ಶ್ರೀಮಂತ ಸಂಸ್ಕೃತಿ ಉಳಿಸಿ, ಬೆಳೆಸುವ ಗ್ರಾಮೀಣಯರು

| Published : May 12 2024, 01:20 AM IST

ಶ್ರೀಮಂತ ಸಂಸ್ಕೃತಿ ಉಳಿಸಿ, ಬೆಳೆಸುವ ಗ್ರಾಮೀಣಯರು
Share this Article
  • FB
  • TW
  • Linkdin
  • Email

ಸಾರಾಂಶ

ಮುರಘೇಂದ್ರ ಶಿವಯೋಗಿಗಳ ಜ್ಣಾನ ಮಂದಿರ ಉದ್ಘಾಟನೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದು, ಸಂಸ್ಕೃತಿ ಉಳಿಸುವವರು ಗ್ರಾಮೀಣರು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಜ್ಞಾನಕ್ಕಿಂತ ಶ್ರೇಷ್ಠವಾದ ಸಂಪತ್ತು ಬೇರೆ ಇಲ್ಲ. ಜ್ಞಾನದಿಂದ ಮಾನಸಿಕ ನೆಮ್ಮದಿ, ಉತ್ತಮ್ಮ ಆರೋಗ್ಯ, ಭಾವಕ್ಯತೆಯ ಭಾನೆಗಳನ್ನು ಬೆಸೆಯುವ ಮೂಲ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಮುರಘೇಂದ್ರ ಶಿವಯೋಗಿಗಳ ಜ್ಣಾನ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸುತ್ತಿರುವವರೇ ಗ್ರಾಮೀಣ ಜನರು ಎಂದರು.

ಅಥಣಿ ಮುರುಘೇಂದ್ರ ಶಿವಯೋಗಿಗಳು ಬಸವಣ್ಣವರ ವಚನ ಸಾಹಿತ್ಯ ಬಿಟ್ಟು ಬೇರೆ ಯಾವ ಸಾಹಿತ್ಯ ಓದಲಿಲ್ಲ. ಬಸವಣ್ಣವರನ್ನು ಅಪ್ಪ ಎಂದು ಕರೆದರು. ಲಿಂಗಪ್ರಜೆಯ ಮೂಲಕ ಶಿವಯೋಗದ ಸಾಧನೆ ಮಾಡಿದ ಮಹಾತಪಸ್ವಿಗಳು. ನಾಮ ಸ್ಮರಣೆಯೇ ನಮ್ಮ ವ್ಯಕ್ತಿತ್ವ ಬೆಳವಣಿಗೆ ಸಂಜೀವಿನಿಯಾಗಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಅವರು ಯಾವುದೇ ಪ್ರಚಾರ ಬಯಸದೇ ಸಾಮಾಜಿ ಸಮಾನತೆ, ಶೈಕ್ಷಣಿಕ ಪ್ರಗತಿಗೆ, ಬಸವ ತತ್ವ ಮತ್ತು ಶಿವಯೋಗವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಪ್ರಥಮ ಭಾರಿಗೆ ಬಸವ ಜಯಂತಿ ಆಚರಣೆ ತರಲು ಹಿಂದಿನ ಶಕ್ತಿ ಅವರ ಪ್ರೇರಣೆ ಎಂದು ತಿಳಿಸಿದರು.

ಗಚ್ಚಿ ಮಠಾಧ್ಯಕ್ಷ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಮಾರಂಭದಲ್ಲಿ ಜಂಜುರಾವಡದ ಬಸವರಾಜೇಂದ್ರ ಸ್ವಾಮೀಜಿ, ಬಾಬು ಗಲಗಲಿ, ಗುರಪ್ಪ ತೇಲಿ, ಮುರುಗೇಪ್ಪ ಗಲಗಲಿ, ರಾಮನಗೌಡ ಪಾಟೀಲ, ಗೋವಿಂದ ಜಂಬಗಿ, ಶಿವಪಾದ ಅವಟಿ ಉಪಸ್ಥಿತರಿದ್ದರು. ಬಾಬು ಗಲಗಲಿ ಸ್ವಾಗತಿಸಿದರು.