ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಸೊಸೈಟಿ ಗ್ರಾಹಕ ಸಮಾವೇಶ

| Published : Oct 31 2025, 03:15 AM IST

ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಸೊಸೈಟಿ ಗ್ರಾಹಕ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬೆಳ್ಳಂಪಳ್ಳಿ, ಪೆರ್ಡೂರು, ಹಿರಿಯಡ್ಕ ಶಾಖೆಗಳ ಜಂಟಿ ಆಶ್ರಯದಲ್ಲಿ ಸದಸ್ಯ-ಗ್ರಾಹಕ ಸಮಾವೇಶ ಕಾರ್ಯಕ್ರಮ ಪೆರ್ಡೂರಿನ ಶ್ರೀ ರಾಮ ಮಂದಿರದಲ್ಲಿ ನೆರವೇರಿತು.

ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬೆಳ್ಳಂಪಳ್ಳಿ, ಪೆರ್ಡೂರು, ಹಿರಿಯಡ್ಕ ಶಾಖೆಗಳ ಜಂಟಿ ಆಶ್ರಯದಲ್ಲಿ ಸದಸ್ಯ-ಗ್ರಾಹಕ ಸಮಾವೇಶ ಕಾರ್ಯಕ್ರಮ ಪೆರ್ಡೂರಿನ ಶ್ರೀ ರಾಮ ಮಂದಿರದಲ್ಲಿ ನೆರವೇರಿತು.

ಪೆರ್ಡೂರಿನ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ರಘುಪ್ರಸಾದ ಅಡಿಗ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸಿ, ಉಳಿತಾಯ ಮಾಡುವ ಬಗ್ಗೆ ಸದಸ್ಯ ಗ್ರಾಹಕರಿಗೆ ತಿಳಿಸಿದರು. ಪರ್ಕಳ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಗೋಪಾಲಕೃಷ್ಣ ಆಚಾರ್ಯ ಮಾತನಾಡಿ, ಸದಸ್ಯ ಗ್ರಾಹಕರ ಸಂಬಂಧ ಉತ್ತಮವಾಗಿದ್ದಲ್ಲಿ ಮಾತ್ರ ಸಂಸ್ಥೆಯ ಏಳಿಗೆ ಸಾಧ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ, ಸಾಲದಿಂದ ಋಣಮುಕ್ತರಾಗಿ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ವೆಂಕಟರಮಣ ಆಚಾರ್ಯ, ವಿಶ್ವಕರ್ಮ ಶಿಲ್ಪ ಕಲಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಆಚಾರ್ಯ ಶುಭ ಹಾರೈಸಿದರು.

ಈ ಸಂದರ್ಭ ಬೆಳ್ಳಂಪಳ್ಳಿ, ಪೆರ್ಡೂರು, ಹಿರಿಯಡ್ಕ ಶಾಖೆಗಳ ಒಟ್ಟು ೧೨ ಮಂದಿ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್ಯ, ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ನಿವೃತ್ತ ಶಾಖಾ ವ್ಯವಸ್ಥಾಪಕರಾದ ಗೋವಿಂದರಾಜ ಹೆಗ್ಡೆ, ಸೀತಾರಾಮ ಆಚಾರ್ಯ, ನಾಗರಾಜ ಪ್ರಭು ಬಿ, ಗಂಗಾಧರ ಕೆ.ಬಿ., ವಿಜಯಲಕ್ಷ್ಮೀ, ವಿನೋದ ಎಸ್. ರಾವ್, ರತ್ನಾಕರ ಆಚಾರ್ಯ, ನಿವೃತ್ತ ಸಿಬ್ಬಂದಿಗಳಾದ ಸದಾನಂದ ಆಚಾರ್ಯ, ಪ್ರಭಾಕರ ಆಚಾರ್ಯ, ರಜನಿ ಆರ್. ರಾವ್, ಬೆಳ್ಳಂಪಳ್ಳಿ ಶಾಖಾ ವ್ಯವಸ್ಥಾಪಕ ಮೋಹನದಾಸ ಆಚಾರ್ಯ, ಹಿರಿಯಡ್ಕ ಶಾಖಾ ವ್ಯವಸ್ಥಾಪಕ ರವಿರಾಜ ಆಚಾರ್ಯ ಮತ್ತಿತರರಿದ್ದರು.

ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿದರು.

ಪೆರ್ಡೂರು ಶಾಖಾ ವ್ಯವಸ್ಥಾಪಕ ನವೀನ್ ಕುಮಾರ್ ಸ್ವಾಗತಿಸಿದರು. ಬೆಳ್ಳಂಪಳ್ಳಿ ಶಾಖೆಯ ಕಿರಿಯ ಸಹಾಯಕ ಸುಧೀರ್ ಕುಮಾರ್ ವಂದಿಸಿದರು. ಹಿರಿಯಡ್ಕದ ಕೀರ್ತಿ ಆಚಾರ್ಯ ನಿರೂಪಿಸಿದರು.