಪಡೆಯಲು ಕಷ್ಟವಾಗಲಿದೆ. ಗ್ರಾಮೀಣ ಜನರು ಉಚಿತ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ರಾಮೀಣ ಜನರು ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೃಷಿಕ್ ಅಲೆಯನ್ಸ್ ಕ್ಲಬ್‌ನ ಅಧ್ಯಕ್ಷ ಕೆ.ಟಿ.ಹನುಮಂತು ಸಲಹೆ ನೀಡಿದರು.

ತಾಲೂಕಿನ ಮಾದಹಳ್ಳಿಯಲ್ಲಿ ಅಸೋಸಿಯೇಷನ್ ಅಫ್ ಆಲಯನ್ಸ್ ಕ್ಲಬ್, ಇಂಟರ್ ನ್ಯಾಷನಲ್ ಮಂಡ್ಯ, ಅಲಯನ್ಸ್ ಕ್ಲಬ್ ಮಳವಳ್ಳಿ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ‘ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾಯಿಲೆಗಳಿಗೆ ಬಡಜನರು ಆರ್ಥಿಕವಾಗಿ ಹಣ ಹೊಂದಿಸಿ ಚಿಕಿತ್ಸೆ ಪಡೆಯಲು ಕಷ್ಟವಾಗಲಿದೆ. ಗ್ರಾಮೀಣ ಜನರು ಉಚಿತ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನೂರಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಶಿಬಿರಕ್ಕೆ ಆಗಮಿಸಿ ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಪರೀಕ್ಷೆ, ಇಸಿಜಿ ಪರೀಕ್ಷೆ ಮತ್ತು ಔಷಧಗಳನ್ನು ಪಡೆದುಕೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ತಜ್ಞ ವೈದ್ಯರಾದ ಡಾ.ಹೇಮಾ, ಡಾ.ಚಂದ್ರೇಗೌಡ, ಡಾ.ಹರೀಶ್, ಡಾ.ಯೋಗೇಂದ್ರಕುಮಾರ್, ಡಾ.ಸೋನಾಲಿ, ಡಾ.ತೇಜಸ್ ಜಯಶಂಕರ್, ಡಾ.ಶಶಿಕುಮಾರ್ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷೆ ನಡೆಸಿದರು.

ಈ ವೇಳೆ ಅಲಯನ್ಸ್ ಜಿಲ್ಲಾ ಗೌರ್ನರ್ ಎಚ್.ಮಾದೇಗೌಡ, ಆಲಯನ್ಸ್ ರವೀಂದ್ರ, ಮರಿಸ್ವಾಮಿ, ಶಿವನಂಜಯ್ಯ, ಡಾ.ತೇಜಸ್, ಡಾ.ಭೂಮಿಕಾ, ಡಾ.ಮನೋಜ್, ಡಾ.ಪೂರ್ಣಿಮ, ಡಾ.ವಿನಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇಂದಿನಿಂದ ವಾರ್ಷಿಕ ಎನ್.ಎಸ್.ಎಸ್ ಶಿಬಿರ

ಮಂಡ್ಯ: ತಾಲೂಕಿನ ಜೀಗುಂಡಿಪಟ್ಟಣ ಗ್ರಾಮದಲ್ಲಿ ನ.25 ರಿಂದ ಡಿ.1ರವರೆಗೆ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಹೊರಾವರಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ವಾರ್ಷಿಕ ಎನ್.ಎಸ್.ಎಸ್ ಶಿಬಿರವನ್ನು ಆರೋಗ್ಯಯುತ ಭಾರತಕ್ಕೆ ಆರೋಗ್ಯಯುತ ಯುವಕರು ಎಂಬ ಧ್ಯೆಯ ವಾಕ್ಯದಡಿ ಆಯೋಜಿಸಲಾಗಿದೆ. ಶಿಬಿರವನ್ನು .25 ರಂದು ಮಧ್ಯಾಹ್ನ 2.30ಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಉದ್ಘಾಟಿಸಲಿದ್ದಾರೆ. ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ.ವಿಷ್ಣು ಎಂ.ಶಿಂದೆ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ನಾತಕೋತ್ತರ ಕೇಂದ್ರದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗೀತಾಮಣಿ ಪಿ.ಎನ್ ಉಪಸ್ಥಿತಿ ವಹಿಸಲಿದ್ದಾರೆ. ಅತಿಥಿಗಳಾಗಿ ಬಿ.ಹೊಸೂರು ಗ್ರಾಪಂಂ ಅಧ್ಯಕ್ಷೆ ಶೋಭಾ ಎಂ. ಎಸ್, ಮೈಸೂರು ವಿ.ವಿ ನಿವೃತ್ತ ಪ್ರಾಧ್ಯಾಪಕ ಡಾ.ಬಸವಯ್ಯ ಸಿ, ಆರ್ ಎಪಿಸಿಎಂಎಸ್ ಉಪಾಧ್ಯಕ್ಷ ಮಹೇಶ್ ಜೆ.ಪಿ, ನಿವೃತ್ತ ಸಹಾಯಕ ಸಬ್ ಇನ್ಸ್ ಪೆಕ್ಟರ್ ಚಿಕ್ಕಪುಟ್ಟಯ್ಯ ಮತ್ತು ಸುಂದ್ರಯ್ಯ ಜೀಗುಂಡಿಪಟ್ಟಣ ಭಾಗವಹಿಸಲಿದ್ದಾರೆ.

ತಿಥಿಗಳಾಗಿ ಬಿ.ಹೊಸೂರು ಗ್ರಾಪಂಂ ಅಧ್ಯಕ್ಷೆ ಶೋಭಾ ಎಂ. ಎಸ್, ಮೈಸೂರು ವಿ.ವಿ ನಿವೃತ್ತ ಪ್ರಾಧ್ಯಾಪಕ ಡಾ.ಬಸವಯ್ಯ ಸಿ, ಆರ್ ಎಪಿಸಿಎಂಎಸ್ ಉಪಾಧ್ಯಕ್ಷ ಮಹೇಶ್ ಜೆ.ಪಿ, ನಿವೃತ್ತ ಸಹಾಯಕ ಸಬ್ ಇನ್ಸ್ ಪೆಕ್ಟರ್ ಚಿಕ್ಕಪುಟ್ಟಯ್ಯ ಮತ್ತು ಸುಂದ್ರಯ್ಯ ಜೀಗುಂಡಿಪಟ್ಟಣ ಭಾಗವಹಿಸಲಿದ್ದಾರೆ.