ದೇಶಕ್ಕಾಗಿ ರಜಪೂತರ ತ್ಯಾಗ ದೊಡ್ಡದು: ಅನ್ನಪೂರ್ಣಸಿಂಗ್‌

| Published : Jun 09 2024, 01:32 AM IST

ದೇಶಕ್ಕಾಗಿ ರಜಪೂತರ ತ್ಯಾಗ ದೊಡ್ಡದು: ಅನ್ನಪೂರ್ಣಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ದೇಶಕ್ಕೆ ಪ್ರತಿಯೊಬ್ಬ ರಜಪೂತ ಅಂದು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದು ದೊಡ್ಡ ಇತಿಹಾಸ ಎಂದು ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಸದಸ್ಯೆ ಅನ್ನಪೂರ್ಣಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಹಿಂದು ರಾಷ್ಟ್ರ ಭಾರತದಲ್ಲಿ ಧೈರ್ಯ, ನಿಷ್ಠೆ, ಆತ್ಮ ಗೌರವ, ದೈಹಿಕ ಶಕ್ತಿ, ಶ್ರಮಜೀವಿಯ ಗುಣಗಳನ್ನು ಹೊಂದಿವವರೇ ರಜಪೂತರು. ದೇಶಕ್ಕಾಗಿ ರಜಪೂತರ ತ್ಯಾಗ ಬಹುದೊಡ್ಡದು ಎಂದು ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ರಾಷ್ಟ್ರೀಯ ಸದಸ್ಯೆ ಅನ್ನಪೂರ್ಣಸಿಂಗ್ ಹೇಳಿದರು.

ಇಲ್ಲಿನ ರೈಲು ನಿಲ್ದಾಣ ಮಾರ್ಗದ ‘ಮಹಾರಾಣಾ ಪ್ರತಾಪಸಿಂಗ್ ವೃತ್ತದಲ್ಲಿ ಮಹಾರಾಣಾ ಪ್ರತಾಪಸಿಂಗ್‌'''' ಜಯಂತಿ ಅಂಗವಾಗಿ ವೃತ್ತದ ನಾಮಫಲಕಕ್ಕೆ ಶನಿವಾರ ಪೂಜೆ ಸಲ್ಲಿಸಿ, ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.

ಈ ದೇಶಕ್ಕೆ ಪ್ರತಿಯೊಬ್ಬ ರಜಪೂತ ಅಂದು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡಿದ್ದು ದೊಡ್ಡ ಇತಿಹಾಸ. ಇಂಥ ಸಮಾಜ ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಉತ್ತರ ಭಾರತದಲ್ಲಿ ರಜಪೂತರಿಗೆ ಬಹುದೊಡ್ಡ ಗೌರವ. ಈ ಹಿಂದೆ ಭಾರತಕ್ಕೆ ದಂಡೆತ್ತಿ ಬಂದ ಅಕ್ಬರ್‌ನ ವಿರುದ್ಧ ಹೋರಾಟ ನಡೆಸಿ ಇಲ್ಲಿನ ಹಿಂದೂಗಳನ್ನು ರಕ್ಷಿಸಿದ ಶೂರ ಬಲಾಢ್ಯ ರಾಜ ಎಂದರೆ ಮಹಾರಾಣಾ ಪ್ರತಾಪಸಿಂಗ್. ಅಕ್ಬರ್‌ನನ್ನು ದೊರೆ ಎಂದು ಎಂದಿಗೂ ಒಪ್ಪಿಕೊಳ್ಳದ ರಾಣಾಪ್ರತಾಪಸಿಂಗ್‌ನ ಧೈರ್ಯ ಸಾಹಸದಿಂದಾಗಿ ದೇಶ ರಕ್ಷಣೆಯಾಗಿದೆ. ಅಂಥ ಮಹಾನ್ ನಾಯಕನ ಜಯಂತಿ ಆಚರಿಸುವ ಭಾಗ್ಯ ನಮಗೆ ದೊರೆತಿರುವುದು ನಮ್ಮೆಲ್ಲರ ಭಾಗ್ಯ. ಪ್ರತಿ ಮನೆಯಲ್ಲೂ ಮಹಾರಾಣ ಪ್ರತಾಪಸಿಂಗ್‌ ಅವರಂತ ಧೈರ್ಯಶಾಲಿ ಹುಟ್ಟಬೇಕು. ಮನೆಯಲ್ಲಿ ಪ್ರತಿ ನಿತ್ಯ ಅವರ ಸ್ಮರಣೆ ಮಾಡಬೇಕು. ಜೊತೆಗೆ ರಾಜ್ಯ ಸರಕಾರದ ವತಿಯಿಂದ ಪ್ರತಿ ವರ್ಷ ರಾಣಾ ಪ್ರತಾಪಸಿಂಗ್‌ ಜಯಂತಿ ಆಚರಿಸಬೇಕು ಮತ್ತು ಸರಕಾರ ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯಿಸಿದರು.

ರಜಪೂತ್ ಸಮಾಜದ ತಾಲೂಕು ಅಧ್ಯಕ್ಷ ಟಿ. ಶಂಕರಸಿಂಗ್ ಹಳೇಮನಿ ಮಾತನಾಡಿ, ಮಹಾ ಪುರುಷನ ಜಯಂತಿಯಂದು ಸಮಾಜದ ಮಕ್ಕಳಿಗೆ ಉಪನಯನ ಮಾಡಲಾಗಿದೆ. ನಮ್ಮ ಸಂಪ್ರದಾಯ ಕಾರ್ಯಕ್ರಮಗಳನ್ನು ಸಂಘದಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ. ಯುವಕರು ಸಮಾಜದ ಸಂಘಟನೆಗೆ ಕೈ ಜೋಡಿಸಬೇಕು. ಮುಖ್ಯವಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ಶೈಕ್ಷಣಕ್ಕೆ ಒತ್ತು ನೀಡಿ, ಮುಂದಿನ ದಿನಗಳಲ್ಲಿ ನಾವೆಲ್ಲ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆದು ತೋರಿಸಬೇಕಾಗಿದೆ ಎಂದರು.

ಇಲ್ಲಿನ ಐತಿಹಾಸಿಕ ವೆಂಕಟೇಶ್ವರ ದೇವಾಸ್ಥಾನದಲ್ಲಿ ೨೧ ಮಕ್ಕಳಿಗೆ ಉಪನಯನ ಮಾಡಲಾಯಿತು. ನಂತರ ವೆಂಕಟೇಶ್ವರ ದೇವಾಸ್ಥಾನದಿಂದ ಶರಣಬಸವೇಶ್ವರ ದೇವಾಸ್ಥಾನದ ವರೆಗೆ ಈ ಮಕ್ಕಳ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಹನುಮಾನಸಿಂಗ್ ಕೋಟೆ, ರಜಪೂತ ಮಹಾಸಭಾದ ಗೌರವಾಧ್ಯಕ್ಷ ಎಚ್. ಚಾಂದಸಿಂಗ್ ರಜಪೂತ್, ಉಪಾಧ್ಯಕ್ಷರಾದ ಯಮನಸಿಂಗ್, ಲಕ್ಷ್ಮಣಸಿಂಗ್ ಕನಕಗಿರಿ, ಕಾರ್ಯದರ್ಶಿ ಆರ್. ವೆಂಕಟಸಿಂಗ್, ಹನುಮಂತಿ ಸಿಂಗ್, ಯಮನೂರ್ ಸಿಂಗ್ ಗೋಡಿನಾಳ್, ಜೆ.ಶಂಕರ್‌ಸಿಂಗ್, ಎನ್. ಶಂಕರ್‌ಸಿಂಗ್, ಶಿವರಾಜ ಸಿಂಗ್, ರಾಜಸಿಂಗ್ ಕನಕಗಿರಿ, ದುರ್ಗಾಸಿಂಗ್, ಭೀಮಸಿಂಗ್, ಹನುಮಾನಸಿಂಗ್, ರಾಮಸಿಂಗ ರಾಮನಗರ, ಗೋಡಿನಾಳ್ ಲಕ್ಷ್ಮಣಸಿಂಗ್, ವೆಂಕಟಸಿಂಗ್ ಕಮಲಾಪುರ, ಧರಂಸಿಂಗ್ ಬಂಕಾಪುರ, ಶಿವಸಿಂಗ್ ಹಚ್ಚೋಳ್ಳಿ, ಸಮಾಜದ ಪ್ರಮುಖರು ಇದ್ದರು.