ರಬ್ಬರ್‌ ಮಂಡಳಿಯಿಂದ ಗ್ರಾಮೀಣ ಭಾಗದ ಉಪ ಕೃಷಿಗೆ ಆದ್ಯತೆ: ಸುರೇಶ್‌

| Published : Nov 09 2024, 01:05 AM IST / Updated: Nov 09 2024, 01:06 AM IST

ರಬ್ಬರ್‌ ಮಂಡಳಿಯಿಂದ ಗ್ರಾಮೀಣ ಭಾಗದ ಉಪ ಕೃಷಿಗೆ ಆದ್ಯತೆ: ಸುರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ರಬ್ಬರ ಮಂಡಳಿ ರಬ್ಬರ್ ಬೆಳೆ ಉತ್ತೇಜಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಉಪ ಕೃಷಿಗಳಿಗೂ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.

ಶೆಟ್ಟಿಕೊಪ್ಪದಲ್ಲಿ ರಬ್ಬರ್‌ ಮಂಡಳಿಯ ಆಶ್ರಯದಲ್ಲಿ ಅಣಬೆ ಕೃಷಿ ತರಬೇತಿ ಸಮಾರೋಪ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಬ್ಬರ ಮಂಡಳಿ ರಬ್ಬರ್ ಬೆಳೆ ಉತ್ತೇಜಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಉಪ ಕೃಷಿಗಳಿಗೂ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.

ಗುರುವಾರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಚೈತನ್ಯ ರಬ್ಬರ್ ಬೆಳೆಗಾರರ ಸಮಿತಿ ಹಾಗೂ ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಸಹಭಾಗಿತ್ವ ದಲ್ಲಿ ಎಸ್.ಸಿ. ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ನಡೆದ 3 ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದು ರಬ್ಬರ್ ಬೆಳೆಗೆ ಪೂರಕ ಕೃಷಿಗಳೆಂದರೆ ಅಣಬೆ ಹಾಗೂ ಜೇನು ಸಾಕಾಣಿಕೆ ಕೃಷಿಗಳಾಗಿವೆ. ಇಂತಹ ಪೂರಕ ಕೃಷಿಗಳನ್ನು ಎಸ್.ಸಿ., ಎಸ್ಟಿ ಸಮುದಾಯದವರು ಕೈಗೆತ್ತಿಕೊಂಡು, ಆರ್ಥಿಕವಾಗಿ ಸಧೃಢರಾಗಬೇಕು. ಹೊಸದಾಗಿ ರಬ್ಬರ್ ತೋಟ ಮಾಡುವವರಿಗೆ ರಬ್ಬರ್ ಬೋರ್ಡ ನಿಂದ 1 ಹೆಕ್ಟೇರ್‌ಗೆ 50 ಸಾವಿರ ಸಹಾಯ ಧನ ನೀಡುತ್ತಿದೆ. ಸರ್ಕಾರದ ಈ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಸಮಾಜದ ತುಳಿತಕ್ಕೊಳಗಾದವರನ್ನು ಮೇಲೆತ್ತಿ, ಆರ್ಥಿಕ ಸಬಲೀಕರಣದ ಮೂಲಕ ಮುಖ್ಯವಾಹಿನಿಗೆ ತರುವುದೇ ಸರ್ಕಾರದ ಮುಖ್ಯ ಉದ್ದೇಶ. ಇಂತಹ ಯೋಜನೆಗಳನ್ನು ಎಸ್.ಸಿ. ಎಸ್ಟಿ ಸಮುದಾಯದ ಎಲ್ಲಾ ಜನರೂ ಕೂಡ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ಅಣಬೆ ಕೃಷಿ ಗ್ರಾಮೀಣ ಭಾಗದಲ್ಲಿ ಎಲ್ಲರೂ ಮಾಡಬಹುದಾದ ಕೃಷಿಯಾಗಿದೆ. ಅತ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸುವ ಕೃಷಿ ಇದಾಗಿದೆ. ಇದೊಂದು ಲಾಭದಾಯಕ ಉದ್ದಿಮೆಯಾಗಿದೆ. ಮನೆಯಲ್ಲಿಯೇ ಈ ಅಣಬೆ ಕೃಷಿ ಮಾಡಬಹುದಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚೈತನ್ಯ ರಬ್ಬರ್ ಬೆಳೆಗಾರರ ಸಮಿತಿ ಅಧ್ಯಕ್ಷ ಪ್ರೇಮ್‌ಜೀ ಮಾತನಾಡಿ, ಶಿವಮೊಗ್ಗ ಪ್ರಾದೇಶಿಕ ರಬ್ಬರ ಮಂಡಳಿ ಯಾವುದೇ ಯೋಜನೆ ತಂದರೂ ಅದನ್ನು ಪ್ರಥಮವಾಗಿ ಶೆಟ್ಟಿಕೊಪ್ಪದಲ್ಲಿ ಪ್ರಯೋಗ ಮಾಡುತ್ತಾರೆ. ಈ ಮೂರು ವರ್ಷ ಅವಧಿಯಲ್ಲಿ ಪ್ರತೀ ವರ್ಷ ಕೂಡ ರಬ್ಬರ್ ಮಂಡಳಿ ರಬ್ಬರ್ ಟ್ಯಾಪಿಂಗ್, ಜೇನುಕೃಷಿ, ಅಣಬೆ ಕೃಷಿಯಂತಹ ಉಪಯುಕ್ತ ತರಬೇತಿ ನೀಡಿದೆ. ಗ್ರಾಮೀಣ ಭಾಗದ ಜನರಿಗೆ ಇಂತಹ ತರಬೇತಿಗಳಿಂದ ಬಹಳ ಉಪಯೋಗವಾಗಿದೆ ಎಂದರು.ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ತರಬೇತಿ ಪಡೆದ ಫಲಾನುಭವಿಗಳಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಅಣಬೆ ಕೃಷಿಗೆ ಬೇಕಾದ ಸಲಕರಣೆ ವಿತರಿಸಿದರು. ಇದೇ ಸಂದರ್ಭದಲ್ಲಿ ಕಳೆದ 3 ವರ್ಷಗಳಿಂದ ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಕೇರಳಕ್ಕೆ ವರ್ಗಾವಣೆ ಆದ ಸುರೇಶ್ ಅವರನ್ನು ಚೈತನ್ಯ ರಬ್ಬರ್ ಬೆಳೆಗಾರರ ಸಮಿತಿಯಿಂದ ಸನ್ಮಾನಿಸಲಾಯಿತು. ತರಬೇತಿಯಲ್ಲಿ 25 ಜನ ಎಸ್.ಸಿ. ಎಸ್ಟಿ ಫಲಾನುಭವಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಶೈಲಾಮಹೇಶ್, ರಬ್ಬರ್ ಮಂಡಳಿ ಸಹಾಯಕ ಅಭಿವೃದ್ಧಿ ಅಧಿಕಾರಿ ಡಾ.ಮಧುಸೂದನ್, ಪಿಡಿಓ ವಿಂದ್ಯಾ, ರಬ್ಬರ್ ಬೆಳೆಗಾರರ ಸಮಿತಿ ಕಾರ್ಯದರ್ಶಿ ಎಲ್ದೋ, ತರಬೇತುದಾರ ಆಲ್ದೂರು ರಂಜಿತ್, ಎಂ.ಮಹೇಶ್ ಇದ್ದರು.