ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ಗೆ ಸಬ್ಬನಕುಪ್ಪೆ ನಾಗರಾಜು ಅಧ್ಯಕ್ಷ

| Published : Oct 15 2025, 02:06 AM IST

ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ಗೆ ಸಬ್ಬನಕುಪ್ಪೆ ನಾಗರಾಜು ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. 12 ಮಂದಿ ನಿರ್ದೇಶಕರಲ್ಲಿ ಒಮ್ಮತದಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸಬ್ಬನಕುಪ್ಪೆ ಗ್ರಾಮದ ರೈಸ್ ಮಿಲ್ ನಾಗರಾಜು ಹಾಗೂ ಬಸ್ತಿಪರ ಗ್ರಾಮದ ನಾಗರಾಜು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆಯಾದರು.

ಟಿಎಪಿಸಿಎಂಎಸ್‌ನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. 12 ಮಂದಿ ನಿರ್ದೇಶಕರಲ್ಲಿ ಒಮ್ಮತದಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆಮಾಡಲು ಶಾಸಕರು ಒಲವು ತೋರಿದರು.

ನಂತರ ಚುನಾವಣೆಯಲ್ಲಿ ಸಬ್ಬನಕುಪ್ಪೆ ಗ್ರಾಮದ ರೈಸ್ ಮಿಲ್ ನಾಗರಾಜು ಹಾಗೂ ಬಸ್ತಿಪುರ ಗ್ರಾಮದ ನಾಗರಾಜು ಇವರು ಇಬ್ಬರು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಚೇತನಾ ಯಾದವ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಸಹಾಯಕರಾಗಿ ಸಿಡಿ ರವಿ ಇದ್ದರು.

ನೂತನ ಅಧ್ಯಕ್ಷ ನಾಗರಾಜು ಮಾತನಾಡಿ, ಸ್ಥಳೀಯ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ಸಂಘದ ಎಲ್ಲಾ ನಿದೇಶಕರು ನನ್ನನ್ನು ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿದ್ದು, ಎಲ್ಲರ ಸಲಹೆ ಸೂಚನೆ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಹಕಾರ ಸಂಘದ ಮೂಲಕ ಹೊಸ ಹೊಸ ಯೋಜನೆ ತಂದು ರೈತರ ಪರ ಕೆಲಸ ಮಾಡಿ ಸಂಘಕ್ಕೆ ಇನ್ನಷ್ಟು ಆದಾಯ ಬರುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮನ್ಮುಲ್ ನಿದೇಶಕ ಬಿ.ಬೋರೇಗೌಡ, ಪುರಸಭಾ ಪ್ರಭಾರ ಅಧ್ಯಕ್ಷ ನೂತನ ಎಂ.ಎಲ್.ದಿನೇಶ್, ನಿದೇಶಕರಾದ ಎಂ.ನಂದೀಶ್, ತಡಗವಾಡಿ ಯತೀಶ್, ಸಂದೇಶ್, ಕೆ.ಜೆ.ರವಿಶಂಕರ್, ಚಂದ್ರಶೇಖರ್, ವೆಂಕಟರಾಮು, ಶಿವಯ್ಯ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.