ವನಗೂರು ಸಬ್ಬಮ್ಮ ದೇವಿ ದೇವಾಲಯವು ತಮ್ಮ ಕುಟುಂಬದ ಕುಲದೈವ ಮೂಲಸ್ಥಾನವೆಂಬ ವಿಷಯ ಇತ್ತೀಚೆಗೆ ತಿಳಿದುಬಂದ ಹಿನ್ನೆಲೆಯಲ್ಲಿ, ಗೌಡರು ಕುಟುಂಬದವರೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕರ ಮಾರ್ಗದರ್ಶನದಲ್ಲಿ ವಿಶೇಷ ಅರ್ಚನೆ, ಹೋಮ ಹಾಗೂ ಪೂಜೆಗಳು ನೆರವೇರಿಸಲಾಯಿತು. ದೇವಿಯ ಕೃಪೆ ತಮ್ಮ ಕುಟುಂಬದ ಮೇಲೆ ಸದಾ ಇರಲಿ ಹಾಗೂ ರಾಜ್ಯದ ಜನತೆಗೆ ಶಾಂತಿ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದರು. ಗೌಡರ ಆಗಮನದ ಹಿನ್ನೆಲೆ ದೇವಾಲಯದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ಸ್ಥಳೀಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಅವರು ತಮ್ಮ ಕುಟುಂಬ ಸಮೇತವಾಗಿ ಹಾಸನ ಜಿಲ್ಲೆಯ ವನಗೂರು ಗ್ರಾಮದಲ್ಲಿರುವ ಶ್ರೀ ಸಬ್ಬಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಈ ವೇಳೆ ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಸ್ವಾಗತಿಸಿ ಬರಮಾಡಿಕೊಂಡರು.ವನಗೂರು ಸಬ್ಬಮ್ಮ ದೇವಿ ದೇವಾಲಯವು ತಮ್ಮ ಕುಟುಂಬದ ಕುಲದೈವ ಮೂಲಸ್ಥಾನವೆಂಬ ವಿಷಯ ಇತ್ತೀಚೆಗೆ ತಿಳಿದುಬಂದ ಹಿನ್ನೆಲೆಯಲ್ಲಿ, ಗೌಡರು ಕುಟುಂಬದವರೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಾಲಯದ ಅರ್ಚಕರ ಮಾರ್ಗದರ್ಶನದಲ್ಲಿ ವಿಶೇಷ ಅರ್ಚನೆ, ಹೋಮ ಹಾಗೂ ಪೂಜೆಗಳು ನೆರವೇರಿಸಲಾಯಿತು. ದೇವಿಯ ಕೃಪೆ ತಮ್ಮ ಕುಟುಂಬದ ಮೇಲೆ ಸದಾ ಇರಲಿ ಹಾಗೂ ರಾಜ್ಯದ ಜನತೆಗೆ ಶಾಂತಿ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದರು. ಗೌಡರ ಆಗಮನದ ಹಿನ್ನೆಲೆ ದೇವಾಲಯದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ಸ್ಥಳೀಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಗ್ರಾಮಸ್ಥರು ಹಾಗೂ ಅಭಿಮಾನಿಗಳು ಅವರೊಂದಿಗೆ ಮಾತುಕತೆ ನಡೆಸಿ ಆಶೀರ್ವಾದ ಪಡೆದುಕೊಂಡರು. ದೇವಾಲಯದ ಮಹತ್ವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಂಡ ಅವರು, ಈ ಕ್ಷೇತ್ರವು ಧಾರ್ಮಿಕವಾಗಿ ವಿಶೇಷ ಸ್ಥಾನಮಾನ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಿದರು.