ಸಾರಾಂಶ
ಇಳಕಲ್ಲ ನಗರದ ಸರಕಾರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಎಸ್.ಆರ್. ಕಂಠಿ ಶಾಲೆಯಲ್ಲಿ ಮಾಜಿ ಸಿಎಂ ಕಂಠಿ ಜನ್ಮ ದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ರಾಜ್ಯದ ಮಾಜಿ ಮುಖ್ಯಮಂತ್ರಿ ಇಳಕಲ್ಲ ನಗರದ ದಿ.ಎಸ್.ಆರ್. ಕಂಠಿಯವರು ತಮ್ಮ 40 ಕೊಠಡಿಗಳನ್ನು ಹೊಂದಿದ ಅತ್ಯಂತ ದೊಡ್ಡ ಮನೆಯನ್ನು ವಿದ್ಯಾರ್ಥಿನಿಯರ ಕಲಿಕೆಗಾಗಿ ಸರ್ಕಾರಿ ಶಾಲೆಗೆ ಬಿಟ್ಟು ಕೊಟ್ಟ ಮಹಾನ್ ವ್ಯಕ್ತಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಇಳಕಲ್ಲ ನಗರದ ಸರಕಾರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಕಂಠಿಯವರ ಶಾಲೆಯಲ್ಲಿ ಕಂಠಿವರ ಜನ್ಮ ದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನಾಡು ಕಂಡ ದೀಮಂತ ನಾಯಕ. ಎಲ್ಲ ರಾಜಕಾರಿಣಿಗಳಿಗೆ ಎಸ್.ಆರ್. ಕಂಠಿಯವರ ಬದಕು ಆದರ್ಶವಾಗಿದೆ. ಕೆಲವೇ ದಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರೂ ಇಳಕಲ್ಲ ನಗರದ ಅಭಿವೃದ್ಧಿ ಮಾಡಿದ್ದರು. ಅವರು ತಮಗೆ ಒಲಿದುಬಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಮಹಾನ್ ರಾಜಕಾರಿಣಿ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಗಳಾದ ನಿವೃತ್ತ ಶಿಕ್ಷಕ ಬಾಲಕೃಷ್ಣ ಗಜೇಂದ್ರಗಡ ಅವರನ್ನು ಶಾಲೆಯ ಪರವಾಗಿ ಗೌರವಿಸಿ ಸತ್ಕರಿಸಲಾಯಿತು.ಸಮಾರಂಭದಲ್ಲಿ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರಶಾಂತ ಹಂಚಾಟೆ, ಮಹಾಂತೇಶ ಗೋರಜನಾಳ, ವೃಶಾಲಿ ಘಂಟಿ, ಮುತಣ್ಣ ಬೆಂಗಳೂರ, ಬಸವರಾಜ ಸೂಡಿ, ರಾಜು ಅಂಗಡಿ, ಮಲ್ಲಿಕಾರ್ಜುನ ಸೂಳಿಭಾವಿ, ಶೋಧನ ಹಂಚಾಟೆ, ಅರುಣಾ ಕೊಪ್ಪಳ, ಸಾವಿತ್ರಿ ನಾಲವಾಡದ, ಸಿದ್ದಮ್ಮ ಕಲ್ಗುಡಿ ಇತರರು ಇದ್ದರು.
ಶ್ವೇತಾ ದೂಪದ ಪ್ರಾರ್ಥಿಸಿದರು. ಅನಂತ ದೋತ್ರೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ.ಎಂ. ಹೊರಗಿನಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಬಂಡಿ ನಿರೂಪಿಸಿದರು. ಯಲ್ಲವ್ವ ಚಳಗೇರಿ ವಂದಿಸಿದರು.