ಬರಿಗೈಯಲ್ಲಿ ವಾಪಸ್ ಹೋದ ರಷ್ಯಾ ಮಹಿಳೆ ಗೆಳೆಯ

| Published : Jul 18 2025, 12:45 AM IST

ಸಾರಾಂಶ

ಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಬಾಯ್ ಫ್ರೆಂಡ್ ಇಸ್ರೇಲ್ ನ ಡ್ರೋರ್ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

ಕನ್ನಡಪ್ರಭ ವಾರ್ತೆ, ತುಮಕೂರುಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಬಾಯ್ ಫ್ರೆಂಡ್ ಇಸ್ರೇಲ್ ನ ಡ್ರೋರ್ ಬರಿಗೈಯಲ್ಲಿ ವಾಪಾಸಾಗಿದ್ದಾನೆ.ತುಮಕೂರಿನ ದಿಬ್ಬೂರಿನಲ್ಲಿರುವ ಎಫ್.ಡಿ.ಸಿ (ಫಾರೀನ್ ಡಿಟೆನ್ಷನ್ ಸೆಂಟರ್) ಬಳಿ ಗುರುವಾರ ರಷ್ಯಾ ಮಹಿಳೆ ಹಾಗೂ ಮಾಜಿ ಲಿವಿನ್ ಗೆಳತಿ ನೀನಾ ಕುಟೀನಾ ಮತ್ತು ಇಬ್ಬರು ಮಕ್ಕಳನ್ನು ಭೇಟಿಯಾಗಲು ಇಸ್ರೇಲ್ ನಿಂದ ಬಂದ ಡ್ರೋರ್ ಗೆ ಎಫ್ ಡಿ ಸಿ ಸಿಬ್ಬಂದಿ ಅನುಮತಿ ನಿರಾಕರಿಸಿದ್ದಾರೆ.ಇಸ್ರೇಲ್ ಮೂಲದ ಡ್ರೋರ್ ಗುಹೆಯಲ್ಲಿ ಪತ್ತೆಯಾಗಿದ್ದ ಇಬ್ಬರು ಮಕ್ಕಳು ಹಾಗೂ ಮಾಜಿ ಲಿವಿನ್ ಗೆಳತಿ ರಕ್ಷಣೆ ಸಂಬಂಧ ವಿಚಾರ ತಿಳಿದು ಭಾರತಕ್ಕೆ ಬಂದಿದ್ದ. ಹೀಗೆ ಬಂದ ಆತನಿಗೆ ಮಕ್ಕಳು ತುಮಕೂರಿನಲ್ಲಿರುವ ವಿಚಾರ ತಿಳಿದು ಗುರುವಾರ ಸಂಜೆ ಮಕ್ಕಳನ್ನು ನೋಡಲು ಬಂದಿದ್ದ. ಆದರೆ ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಎಫ್ ಡಿಸಿ ಸಿಬ್ಬಂದಿ ಹೇಳಿದ್ದರಿಂದ ಬರಿಗೈಯಲ್ಲಿ ವಾಪಾಸಾಗಿದ್ದಾನೆ. ಮಕ್ಕಳಿಗೆ ನೀಡಲು ಗಿಫ್ಟ್ ನೊಂದಿಗೆ ಬಂದಿದ್ದ ಡ್ರೋರ್ ಗೆ ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಫಾರಿನ್ ಡಿಟೆನ್ಷನ್ ಸೆಂಟರ್ ನ ಕಿಟಕಿಯಲ್ಲಿ ಮಕ್ಕಳಿಗೆ ಹಾಯ್ ಹೇಳಿ ಬರಿಗೈನಲ್ಲಿ ವಾಪಾಸ್ ಆಗಿದ್ದಾನೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಡ್ರೋರ್ ನೀನಾಳನ್ನು 2017 ರಂದು ಭೇಟಿಯಾಗಿದ್ದನಂತೆ. ಆ ಬಳಿಕ ಇಬ್ಬರು ಲೀವ್ ಇನ್ ರಿಲೇಷನ್ ನಲ್ಲಿ ಇದ್ದರಂತೆ. ನಂತರ ವೈಯಕ್ತಿಕ ಕಾರಣದಿಂದ ಇಬ್ಬರು ದೂರಾಗಿದ್ದರು. ಇಬ್ಬರು ಮಕ್ಕಳು, ತಾಯಿ ಜೊತೆಯೇ ವಾಸವಿದ್ದರಂತೆ. ವೃತ್ತಿಯಲ್ಲಿ ಮ್ಯೂಸಿಷಿನ್ ಆಗಿರುವ ಡ್ರೋರ್ ಇಸ್ರೇಲ್ ನಲ್ಲಿ ವಾಸವಿದ್ದಾನೆ. ವರ್ಷದಲ್ಲಿ 6 ತಿಂಗಳಿಗೊಮ್ಮೆ ಭಾರತಕ್ಕೆ ಬಂದು ಮಕ್ಕಳ ಭೇಟಿ ಮಾಡುತ್ತಿದ್ದನಂತೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಗೋಕರ್ಣದಲ್ಲಿ ನಡೆದ ವಿಚಾರ ತಿಳಿದು ವಕೀಲರ ಮೂಲಕ ಮಕ್ಕಳ ಭೇಟಿಗೆ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಇನ್ನು ಈತನ ಮಾಜಿ ಲಿವಿನ್ ಗೆಳತಿ ನೀನಾಗೆ ಪ್ರಕೃತಿಯ ಮೇಲೆ ಪ್ರೀತಿಯಂತೆ. ಹೀಗಾಗಾಗಿಯೇ ಆಕೆ ಗೋಕರ್ಣದ ಗುಹೆಯಲ್ಲಿ ವಾಸವಿದ್ದಳು ಎನ್ನುತ್ತಾನೆ ಡ್ರೋರ್. ತನ್ನ ಮಕ್ಕಳನ್ನು ತನ್ನ ದೇಶಕ್ಕೆ ಕರೆದೊಯ್ಯುವ ಆಸೆ ಇದ್ದರೂ ಇಸ್ರೇಲ್ ನಲ್ಲಿ ಯುದ್ಧ ಕಾರಣದಿಂದ ಅದು ಸಾಧ್ಯವಾಗಿಲ್ಲ ಎನ್ನುತ್ತಾನೆ.ತಾಯಿ ಜೊತೆ ಮಕ್ಕಳಿರಬೇಕು ಎಂದ ಡ್ರೋರ್ ತಾಯಿ ಒಪ್ಪಿಗೆ ಇಲ್ಲದೆ ಮಕ್ಕಳನ್ನು ಕರೆದೊಯ್ಯುವುದಿಲ್ಲ ಎಂದಿದ್ದಾನೆ. ಅಲ್ಲದೇ ಮಕ್ಕಳ ಭೇಟಿಗೆ ಮತ್ತೆ ಪ್ರಯತ್ನಿಸುವುದಾಗಿ ತಿಳಿಸಿದ್ದಾನೆ.