ಸಾರಾಂಶ
ಸ್ತನ್ಯಪಾನ ಅಮೃತಕ್ಕೆ ಸಮಾನ. ಗರ್ಭಿಣಿ ಪೂರ್ವ ಮತ್ತು ಗರ್ಭಿಣಿಯಲ್ಲಿ ಮತ್ತು ನಂತರ ಸ್ತನ್ಯಪಾನ ಹೆಚ್ಚಿಸುವ ಸಿರಿಧಾನ್ಯ ಮತ್ತು ಸಮತೂಕ ಆಹಾರ ಮುಖ್ಯ
ಕನ್ನಡಪ್ರಭ ವಾರ್ತೆ ಮೈಸೂರು
ಮಗು ಆಗುವ ಮುನ್ನವೇ ಯುವಕ, ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ತನ್ಯಪಾನದ ಬಗ್ಗೆ ಉಪನ್ಯಾಸವನ್ನು ಐಎಪಿ ವತಿಯಿಂದ ನಡೆಸಿದರೆ ಹೆಚ್ಚು ಪ್ರಯೋಜನಕಾರಿ ಆಗುತ್ತದೆ ಎಂದು ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಶಂಕರ್ ಹೇಳಿದರು.ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ತನ್ಯಪಾನ ಅಮೃತಕ್ಕೆ ಸಮಾನ. ಗರ್ಭಿಣಿ ಪೂರ್ವ ಮತ್ತು ಗರ್ಭಿಣಿಯಲ್ಲಿ ಮತ್ತು ನಂತರ ಸ್ತನ್ಯಪಾನ ಹೆಚ್ಚಿಸುವ ಸಿರಿಧಾನ್ಯ ಮತ್ತು ಸಮತೂಕ ಆಹಾರ ಮುಖ್ಯ ಎಂದರು.ಆಸ್ಪತ್ರೆಯ ನಿರ್ದೇಶಕಿ ಹಾಗೂ ಮಕ್ಕಳ ತಜ್ಞೆ ಡಾ.ಎಂ.ಎಸ್. ಕನ್ಯಾ ಮಾತನಾಡಿ, ಸ್ತನ್ಯಪಾನದ ಉಪಯುಕ್ತತೆ ಹಾಗೂ ತಾಯಂದಿರು ಸ್ತನ್ಯಪಾನ ಮಾಡಿಸುವಾಗ ಎದುರಿಸುವ ಹಾಗೂ ತೊಂದರೆಗಳ ನಿವಾರಣೆ ಕುರಿತು ವಿವರಿಸಿದರು.
ಸ್ತ್ರೀ ರೋಗ ತಜ್ಞೆ ಡಾ. ಅಂಜಲಿ ಸಿದ್ದೇಶ್ ಹಾಗೂ ಡಾ. ಗೌರಿ ಹುಕ್ಕೇರಿ ಅವರು ಪೋಷಕರಿಗೆ ಸ್ತನ್ಯಪಾನದ ಬಗ್ಗೆ ಮುಖ್ಯ ಸಲಹೆ ನೀಡಿದರು.ಆಸ್ಪತ್ರೆ ನಿರ್ದೇಶಕಿ ಶೈಲಾ ಶಂಕರ್ ಪದಾಧಿಕಾರಿಗಳಿಗೆ ವಂದನೆ ಸಲ್ಲಿಸಿದರು. ಡಾ. ರಾಜೇಶ್ವರಿ ಮಾದಪ್ಪ ಸ್ವಾಗತಿಸಿದರು. ಐಎಪಿ ಅಧ್ಯಕ್ಷ ಡಾ.ಎಂ.ಆರ್. ಪ್ರಶಾಂತ್, ಕಾರ್ಯದರ್ಶಿ ಡಾ. ಶಂಕರ್ ಪ್ರಸಾದ್ ಮತ್ತು ಖಜಾಂಚಿ ಡಾ. ತೃಪ್ತಿ ಇದ್ದರು.