ತ್ಯಾಗ ಮನೋಭಾವನೆಯೇ ಲಿಂಗ ಸ್ವರೂಪ: ಗುರುಮಹಾಂತ ಶ್ರೀ

| Published : May 22 2024, 12:50 AM IST

ತ್ಯಾಗ ಮನೋಭಾವನೆಯೇ ಲಿಂಗ ಸ್ವರೂಪ: ಗುರುಮಹಾಂತ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಹುನಗುಂದ: ಪ್ರತಿ ಮನುಷ್ಯನಲ್ಲಿ ಸಹಜವಾದ ಬೇಕು ಬೇಡಿಕೆ, ಹೆಜ್ಜೆ-ಹೆಜ್ಜೆಗೂ ಬಂದೊದಗುವ ಸವಾಲುಗಳನ್ನು ಎದುರಿಸಿ, ನಿತ್ಯ ಲಿಂಗ ಪೂಜೆಯಿಂದ ಹೊರಹೊಮ್ಮುವ ದಿಟ್ಟ ನಿರ್ಧಾರ ತ್ಯಾಗ ಮನೋಭಾವನೆಯೇ ದೇವ ಮತ್ತು ಲಿಂಗ ಸ್ವರೂಪವಾಗುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠ ಹುನಗುಂದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ನಡೆದ ಶರಣ ಮಹೋತ್ಸವದ 4ನೇ ದಿನದ ಅಂಗವಾಗಿ ಬೆಳಗ್ಗೆ ರಂಗೋಲಿ ಮತ್ತು ತಳಿರು ತೋರಣಗಳಿಂದ ಶೃಂಗಾರಗೊಂಡ ನಗರದ ಪ್ರತಿ ಗಲ್ಲಿಗಳಲ್ಲಿ ಶ್ರೀಗಳು ಪಥಸಂಚಲನ ನಡೆಸಿದರು. ಈ ವೇಳೆ ಹೂಗಾರ ಬಡಾವಣೆಯ ನಾಗಬಣ ದೇವಸ್ಥಾನ, ಶಿವ ಬಸಬ ವನ, ಮಹಾಂತನಗರ, ವಿದ್ಯಾನಗರ ಮೂಲಕ ಬಸವ ಮಂಟಪ ತಲುಪಿ ನಂತರ ಸಾಮೂಹಿಕ ಲಿಂಗ ಪೂಜೆ ನೆರವೇರಿಸಿ ಪೂಜೆಯ ವಿಧಿ-ವಿಧಾನ ಮತ್ತು ಅದರಿಂದಾಗುವ ಆರೋಗ್ಯ, ಮನಸ್ಸು, ನೆಮ್ಮದಿ ಭಾಗ್ಯಗಳು ಲಭಿಸುವ ಕುರಿತು ಶ್ರೀಗಳು ವಿವರಿಸಿದರು.ವಿ.ಮ ಕಾಲೇಜು ಪ್ರಾಚಾರ್ಯ ಎಚ್.ಎಸ್.ಬೋಳಿಶಟ್ಟರ, ಉಪನ್ಯಾಸಕಿ ಡಾ.ಶಿವಗಂಗಾ ರಂಜಣಗಿ, ನಿವೃತ್ತ ಶಿಕ್ಷಕ ಮಹಾಂತೇಶ ತೆನಹಳ್ಳಿ, ಶಿವಬಸವ ಅಂಗಡಿ, ಮುತ್ತಕ್ಕ ಭಾವಿಕಟ್ಟಿ, ಎಸ್.ಜಿ.ಎಮ್ಮಿ. ಮಲ್ಲಿಕಾರ್ಜುನ ದರಗಾದ ಸೇರಿದಂತೆ ಬಹುತೇಕ ಭಕ್ತರು ಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸಾಮೂಹಿಕ ಲಿಂಗಧಾರಣೆ ನಡೆಯಿತು. ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ, ಬಸವರಾಜ ಕಡಪಟ್ಟಿ, ಮಹಾಂತೇಶ ಅವಾರಿ, ಅಪ್ಪು ಆಲೂರ, ಮಲ್ಲಣ್ಣ ಹೂಗಾರ, ಮಂಜುನಾಥ ಆಲೂರ, ಯಾಸೀನ್‌ ಗಡೇದ, ಸಿ.ಬಿ.ಸಜ್ಜನ, ಶಿವು ಚಿತ್ತರಗಿ, ರಾಜು ಬಯ್ಯಾಪೂರ, ಸಂಗಣ್ಣ ಚಲವಾದಿ, ಎಸ್.ಆರ್.ನಾಯಕ, ಎಸ್.ಬಿ.ಚಳಗೇರಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.