ಪುರಸಭೆ ಸಭಾ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ೧೫೭ ನೇ ಜಯಂತಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗುಂಡ್ಲುಪೇಟೆ: ಪುರಸಭೆ ಸಭಾ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ೧೫೭ ನೇ ಜಯಂತಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪುರಸಭೆ ಸಿಬ್ಬಂದಿಗೆ ಮಹಾತ್ಮ ಗಾಂಧೀಜಿ ತತ್ವಾದರ್ಶ ಹಾಗೂ ಸ್ವಚ್ಛತೆ ಮಹತ್ವದ ಕುರಿತು ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಬೋಧಿಸಿದರು.ಮುಖ್ಯಾಧಿಕಾರಿ ಎಸ್.ಶರವಣ ಮಾತನಾಡಿ ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸಿ ಪುರಸಭೆ ಕಸ ಸಾಗಿಸುವ ವಾಹನಕ್ಕೆ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರ ನಿರ್ದೇಶನ ನೀಡುತ್ತಿದ್ದರೂ, ಇಂದಿಗೂ ಶೇ.೫೦ರಷ್ಟು ಜನರು ಇದನ್ನು ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು
ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಹಾಗೂ ಗುಂಡ್ಲುಪೇಟೆ ಪುರಸಭೆ ಅಭಿವೃದ್ಧಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ಪಟ್ಟಣದ ನಾಗರಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.ಸಸಿ ನೆಟ್ಟ ತಹಸೀಲ್ದಾರ್:
ತಹಸೀಲ್ದಾರ್ ಎಂ.ಎಸ್.ತನ್ಮಯ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಜಂಟಿಯಾಗಿ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣಕ್ಕೆ ಚಾಲನೆ ನೀಡಿದರು.ಪರಿಸರ ಎಂಜಿನಿಯರ್ ಮಹೇಶ್,ಹಿರಿಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ,ಪರಮೇಶ್,ಮೇಲ್ವಿಚಾರಕ ಸಿದ್ದರಾಜು,ಮೂರ್ತಿ,ಬಿಲ್ ಕಲೆಕ್ಟರ್‌ಗಳಾದ ಪುಟ್ಟಸ್ವಾಮಿ,ರವಿ,ರಮೇಶ್,ಪೌರಕಾರ್ಮಿಕರು, ಕಚೇರಿ ಸಿಬ್ಬಂದಿ ಹಾಜರಿದ್ದರು.